ಲೋಕದರ್ಶನ ವರದಿ
ಬೆಳಗಾವಿ 14: ಕೆಎಲ್ಎಸ್ ಐಎಂಇಆರ್ ಸಂಸ್ಥೆಯ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರವು ಮೆ.10 ರಂದು ಹೊಸ ಉದ್ಯಮ ಅವಕಾಶಗಳ ಗುರುತಿಸುವಿಕೆ ಹಾಗೂ ವಿವರವಾದ ಬಿಸನೆಸ್ ಪ್ಲ್ಯಾನ್ ತಯಾರಿಸುವಿಕೆ ಕುರಿತು ಅಹಮದಾಬಾದ್ನ ಭಾರತೀಯ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ (ಇಡಿಐಐ) ಸಹಯೋಗದಲ್ಲಿ ಒಂದು ದಿನದ ಕಾಯರ್ಾಗಾರ ಹಮ್ಮಿಕೊಂಡಿತ್ತು. ಸಂಸ್ಥೆಯ ಒಂದು ವರ್ಷದ ಡಿಪ್ಲೊಮಾ ಇನ್ ಎಂತ್ರಾಪ್ರೆನ್ಯೂರ್ಶಿಪ್ ಆ್ಯಂಡ್ ಬಿಸಿನೆಸ್ ಮ್ಯಾನೆಜ್ಮೆಂಟ್ (ಡಿಇಬಿಎಂ) ವಿದ್ಯಾಥರ್ಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಯಶಸ್ವಿ ನಾಗ್, ಉದ್ಯಮದ ಸ್ವರೂಪ ಯೋಚಿಸುವಿಕೆ ಹಾಗೂ ಹೊಸ ಉದ್ಯಮಗಳ ಯೋಜನೆಗಳ ಬಗ್ಗೆ ವಿವರಿಸಿದರು. ಇದಲ್ಲದೇ ಬಂಡವಾಳ ಹಾಗೂ ಸಾಲ ಪಡೆಯಲು ಸಿಡ್ಬಿ (ಸಣ್ಣ ಉದ್ಯಮೆಗಳ ಬ್ಯಾಂಕ್ ಆಫ್ ಇಂಡಿಯಾ) ಮಾರ್ಗದಶರ್ಿ ಸೂತ್ರಗಳಿಗೆ ಅನುಗುಣವಾಗಿ ವಿವರವಾದ ಪ್ರಾಜೆಕ್ಟ್ ರಿಪೋಟರ್್ ತಯಾರಿಸುವ ಕುರಿತು ವಿದ್ಯಾರ್ಥಿ ಗಳೊಂದಿಗೆ ಚಚರ್ಿಸಿದರು.
ವಿದ್ಯಾರ್ಥಿ ಗಳು ತಂಡದಲ್ಲಿ ವಿವಿಧ ಉದ್ಯಮ ಅವಕಾಶಗಳು ಹಾಗೂ ವಿವರವಾದ ಪ್ರಾಜೆಕ್ಟ್ ರಿಪೋಟರ್್ ಕರಡು ಪ್ರತಿ ಸಿದ್ಧಪಡಿಸಿದರು.
ಕೆಎಲ್ಎಸ್ ಐಎಂಇಆರ್ ನಿರ್ದೇ ಶಕರಾದ ಡಾ. ಅತುಲ್ ದೇಶಪಾಂಡೆ ಮಾತನಾಡಿ, ವಿದ್ಯಾಥರ್ಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. ಡಾ. ಪೂಣರ್ಿಮಾ ಚರಂತಿಮಠ ಶಿಬಿರವನ್ನು ಸಂಯೋಜಿಸಿದ್ದರು.