ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ

ಬಳ್ಳಾರಿ,ಏ.22: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಹೊಗೆರಹಿತ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು, ಬಳಕೆ ಮತ್ತು ಉಗುಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಆದೇಶ ಹೊರಡಿಸಿದ್ದಾರೆ. 

ಪಾನ್ ಮಸಾಲ ಮತ್ತು ಅಡಿಕೆಯಿಂದ ತಯಾರಾದ ಉತ್ಪನ್ನಗಳು ಹೆಚ್ಚು ಜೊಲ್ಲು ರಸ ಉತ್ಪಾದನೆಯಾಗುವುದರಿಂದ ಕೊವೀಡ್-18 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಕೋಪ್ಟಾ ಆಕ್ಟ್ 2003 ಸೆಕ್ಷನ್-4 ರಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು, ಬಳಕೆ ಮಾಡುವುದು ಮತ್ತು ಉಗುಳುದು ಮತ್ತು ಜಗಿದು ಉಗುಳುವಂತಹ ಉತ್ಪನ್ನಗಳಳಾದ ಬಬಲ್ ಗಮ್ ಹಾಗೂ ಇತರೆ ಪದಾರ್ಥಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸದರಿ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಂಡು ಪ್ರಥಮ ಅಪರಾದಕ್ಕೆ 1 ಸಾವಿರ ರೂ. ಎರಡನೇ ಅಪರಾದಕ್ಕೆ 2 ಸಾವಿರ ರೂ. ಮತ್ತು 3ನೇ ಅಪರಾದಕ್ಕೆ ಕ್ರಿಮಿನಲ್ ಮೊಕದ್ದಮೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಅವರು ಆದೇಶಿಸಿದ್ದಾರೆ.