ಅಕ್ರಮ ಮದ್ಯ ಮಾರಾಟ ನಿಷೇದಕ್ಕೆ ಆಗ್ರಹ

ಲೋಕದರ್ಶನ ವರದಿ

ಕೊಪ್ಪಳ 02: ತಾಲೂಕಿನ ಗಿಣಿಗೇರಿ ಹತ್ತಿರ ಇರುವ ಹೊಸಕನಕಾಪುರ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ವ್ಯಾಪಕವಾಗಿ ನಡೆಯತ್ತಿದ್ದು ಶೀಘ್ರ ನಿಲುಗಡೆಗೊಳಿಸಬೇಕೆಂದು ಗ್ರಾಮದ ಮಹಿಳೆಯರು ಮತ್ತು ಯುವಕರು ಸ್ವಯಂ ಪ್ರೇರಿತರಾಗಿ ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿ ಮಾರಾಟಗಾರರ ವಿರುದ್ಧ ದೂರು ನೀಡಿದರು. ತದನಂತರ ಸಂಬಂಧಿಸಿದ ಅಬಕಾರಿ ಇಲಾಖೆಯ ಉಪ ಆಯುಕ್ತರಿಗೂ ಮನವಿ ಸಲ್ಲಿಸಿ ತಕ್ಷಣೆವೆ ಗ್ರಾಮದಲ್ಲಿ ಸಂಪೂರ್ಣ ಮದ್ಯಪಾನ ನಿಲುಗಡೆಗೊಳಿಸದಿದ್ದರೆ ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು. 

ಈ ವೇಳೆ ಪ್ರಗತಿಪರ ಹೋರಾಟಗಾರ ಬಸವರಾಜ ಶೀಲವಂತರ, ರಾಮಣ್ಣ ಬಿ ಶೆಟ್ಟಿ, ಬಸವರಾಜ ಅಗಸರ, ಮಂಜುನಾಥ ಕಂಪಸಾಗರ, ನಾಗರಾಜ ತಳವಾರ, ಆನಂದ ಮೂರಮನಿ, ತಾಜುದ್ದೀನ್ ಹೊಸಮನಿ, ಮಂಜುಳಾ, ಈರಮ್ಮ, ಗೀತಾ, ಶಾಂತಮ್ಮ, ಸಾವಿತ್ರಿ, ಶಹನಾಜ್ ಬಿ, ಪ್ರೇಮ, ಹುಚ್ಚಮ್ಮ, ಕಸ್ತೂರಿ ಸೇರಿದಂತೆ ಗ್ರಾಮದ ಇತರ ಯುವಕರು ಹಾಗೂ ಮಹಿಳೆಯರು ಇದ್ದರು.