ಪ್ರಗತಿ ಪರೀಶೀಲನೆ ಹಾಗೂ ಸಮಾಲೋಚನ ಸಭೆ

Progress review and consultation meeting

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಪಂಗಡ ಅಲೆಮಾರಿ ಅಭಿವೃದ್ದಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ. ಅವರ ಅಧ್ಯಕ್ಷತೆಯಲ್ಲಿ ಜರುಗಿದ 

ಧಾರವಾಡ ಫೆ.07:   ಇಂದು (ಫೆ.7) ನಡೆದ ಪ್ರಗತಿ ಪರೀಶೀಲನೆ ಸಭೆಯಲ್ಲಿ ಪಲ್ಲಿವಿ. ಜಿ.ಅವರು ಘನ ಸರ್ಕಾರ ಅಲೆಮಾರಿ ಸಮುದಾಯದವರಿಗೆ ದೂರ ದೃಷ್ಟಿಯಿಂದ ಅಲೆಮಾರಿ ನಿಗಮ ಸ್ಥಾಪನೆ ಮಾಡಿದ್ದು, ಈ ಅಲೆಮಾರಿ ನಿಗಮಕ್ಕೆ ತಾವು ಪ್ರಥಮ ಅಧ್ಯಕ್ಷರಾಗಿರುತ್ತಾರೆ. ಅಲೆಮಾರಿ ಜನಾಂಗದವರ ಸರ್ವೋತೊಮುಖ ಅಭಿವೃದ್ದಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸಾಕಷ್ಟು  ಯೋಜನೆಗಳಲ್ಲಿ ರಾಜ್ಯದ  2011 ರ ಜನಗಣತಿ ಪ್ರಕಾರ 51 ಪ. ಜಾತಿ ಅಲೆಮಾರಿಗಳು, 23 ಪರಿಶಿಷ್ಟ ಪಂಗಡ ಅಲೆಮಾರಿಗಳು ಮತ್ತು 25 ಆದಿವಾಸಿ ಅಲೆಮಾರಿ ಸಮುದಾಯದವರಿಗೆ ನೇರ ಸಾಲ, ಸ್ವಯಂ ಉದ್ಯೋಗ, ಸ್ವಾವಲಂಬಿ ಸಾರಥಿ, ಮೈಕ್ರೋ ಕ್ರೆಡಿಟ್, ಗಂಗಾ ಕಲ್ಯಾಣ ಹಾಗೂ ವಿಷೇಶವಾಗಿ ಮಹಿಳೆಯರಿಗಾಗಿ ಭೂಒಡೆತನ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು. 

ಈ ಯೋಜನೆಯನ್ನು ಅನುಷ್ಠಾನ ಮಾಡುವಲ್ಲಿ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದು,್ದ ಅಲೆಮಾರಿ ಸಮುದಾಯದ 05 ಜನ ಮುಖಂಡರಲ್ಲಿ ಒಬ್ಬರು ಮಹಿಳೆ ಒಳಗೊಂಡಂತೆ ಜಿಲ್ಲಾ ಸಮಿತಿಯನ್ನು ರಚಿಸಿ, ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. 

ಸರ್ಕಾರ ಸಾಕಷ್ಟು ಯೊಜನೆಗಳನ್ನು ನೀಡಿದೆ ಇದರಿಂದ ಅಲೆಮಾರಿ ಜನಾಂಗದವರು ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಜಾಗೃತಿ ಮೂಡಿಸುವ ಕಾರ್ಯ ಎಲ್ಲಾ ಜಿಲ್ಲೆಯ, ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಅರಿವು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.  

ಜಿಲ್ಲೆಯಲ್ಲಿ ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳನ್ನು ಜಾತಿವಾರು ಗುರುತಿಸಿ ಸರ್ಕಾರಿ ಜಾಗ, ಖಾಸಗಿ ಜಮೀನನ್ನು ಖರೀದಿಸಿ (ಖರೀದಿಸಲು ಅನುದಾನವನ್ನು ಸರ್ಕಾರದಿಂದ 3 ಪಟ್ಟು ನೀಡಲಾಗುವುದು) ಅಲೆಮಾರಿ ಸಮುದಾಯದವರಿಗೆ ಹೊಸ ನಗರವನ್ನಾಗಿ ಮಾಡಿಕೊಡುವಲ್ಲಿ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯು ಜಂಟಿಯಾಗಿ ಪರೀಶೀಲಿಸಿ 15 ದಿನಗಳೊಳಗೆ ಕ್ರಮ ವಹಿಸಲು ಸೂಚಿಸಿದರು. 

ಧಾರವಾಡ ತಾಲೂಕಿನ ಸಿದ್ದೇಶ್ವರ ನಗರಕ್ಕೆ ಅಧ್ಯಕ್ಷರು ಭೇಟಿ ನೀಡಿ ಅಲ್ಲಿ ವಾಸಿಸುವ  ಅಲೆಮಾರಿ ಸಮುದಾಯದರ ಹಲವಾರು ಸಮಸ್ಯೆಗಳನ್ನು ಗುರುತಿಸಿ ವಸತಿ ರಹಿತ ಕುಟುಂಬದವರಿಗೆ ಜಿಲ್ಲೆಯಾದ್ಯಂತ ವಸತಿ ರಹಿತ ಕುಟುಂಬಗಳಿಗೆ ಹೆಬ್ಬಳ್ಳಿ ಗ್ರಾಮದ ಸರ್ವೆ ನಂ: 533 ರಲ್ಲಿನ ಜಮೀನನ್ನು ಅಲೆಮಾರಿ ಸಮುದಾಯದವರಿಗೆ ಕಾಯ್ದುರಿಸಿ ಟೆಂಟ್ ಮುಕ್ತರನ್ನಾಗಿಸಲು ವಸತಿ ಕಲ್ಪಿಸುವಂತೆ ಸೂಚಿಸಿದರು. 

ಅಧ್ಯಕ್ಷರು ರಾಜ್ಯಾದ್ಯಂತ ನೆಲೆ ಒದಗಿಸುವುಲ್ಲಿ ಪ್ರಯತ್ನ ಮಾಡುತ್ತೇನೆ ಹಾಗೂ ಸಮುದಾಯದವರಿಗೆ ಟೆಂಟ್ ಮುಕ್ತವಾಗಿ ನಿವೇಶನ ಒದಗಿಸುವಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸಮುದಾಯಕ್ಕೆ ಭರವಸೆ ನೀಡಿದರು.