ಲೋಕದರ್ಶನ ವರದಿ
ಕೊಪ್ಪಳ ತಾಲೂಕಿನ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆ
ಕೊಪ್ಪಳ 25: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು ಸಮರ್ಕವಾಗಿ ಅನುಷ್ಠಾನಿಸಲು ಕೊಪ್ಪಳ ತಾಲೂಕ ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರೀಶೀಲನಾ ಸಭೆಯು ಕೊಪ್ಪಳ ತಾಲೂಕ ಮಟ್ಟದ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಾಲಚಂದ್ರನ್ ಎಸ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾ.ಪಂ. ಸಭಾಂಗಣದಲ್ಲಿ ಜರುಗಿತು.
ಗೃಹಲಕ್ಷ್ಮೀ ಯೋಜನೆಯ ಕುರಿತು ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾತನಾಡಿ,ಜನೇವರಿ-2025ರ ಗೃಹಲಕ್ಷ್ಮೀ ಹಣ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಜಮೆಯಾಗಲಿದ್ದು, ಫೆಬ್ರುವರಿ ್ಘ ಮಾರ್ಚ-2025ರ ಹಣ ಬಿಡುಗಡೆಯಾಗಿರುವದಿಲ್ಲ. ಬಿಡುಗಡೆಯಾದ ತಕ್ಷಣವೇ ಪಾವತಿಗೆ ಕ್ರಮವಹಿಸಲಾಗುವದು ಎಂದು ಮಾಹಿತಿ ನೀಡಿದರು. ಎಲ್ಲಾ ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಸಂಗ್ರಹಣೆ, ವಿತರಣೆ ಮತ್ತು ಆಹಾರ ಧಾನ್ಯ ಉಳಿದಿರುವ ಮಾಹಿತಿಯುಳ್ಳ ನಾಮಫಲಕಗಳನ್ನು ಅಳವಡಿಸಿರುವದಿಲ್ಲವೆಂದು ಸದಸ್ಯರು ಸಭೆಯಲ್ಲಿ ತಿಳಿಸಿದಾಗ, ಅಧ್ಯಕ್ಷರು ಕೂಡಲೇ ಅಳವಡಿಸಲು ಕ್ರಮವಹಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇತ್ತೀಚೆಗೆ ಜರುಗಿದ ನ್ಯಾಯಬೆಲೆ ಅಂಗಡಿಗಳ ಸನದುದಾರರ ಸಭೆಗೆ ಹಾಜರಾಗದ ಸನದುದಾರರಿಗೆ ಆಹಾರ ಇಲಾಖೆಯಿಂದ ನೋಟಿಸ್ ನೀಡುವಂತೆ ಸಭೆಯಲ್ಲಿ ಸದಸ್ಯರು ತಿಳಿಸಿದರು. ಮುಂದಿನ ಸಭೆಯನ್ನು ಮುನಿರಾಬಾದ ಡ್ಯಾಂ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚ ಗ್ಯಾರಂಟಿ ಯೋಜನೆಗಳ ಪ್ರತಿ ಫಲಾನುಭವಿಗೆ ತಲುಪುವಂತೆ ಹಾಜರಿದ್ದ ಎಲ್ಲಾ ಸದಸ್ಯರು, ಅನುಷ್ಠಾನ ಅಧಿಕಾರಿಗಳಿಗೆ ಸಭೆಯ ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ, ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಸಮಿತಿಯ ಸದಸ್ಯರಾದ ದೇವರಾಜ ನಡುವಿನಮನಿ, ರಮೇಶ ಹ್ಯಾಟಿ, ಜ್ಯೋತಿ ಗೊಂಡಬಾಳ, ಸವಿತಾ ಗೊರಂಟ್ಲಿ, ಅನ್ನದಾನಸ್ವಾಮಿ, ಮೆಹಬೂಬಪಾಷಾ ಪರಶುರಾಮ ಕೊರವರ, ಧರ್ಮರಾಜರಾವ್ ದ್ಯಾಮಪ್ಪ ಡೊಳ್ಳಿನ, ಅನ್ವರ ಹುಸೇನ ಗಡಾದ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.