ಇಂದಿನಿಂದ ದುರ್ಗಾದೇವಿ ನೂತನ ದೇವಸ್ಥಾನದ ಕಾರ್ಯಕ್ರಮಗಳು

Programs at the new Durga Devi temple from today

ಇಂದಿನಿಂದ ದುರ್ಗಾದೇವಿ ನೂತನ ದೇವಸ್ಥಾನದ ಕಾರ್ಯಕ್ರಮಗಳು 

ಕೊಪ್ಪಳ 06: ನಗರದ ಜವಾಹರ ರಸ್ತೆ ಕುರುಬರ ಓಣಿಯ ಶ್ರೀ ದುರ್ಗಾದೇವಿ ದೇವಸ್ಥಾನದ ನೂತನ ಶಿಲಾ ದೇವಸ್ಥಾನ ಮತ್ತು ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಗಳು ಎಪ್ರಿಲ್ 7 ರಿಂದ 11ರವರೆಗೆ ನಡೆಯಲಿವೆ ಎಂದು ಶ್ರೀ ದುರ್ಗಾದೇವಿ ಸೇವಾ ಸಂಘ ತಿಳಿಸಿದೆ. 

ಎಪ್ರಿಲ್ 7 ರಂದು ಸೋಮುವಾರ ಶ್ರೀ ದುರ್ಗಾದೇವಿ ಮೆರವಣಿಗೆ ಇದ್ದು ನಗರದ ಶ್ರೀ ಸಿರಸಪ್ಪಯ್ಯನಮಠದಿಂದ ಕುಂಭ, ಕಳಸ ಮತ್ತು ವಾದ್ಯ ಮೇಳದೊಂದಿಗೆ ಕುರುಬರ ಓಣಿಯ ದೇವಸ್ಥಾನದವರೆಗೆ ನಡೆಯಲಿದೆ. ಅಲ್ಲಿಂದ ಮೂರು ದಿನಗಳ ಕಾಲ ವಿಧಿವತ್ತಾಗಿ ಜಲಾದಿವಾಸ, ಧಾನ್ಯಾಧಿವಾಸ, ವಸ್ತ್ರಾಧಿವಾಸ, ನೈವೇದ್ಯ, ವಾಸ್ತುಹೋಮ, ನವಗ್ರಹ ಶಾಂತಿ ಕಾರ್ಯಕ್ರಮಗಳು ನಡೆಯಲಿವೆ. 

ಎಪ್ರಿಲ್ 11 ರಂದು ಶುಕ್ರವಾರ ಮೂರ್ತಿಗೆ ಅಭಿಷೇಕ, ಪುಷ್ಪಾಲಂಕಾರ, ನೈವೇದ್ಯ ಮತ್ತು ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಅಂದು ಮಧ್ಯಾಹ್ನ ಅನ್ನಸಂತರೆ​‍್ಣ ಹಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸನ್ಮಾನ ಸಮಾರಂಭ ಜರುಗಲಿವೆ. ಕಾರಣ ಸಕಲ ಸದ್ಭಕ್ತರು ಐದು ದಿನಗಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಶ್ರೀ ದುರ್ಗಾದೇವಿ ಸೇವಾ ಸಂಘದ ಪದಾಧಿಕಾರಿಗಳು ಕೋರಿದ್ದಾರೆ.