ತಗಡೂರು ಮತ್ತು ಲೋಕೇಶ್ ರಿಂದ ಕಾರ್ಯಕ್ರಮದ ಸ್ಥಳ ಪರೀಶೀಲನೆ

Program venue inspection from Tagadur and Lokesh

ಕೊಪ್ಪಳ 02 :  ಇದೇ ತಿಂಗಳ 9ರ ರವಿವಾರ ದಂದು ಇಲ್ಲಿನ ಪಾನಗಂಟಿ ಕಲ್ಯಾಣ ಮಂಟಪ ದಲ್ಲಿ ಜರುಗಲಿರುವ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಸ್ಥಳವನ್ನು ಸಂಘದ ರಾಜ್ಯ ಅಧ್ಯಕ್ಷರಾದ ಶಿವಾನಂದ ತಗಡೂರು ಮತ್ತು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜಿ ಸಿ ಲೋಕೇಶ್ ರವರು ವೀಕ್ಷಣೆ ಮಾಡಿ ಪರೀಶೀಲನೆ ನಡೆಸಿ ಜಿಲ್ಲಾ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮ ದಲ್ಲಿ ಶ್ರೀ ಗವಿಮಠದ ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳವರು ಪಾಲ್ಗೊಂಡು ಆಶೀರ್ವಚನ ನೀಡುವವರು ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು ಸಂಸದರು ಇತರ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಆಡಳಿತದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು, ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯಾಲಯದ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಹನುಮಂತ ಹಳ್ಳಿಕೇರಿ ರಾಜ್ಯ ಸಮಿತಿ ವಿಶೇಷ ಆಹ್ವಾನಿತ ಸದಸ್ಯ ಎಚ್‌ಎಸ್ ಹರೀಶ್ ಇತರ ಪದಾಧಿಕಾರಿಗಳಾದ ಎನ್ ಎಂ ದೊಡ್ಮನಿ ಬಸವರಾಜ್ ಗುಡ್ ಲಾನೂರ್, ಚಾಂದ್ ಸಿಂಗ್ ರಜಪೂತ್ ಕಾರಟಗಿಯ ಸಿದ್ದನಗೌಡ ಪಾಟೀಲ್ ,ಬೆಂಗಳೂರಿನ ದೇವರಾಜ್ ಶಿವಕುಮಾರ್ ಹಿರೇಮಠ ಇತರರು ಪಾಲ್ಗೊಂಡಿದ್ದರು,