ಪದವಿ ಪೂರ್ವ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಆಶ್ರಯದಲ್ಲಿ ಅಯೋಜಿಸಲಾದ ಕಾರ್ಯಕ್ರಮ

Program organized under the auspices of NSS Unit of Pre-Graduate College

ಪದವಿ ಪೂರ್ವ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದ ಆಶ್ರಯದಲ್ಲಿ ಅಯೋಜಿಸಲಾದ ಕಾರ್ಯಕ್ರಮ

ಮಾಂಜರಿ 22 : ನಮ್ಮ ಭಾರತ ದೇಶವು ಬೆಳೆದಿದ್ದು ಹಳ್ಳಿಗಳಿಂದ ಆದ್ದರಿಂದ ಎನ್ ಎಸ್ ಎಸ್ ಶಿಬಿರದಿಂದ ಹಳ್ಳಿಗಳನ್ನು ದತ್ತು ಪಡೆದು ಸಂಸ್ಕೃತಿ ಸಂಸ್ಕಾರವನ್ನು ಬೆಳೆಸುವಂತಾಗಬೇಕು ಎಂದು ಉಗಾರ್  ಗುರುದೇವ್ ಆಶ್ರಮದ ಪರಮ ಪೂಜ್ಯ  ಜ್ಞಾನಾನಂದ ಸ್ವಾಮೀಜಿಗಳು   ಹೇಳಿದರು. 

ಕಾಗವಾಡ ತಾಲೂಕಿನ ಶುರುಗುಪ್ಪಿ ಗ್ರಾಮದಲ್ಲಿರುವ ಕೆಎ??? ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಮಹಾವಿದ್ಯಾಲಯದ  2024-25 ನೇ ಸಾಲಿನ ರಾಷ್ಟ್ರೀಯ ಸ್ವಯಂ ಸೇವಾ ಘಟಕದ ದತ್ತು ಗ್ರಾಮ ಚಿಕ್ಕೋಡಿ ತಾಲೂಕಿನ ಯಡೂರು ವಾಡಿ ಗ್ರಾಮದಲ್ಲಿ ಆಯೋಜಿಸಲಾದ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವದರಿಂದ ಜ್ಞಾನ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿ ಹೊಂದಬೇಕಾದರೆ ಇಂತಹ ಶಿಬಿರಗಳಲ್ಲಿ ಭಾಗವಹಿಸುವದರಿಂದ ದೇಶ ಪ್ರೇಮ, ಶಿಸ್ತು, ಸಮಯ ಪ್ರಜ್ಞೆಯ ಅರಿವೂ ಮೂಡುತ್ತದೆ ಇದರಿಂದ ನಿಶ್ಚಿತವಾಗಿಯೂ ಜಯ ಕಾಣಲು ಸಾಧ್ಯವಾಗುತ್ತದೆ.ಆದ್ದರಿಂದ ಪ್ರತಿಯೊಬ್ಬ ಶಿಬಿರಾರ್ಥಿಗಳು ಈ ಒಂದು ವಾರದ ಶಿಬಿರದಲ್ಲಿ ಶ್ರದ್ದೆಯಿಂದ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆದುಕೋಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ವೇದಿಕೆಯ ಮೇಲೆ ಶಿರಗುಪ್ಪಿ ಗ್ರಾಮದಲ್ಲಿರುವ ಕೆಎ??? ಶಿಕ್ಷಣ ಸಂಸ್ಥೆಯ ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯದ ಸ್ಥಾನಿಕ  ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶಿವಾನಂದ ಪಾಟೀಲ್ ಪ್ರಾಚಾರ್ಯರಾದ ಶಿವಾನಂದ ಎನ್ ಪಾಟೀಲ್  ಯಡುರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಳು ಧನಗರ್ ಸುರೇಶ್ ಯಳವಂತೆ ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಕಾಕಾ ಸಾಹೇಬ್ ಘಾಟಗೆ  ಸಂಜಯ್ ಪಿರಾಜೆ ವಿಠ್ಠಲ್ ಅಲಾಸೆ ಹಾಗೂ ಇನ್ನಿತರರು ಹಾಜರಿದ್ದರು ಬಾಬಾ ಸಾಹೇಬ್ ನರವಡೆ ಸ್ವಾಗತಿಸಿ ಆರ್ ಡಿ ಪವರ್ ಪ್ರಾಸ್ತಾವಿಕವಾಗಿ ಮಾತನಾಡಿ  ರಂಜನಾ ನರವಾಡೆ ನಿರೂಪಿಸಿ ಕೆ ಎ ಮಾಳಿ  ವಂದಿಸಿದರು