ಪೊಲೀಸ್ ಪರೇಡ್ ಗ್ರೌಂಡ ಹತ್ತಿರವಿರುವ ಗುಡಿ ಮತ್ತು ಸಮಾಜದ ಸಮುದಾಯ ಭವನದಲ್ಲಿ ಕಾರ್ಯಕ್ರಮ
ವಿಜಯಪುರ : ವಿಜಯಪುರ ಜಿಲ್ಲಾ ಮೋಚಿಗಾರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಮಾಡಲು ಸ್ಥಳಾವಕಾಶ ಮಾಡಿಕೊಡಬೇಕಾಗಿ ಮತ್ತು ಬಿಜಾಪೂರ ಹನುಮಂತ ದೇವರ ಗುಡಿ ಟ್ರಸ್ಟ್ ಕಮಿಟಿಯವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಸಂಘದ ಪ್ರದಾನ ಕಾರ್ಯದರ್ಶಿಯಾದ ಸುನೀಲ ಜೈನಾಪೂರ ಮಾತನಾಡಿ, ನಮ್ಮ ಸಂಘದ ವತಿಯಿಂದ ನಡೆಯಲಿರುವ ದಿನಾಂಕ 23-02-2025 ರಂದು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಆಚರಿಸಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಬಿಜಾಪೂರ ಹನಮಂತ ದೇವರ ಗುಡಿ ಟ್ರಸ್ಟ್ ಸೊಲಾಪುರ ರಸ್ತೆಯಲ್ಲಿರುವ ಪೊಲೀಸ್ ಪರೇಡ್ ಗ್ರೌಂಡ ಹತ್ತಿರವಿರುವ ಗುಡಿ ಮತ್ತು ಸಮಾಜದ ಸಮುದಾಯ ಭವನದಲ್ಲಿ ಕಾರ್ಯಕ್ರಮ ಮಾಡಲು ನಿರ್ಧರಿಸಲಾಗಿತ್ತು. ಆದರೆ ಟ್ರಸ್ಟ್ ಅಧ್ಯಕ್ಷರಾದ ಆರ್.ಕೆ. ಸುರಪುರ ಅನುಮತಿ ಪತ್ರ ದಿನಾಂಕ 04-02-2025 ರಂದು ನೀಡಲಾಗಿತ್ತು.
ಆದರೆ ಅಧ್ಯಕ್ಷರ ಆದಿಯಾಗಿ ಮನೋಹರ ಇನಾಮದಾರ (ಇಂಜಿನಿಯರ) ಶಿವಾಜಿ ಇನಾಮದಾರ, ಸುನೀಲ ಕೆಂಭಾವಿ, ವಿಕ್ರಮ ಸುರುಪುರ, ಎಸ್.ಬಿ. ಸುರಪುರ ಇವರನ್ನೋಳಗೊಂಡ ಇನ್ನು ಕೆಲವು ಪದಾಧಿಕಾರಿಗಳು ಒಳಗೊಂಡು ಸಭೆಯಲ್ಲಿ ಠರಾವು ಪಾಸುಮಾಡಿ ದಿನಾಂಕ ; 08-02-2025 ಪತ್ರ ನೀಡಿದ್ದು, ನಮಗೆ ಕಾರ್ಯಕ್ರಮ ಮಾಡಲು ಕೊಡುವುದಿಲ್ಲವೆಂದು ನಿರ್ಧಾರ ಪ್ರಕಟಿಸಿದ್ದಾರೆ. ನಮ್ಮ ಸಮಾಜವು ಟ್ರಸ್ಟಿನ ಪದಾಧಿಕಾರಿಗಳ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಬೆಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಪ್ರಶಾಂತ ಕಿರಣ ಮಾತನಾಡಿ, ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿ ಸಮುದಾಯ ಭವನ ಹಾಗೂ ಇನ್ನೀತರ ಎಲ್ಲಾ ಕೀಲಿ ಕೈ ನೀಡಬೇಕು. ಆವರಣದಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕಲ್ಪಿಸಬೇಕು. ಟ್ರಸ್ಟ್ ದುರಾಡಳಿತ ವಿರುದ್ಧ ಕಠಿಣ ಕ್ರಮದ ಜೊತೆಗೆ ರದ್ದು ಮಾಡಿ ಸಮಾಜದ ಸುಪರ್ಧಿಗೆ ನೀಡಬೇಕು ಇಲ್ಲವಾದರೆ ಸಂಘ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ಮೋತಿಲಾಲ ದೊಡಮನಿ, ರಾಮಸ್ವಾಮಿ ದೊಡಮನಿ, ರೋಹಿತ ಭಾವಿಕಟ್ಟಿ, ಜಗದೀಶ ಮನಗೂಳಿ, ಮಲ್ಲಪ್ಪ ಬಿದರಿ, ಅಭಿಷೇಶ ಹೊನಕೇರಿ, ಕಾರ್ತಿಕ ಬಾಗೇವಾಡಿ, ನಿಖಿಲ ಪೆಟಗೆಕರ, ಪ್ರಹ್ಲಾದ ಬಾಗೇವಾಡಿ, ಮಂಜುನಾಥ ಹೊನಕೇರಿ, ರೇಣುಕಾ ಹೊನಕೇರಿ, ಶಾರದಾ ಕಿರಣಗಿ, ರೇಖಾ ಹೊನಕೇರಿ, ಸೀಮಾ ಜೈನಾಪೂರ, ಜಯಶ್ರೀ ದೊಡಮನಿ, ರಶ್ಮಿ ಹೊನಕೇರಿ, ಅನುಸೋಯಾ ಮಾಶಾಳ ಮುಂತಾದವರು ಇದ್ದರು.