ಹಾವೇರಿ೨೯: ಅತಿವೃಷ್ಠಿ ಹಾಗೂ ನೆರೆಯಿಂದ ಜಿಲ್ಲೆಯಲ್ಲಿ 1,23,065 ಹೆಕ್ಟೇರ್ ಕೃಷಿ ಬೆಳೆ, 13,649.19 ತೋಟಗಾರಿಕೆ ಬೆಳೆ, 38,906 ಹೆಕ್ಟೇರ್ ರೇಷ್ಮೆ ಬೆಳೆ ಹಾನಿಯಾಗಿದ್ದು, 13,267 ಹೆಕ್ಟೇರ್ ಕೃಷಿ ಭೂ ಹಾನಿಯಾಗಿದೆ.
ತಾಲೂಕುವಾರು ವಿವರದಂತೆ ಹಾವೇರಿ ತಾಲೂಕಿನಲ್ಲಿ 11,656 ಹೆಕ್ಟೇರ್, ರಾಣೇಬೆನ್ನೂರು ತಾಲೂಕಿನಲ್ಲಿ 6778 ಹೆಕ್ಟೇರ್, ಬ್ಯಾಡಗಿಯಲ್ಲಿ 9091 ಹೆಕ್ಟೇರ್, ಹಿರೇಕೆರೂರು ತಾಲೂಕಿನಲ್ಲಿ 3499 ಹೆಕ್ಟೇರ್, ಸವಣೂರಿಲ್ಲಿ 25,099 ಹೆಕ್ಟೇರ್, ಶಿಗ್ಗಾಂವಿಯಲ್ಲಿ 35,696, ಹಾನಗಲ್ನಲ್ಲಿ 31,246 ಹೆಕ್ಟೇರ್ ಒಳಗೊಂಡಂತೆ 1,23,065 ಹೆಕ್ಟೇರ್ ಕೃಷಿ ಬೆಳೆಗಳು ಹಾನಿಯಾಗಿವೆ.
ಹಾವೇರಿ ತಾಲೂಕಿನಲ್ಲಿ 3531 ಹೆಕ್ಟೇರ್, ರಾಣೇಬೆನ್ನೂರು ತಾಲೂಕಿನಲ್ಲಿ 3434.30 ಹೆಕ್ಟೇರ್, ಬ್ಯಾಡಗಿಯಲ್ಲಿ 790.80 ಹೆಕ್ಟೇರ್, ಹಿರೇಕೆರೂರು ತಾಲೂಕಿನಲ್ಲಿ 1106 ಹೆಕ್ಟೇರ್, ಸವಣೂರಿಲ್ಲಿ 1159.40 ಹೆಕ್ಟೇರ್, ಶಿಗ್ಗಾಂವ 1724.50 ಹೆಕ್ಟೇರ್, ಹಾನಗಲ್ 1941.79 ಹೆಕ್ಟೇರ್ ಒಳಗೊಂಡಂತೆ 13,649.19 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ.
ಹಾವೇರಿ ತಾಲೂಕಿನಲ್ಲಿ 2379 ಹೆಕ್ಟೇರ್, ರಾಣೇಬೆನ್ನೂರಿನಲ್ಲಿ 2924.80 ಹೆಕ್ಟೇರ್, ಬ್ಯಾಡಗಿಯಲ್ಲಿ 1263.60 ಹೆಕ್ಟೇರ್, ಹಿರೇಕೆರೂರಿನಲ್ಲಿ 790.00 ಹೆಕ್ಟೇರ್, ಸವಣೂರಿನಲ್ಲಿ 7814.10 ಹೆಕ್ಟೇರ್, ಶಿಗ್ಗಾಂವಿಯಲ್ಲಿ 10,672.50 ಹೆಕ್ಟೇರ್, ಹಾನಗಲ್ ತಾಲೂಕಿನಲ್ಲಿ 13,062 ಹೆಕ್ಟೇರ್ ಸೇರಿ 38,906 ರೇಷ್ಮೆ ಹಾನಿಯಾಗಿದೆ.
ಕೃಷಿ ಭೂಮಿ ಹಾನಿ:
ನೆರೆ ಹಾವಳಿಯಿಂದ ಜಿಲ್ಲೆಯ 5283 ಹೆಕ್ಟೇರ್ಗಳಲ್ಲಿ ಮೂರು ಇಂಚಿಗೂ ಅಧಿಕ ಮರಳು ಮತ್ತು ಕೆಸರು ತುಂಬಿಕೊಂಡಿದೆ. ನದಿಯ ಮಾರ್ಗ ಬದಲಾಯಿಸಿದ ಕಾರಣ 7984 ಹೆಕ್ಟೇರ್ ಕೃಷಿ ಭೂಮಿಯ ಫಲವತ್ತತೆ ಹಾನಿ ಹಾಗೂ ಮಣ್ಣು ಕುಸಿತ ಒಳಗಾಗಿದೆ. ಒಟ್ಟಾರೆ 13267 ಹೆಕ್ಟೇರ್ ಭೂಮಿ ಹಾಳಾಗಿದೆ.
ತಾಲೂಕುವಾರು ವಿವರದಂತೆ ಹಾವೇರಿ ತಾಲೂಕಿನಲ್ಲಿ 1974 ಹೆಕ್ಟೆರ್, ರಾಣೇಬೆನ್ನೂರ ತಾಲೂಕಿನಲ್ಲಿ 480 ಹೆಕ್ಟೇರ್, ಹಿರೇಕೆರೂರು ತಾಲೂಕಿನಲ್ಲಿ 248 ಹೆಕ್ಟೇರ್, ಸವಣೂರ ತಾಲೂಕಿನಲ್ಲಿ 1199 ಹೆಕ್ಟೇರ್, ಶಿಗ್ಗಾಂವ ತಾಲೂಕಿನಲ್ಲಿ 7986 ಹೆಕ್ಟೇರ್, ಹಾನಗಲ್ ತಾಲೂಕಿನಲ್ಲಿ 1372 ಹೆಕ್ಟೇರ್ ಒಳಗೊಂಡಂತೆ 13267 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಭೂ ಕೊರತೆ ಹಾಗೂ ಹೂಳು ತುಂಬಿ ಫಲವತ್ತತೆ ಹಾನಿಯಾಗಿದೆ.
ಕೃಷಿ ಬೆಳೆ ಹಾನಿ:
ಜಿಲ್ಲೆಯಲ್ಲಿ 18,416 ಹೆಕ್ಟೇರ್ ಭತ್ತ ಬೆಳೆ, 229 ಹೆಕ್ಟೇರ್ ಜೋಳ, 24 ಎಕರೆ ರಾಗಿ, 54252 ಹೆಕ್ಟೇರ್ ಮೆಕ್ಕೆಜೋಳ, 500 ಹೆಕ್ಟೇರ್ ಸಿರಿಧಾನ್ಯಳು, 538 ಹೆಕ್ಟೇರ್ ತೊಗರಿ, 12624 ಹೆಕ್ಟೇರ್ ನೆಲೆಗಡಲೆ, 6733 ಹೆಕ್ಟೇರ್ ಸೋಯಾಬಿನ್, 28,089 ಹೆಕ್ಟೇರ್ ಹತ್ತಿ, 1069 ಹೆಕ್ಟೇರ್ ಕಬ್ಬು, 187 ಹೆಕ್ಟೇರ್ ಹೆಸರು, ಗುರೆಳ್ಳು, ಅವರೆ ಇತರ ಬೆಳೆ ಸೇರಿದಂತೆ ಒಟ್ಟಾರೆ 1,23,065 ಹೆಕ್ಟೇರ್ ಬೆಳೆಹಾನಿಯಾಗಿದೆ.
ತೋಟಗಾರಿಕೆ ಬೆಳೆಹಾನಿ:
1164.79 ಹೆಕ್ಟೇರ್ ಬಾಳೆಬೆಳೆ, 586.30 ಹೆಕ್ಟೇರ್ ಟೋಮೋಟೊ, 456 ಹೆಕ್ಟೇರ್ ಡ್ರೈ ಚಿಲ್ಲಿ, 2437.80 ಹೆಕ್ಟೇರ್ ಹಸಿ ಮೆಣಸಿನಕಾಯಿ, 2286.40 ಹೆಕ್ಟೇರ್ ಈರುಳ್ಳಿ, 1221.60 ಹೆಕ್ಟೇರ್ ಬೆಳ್ಳುಳ್ಳಿ, 1.20 ಹೆಕ್ಟೇರ್ ಹಾಗಲಕಾಯಿ, 49.60 ಹೆಕ್ಟೇರ್ ಸವತೆ, 114.80 ಹೆಕ್ಟೇರ್ ಬದನೆ ಬೆಳೆ, 159 ಬೆಂಡೆ ಬೆಳೆ, 295 ಹೆಕ್ಟೇರ್ ಚೆಂಡು ಹೂ ಬೆಳೆ, 78.40 ಹೆಕ್ಟೇರ್ ಹಿರೇಕಾಯಿ, 39.60 ಹೆಕ್ಟೇರ್ ಕ್ಲಸ್ಟರ್ ಬೀನ್, 709 ಹೆಕ್ಟೇರ್ ಶುಂಠಿ, 732.20 ಹೆಕ್ಟೇರ್ ಕೋಸು, 1.80 ಹೆಕ್ಟೇರ್ ಅರಿಶಿನ, 36.80 ಹೆಕ್ಟೇರ್ ದೊಣ್ಣಮೆಣಸಿನಕಾಯಿ, 378.10 ಹೆಕ್ಟೇರ್ ಹೂ ಬೆಳೆ ಹಾಗೂ 25 ಹೆಕ್ಟೇರ್ ಹೂ ಕೋಸು, 15 ಹೆಕ್ಟೇರ್ ಆಲುಗಡ್ಡೆ, 1208 ಹೆಕ್ಟೇರ್ ಇತರೆ ತರಕಾರಿ, 51 ಹೆಕ್ಟೇರ್ ದಾಳಿಂಬೆ, 37 ಹೆಕ್ಟೇರ್ ಮಾವು, 16 ಹೆಕ್ಟೇರ್ ಸಪೋಟಾ, 66 ಹೆಕ್ಟೇರ್ ಗೂವಾ, 57 ಹೆಕ್ಟೇರ್ ತೆಂಗು, 145.60 ಹೆಕ್ಟೇರ್ ಅಡಿಕೆ ಹಾಗೂ ಮೆಣಸಿನಕಾಳು ಬೆಳೆ, 490 ಹೆಕ್ಟೇರ್ ಅಡಿಕೆ, 5 ಹೆಕ್ಟೇರ್ ಲಿಂಬು, ಕಿತ್ತಳೆ, 208 ಹೆಕ್ಟೇರ್ ಪಪ್ಪಾಯಿ, 49 ಹೆಕ್ಟೇರ್ ಮಲ್ಲಿಗೆ ಹೂವು, 487 ಹೆಕ್ಟೇರ್ ವಿಳ್ಯದೆಲೆ, 28.20 ಹೆಕ್ಟೇರ್ ನುಗ್ಗೆಕಾಯಿ, 0.45 ಅಂಜೂರ ಹಾಗೂ ನೆರಳೆ ಬೆಳೆ, 12 ಹೆಕ್ಟೇರ್ ಪೈನಾಪಲ್ ಬೆಳೆ ಒಳಗೊಂಡಂತೆ 13,649. 19 ಹೆಕ್ಟೇರ್ ತರಕಾರಿ, ಹೂ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.