ಲೋಕದರ್ಶನವರದಿ
ಹಾವೇರಿ 01: ಹಿಂದಿ ಭಾಷೆಯು ಮುತ್ತುಗಳಂತಿರುವ ಭಾರತೀಯ ಭಾಷೆಗಳನ್ನು ಹಾರವನ್ನಾಗಿ ಮಾಡುವ, ಒಂದೇ ಸೂತ್ರದಲ್ಲಿ ಜೋಡಿಸುವ ಸಂಪರ್ಕ ಕೊಂಡಿಯಾಗಿದ್ದು, ಭಾರತೀಯ ಎಲ್ಲ ಭಾಷೆಗಳಿಗೆ ತನ್ನದೇ ಆದ ಗೌರವ ಸ್ಥಾನಮಾನಗಳಿವೆ ಎಂದು ಧಾರವಾಡ ಕನರ್ಾಟಕ ವಿಶ್ವವಿದ್ಯಾಲಯ ಹಿಂದಿ ವಿಭಾಗದ ಮುಖ್ಯಸ್ಥೆ ಡಾ|| ಪ್ರಭಾ ಭಟ್ಟ ಹೇಳಿದರು.
ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಹಿಂದಿ ವಿಭಾಗವು ಆಯೋಜಿಸಿದ್ದ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಿಂದಿ ಅಧ್ಯಯನದಿಂದ ಕೇಂದ್ರ ಮತ್ತು ರಾಜ್ಯ ಸಕರ್ಾರಗಳಲ್ಲಿ ವಿವಿಧ ಹಂತದ ಉದ್ಯೋಗಾವಕಾಶಗಳು ಲಭ್ಯವಿದ್ದು ಅನುವಾದಕ, ದೂರದರ್ಶನ ಮತ್ತು ರೇಡಿಯೋಗಳಲ್ಲಿ ನಿವರ್ಾಹಕ, ನಿರೂಪಕ, ವಾತರ್ಾ ಇಲಾಖೆ, ಜಾಹೀರಾತು, ಸಿನೆಮಾ, ಮಾಧ್ಯಮ ಹೀಗೆ ಮೊದಲಾದ ರಂಗಗಳಲ್ಲಿ ಉದ್ಯೋಗ ಸೃಷ್ಟಿ ಇದೆ. ಇದರ ಸದುಪಯೋಗವನ್ನು ಸೂಕ್ತ ಮಾರ್ಗದರ್ಶನದೊಂದಿಗೆ ಪಡೆಯಲು ವಿದ್ಯಾಥರ್ಿಗಳು ಮುಂದಾಗಬೇಕು ಎಂದರು.
ವಿಭಾಗದ ಮುಖ್ಯಸ್ಥೆ ಡಾ|| ಎಂ. ಪಿ. ಕಣವಿ ಅಧ್ಯಕ್ಷತೆ ವಹಿಸಿದ್ದರು. ಅನಿತಾ ಉಗರಗೋಳ ಸ್ವಾಗತಿಸಿದರು. ಸ್ಪೂತರ್ಿ ಕೋರಿಶೆಟ್ಟರ ಪರಿಚಯಿಸಿದರು. ಅನುಷಾ ಕಾಮತ್ ನಿರ್ವಹಿಸಿದರು. ಶಾಹೀನ ಹಣಗಿ ವಂದಿಸಿದರು.