ಬೈಲಹೊಂಗಲ: ಶಿಕ್ಷಕರಿಗೆ ವೃತ್ತಿಪರ ಅಭಿವೃದ್ಧಿ ಆಪ್ತ ಸಮಾಲೋಚನಾ ಸಭೆ

ಲೋಕದರ್ಶನ ವರದಿ

ಬೈಲಹೊಂಗಲ 19:  ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾಯರ್ಾಲಯ  ಹಾಗೂ ಕ್ಷೇತ್ರ ಸಮನ್ವಯಧಿಕಾರಿ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ  ಸಂಪಗಾವ ಗ್ರಾಮದ ಸರಕಾರಿ  ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಲಿ-ಕಲಿ ಮತ್ತು ದೈಹಿಕ ಶಿಕ್ಷಕರಿಗೆ ವೃತ್ತಿಪರ ಅಭಿವೃದ್ಧಿ ಆಪ್ತ ಸಮಾಲೋಚನಾ ಸಭೆ ನಡೆಯಿತು. 

ಸಭೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ರಾಜ್ಯ ಕೋಶಾಧ್ಯಕ್ಷರಾದ  ಎಸ್.ಡಿ.ಗಂಗನ್ನವರ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಸಿ ಬೇಕಾದರೆ ದಾಖಲಾತಿಯನ್ನು ಹೆಚ್ಚಿಸಿಕೊಳ್ಳಬೇಕು. ಶಾಲಾ ಸೌಂದರ್ಯ ಆಕರ್ಷಕ, ಬೋಧನೆಯೊಂದಿಗೆ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸಳೆಯಬೇಕು ಎಂದರು.    

ನಲಿಕಲಿ ಹಾಗೂ ಬಿಆರ್ಸಿ ಅಧಿಕಾರಿ ಆಶೋಕ ಜಕಾತಿ ಮಾತನಾಡಿ, ಶಾಲಾ ಕೋಣೆಗಳಲ್ಲಿ ಕಲಿಕೆ ವಾತಾವರಣ ನಿಮರ್ಾಣ ಮಾಡಿ  ನಲಿಕಲಿ ವಿದ್ಯಾಥರ್ಿಗಳು ಸುಲಭವಾಗಿ ವಿವಿಧ ಭಾಷಾ ಕಲಿಯುವಂತೆ  ನಲಿಕಲಿ ಶಿಕ್ಷಕರು ಪ್ರೇರೆಪಿಸಬೇಕು ಎಂದರು.

ಸಿಆರ್ಪಿ ಐ.ಬಿ.ಹಿರೇಮಠ, ಡಿ,ವ್ಹಿ,ಗೌಡಪ್ಪನ್ನವರ, ಬಿ.ಜಿ.ಠಕಾಯಿ, ಎಸ್.ಎಸ್. ದೇಶನೂರ ಇವರು ನಲಿ ಕಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು, ಹಣ್ಣಿಕೇರಿ, ಸಂಪಗಾವ, ನೇಗಿನಹಾಳ, ಚಿಕ್ಕಬಾಗೆವಾಡಿ ಮೊದಲಾದ ಶಾಲಾ ಕ್ಲಷ್ಟರ್ ವ್ಯಾಪ್ತಿಯ ಶಿಕ್ಷಕರು ಭಾಗವಹಿಸಿದ್ದರು.