ಲೋಕದರ್ಶನ ವರದಿ
ರಾಮದುರ್ಗ 14: ತಾಲೂಕಿನಲ್ಲಿ ಕೊರೊನಾದ 5 ಪ್ರರಣಗಳು ದೃಡಪಟ್ಟನಿಮಿತ್ಯ ತಾಲೂಕ ಆಡಳಿತ ಬಹಳ ಜಾಗೃತರಾಗಿ ಪ್ರಾಥಮಿಕ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್ ಮಾಡಲು ಕ್ರಮಕೈಕೊಳ್ಳಬೇಕು, ಗಂಟಲು ದ್ರವ ಸಂಗ್ರಹಿಸಿ ತಪಾಸಣೆಗೆ ಕಳಿಸಲು ಕ್ರಮಕೈಕೊಳ್ಳಬೇಕು. ಹಾಗೂ ಕ್ವಾರಂಟೈನ್ ಮಾಡಲು ಸರಕಾರಿ ವಸತಿ ನಿಲಯಗಳು ಹಾಗೂ ಕಾಲೇಜಗಳ ಬಳಕೆ ಮಾಡಿಕೊಂಡು ಕೊರೊನಾ ತಡೆಗಟ್ಟಲು ಯುದ್ದೋಪಾದಿಯಲ್ಲಿ ಟಾಸ್ಕ ಪೋರ್ಸ ಸಮಿತಿ ಸದಸ್ಯರು ಕಾರ್ಯತ್ಪರರಾಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕ ಪಂಚಾಯತ ಆವರಣದಲ್ಲಿ ಕೊವಿಡ್-19 ಟಾಸ್ಕ ಪೋರ್ಸ ಸಮಿತಿಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಆರೋಗ್ಯ ಇಲಾಖೆ ಅಧಿಕಾರಿಗಳು ಕೊವಿಡ್ 19 ತಡೆಗಟ್ಟಲು ಬೇಕಾದ ಮುನ್ನೇಚ್ಚರಿಕೆ ಕ್ರಮಗಳ ಬಗ್ಗೆ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ತಮ್ಮ ಕ್ಷೇತ್ರದಲ್ಲಿ ನಿಗಾ ವಹಿಸಬೇಕು. ಬೇರೆ ರಾಜ್ಯ, ಜಿಲ್ಲೆ, ಮತ್ತು ತಾಲೂಕಿನಿಂದ ಬಂದ ವ್ಯಕ್ತಿಗಳ ಆರೋಗ್ಯ ತಪಾಸಣೆ ಮಾಡಿ, ಕೊರೊನಾದ ಶಂಕೆ ಇದ್ದಲ್ಲಿ ತಾಲೂಕ ಆಡಳಿತಕ್ಕೆ ಶೀಘ್ರದಲ್ಲಿ ಮಾಹಿತಿ ನೀಡಲು ತಿಳಿಸಿದರು. ತಾಲೂಕಿನಲ್ಲಿಯ ಖಾಸಗಿ ಆಸ್ಪತ್ರೆಗಳು ಕಾರ್ಯ ಆರಂಭಿಸಿ ಕೊವಿಡ್ 19 ನಿಯಂತ್ರಸುವಲ್ಲಿ ಕೈಜೋಡಿಸಬೇಕು ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುದು ಎಂದು ಎಚ್ಚರಿಸಿದರು.
ತಾಲೂಕ ಅರೋಗ್ಯ ವೈದ್ಯಾಧಿಕಾರಿ ಮಹೇಶ ಚಿತ್ತರಗಿ ಮಾತಾನಾಡುತ್ತಾ ಸಾರ್ವಜನಿಕರು ಕೊರೊನಾ ಬಗ್ಗೆ ಭಯಭೀತರಾಗದೇ, ಕೇಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಕೊಂಡರೆ ಖಂಡಿತಾ ಕೊರೊನಾ ತಡೆಗಟ್ಟಲುಸ ಸಾಧ್ಯ ಎಂದು ನುಡಿದ ಅವರು ಸಮುದಾಯಕ್ಕೆ ಹರಡಂತೆ ಕೈಕೊಂಡ ಮುಂಜಾಗ್ರತ ಕ್ರಮಗಳು ಮತ್ತು, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಪ್ರತಿ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಕೈಕೊಂಡ ಕ್ರಮಗಳ ಬಗ್ಗೆ ಸಮಿತಿಗೆ ಮಾಹಿತಿ ನೀಡಿದರು.
ಡಿವೈಎಸ್ಪಿ ಶಂಕರಗೌಡ ಪಾಟೇಲ ಮಾತನಾಡುತ್ತಾ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕ್ವಾರಂಟೈನ್ ಮಾಡಲು ಹಾಗೂ ಇತರೆ ತೊಂದರೆ ಸಾರ್ವಜನಿಕರಿಂದಾ ಬಂದಾಗ ನಮಗೆ ತಳಿಸಿಬೇಕು ಪೊಲೀಸ್ ಇಲಾಖೆ ತಮ್ಮೊಂದಿಗೆ ಇದ್ದು ಕೊರೊನಾ ತಡೆಗಟ್ಟಲು ಕೈಜೊಡಿಸುತ್ತೆವೆ ಎಂದು ನುಡಿದರು. ತಹಶೀಲ್ದಾರ ಗಿರೀಶ್ ಸ್ವಾದಿ, ತಾಲೂಕ ಪಂಚಾಯತ ಕಾರ್ಯನಿವರ್ಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಹಾಗೂ ಕೊವಿಡ್ 19 ಟಾಸ್ಕ ಪೋರ್ಸ ಸಮಿತಿ ಸದಸ್ಯ ಇದ್ದರು.