ಕೊಟಬಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಹುಮಾನ

Prize for Kotabagi Government Higher Primary School

ಕೊಟಬಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಹುಮಾನ 

ಧಾರವಾಡ 06: ರಾಜ್ಯ ಸರ್ಕಾರ ಶಾಲಾ ಶಿಕ್ಷಣ ಇಲಾಖೆಯಿಂದ ಅತ್ಯುತ್ತಮ ಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿ ಸಮೀಕ್ಷೆ ನಡೆಸಿ ಧಾರವಾಡ ಗ್ರಾಮೀಣ ತಾಲೂಕಿನ ಕೊಟಬಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಗೆ ಶಾಲಾ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಕರ್ನಾಟಕ ಒಂದು ಲಕ್ಷ ರೂ. ನಗದು ಬಹುಮಾನ ಮತ್ತು ಪುಷ್ಠಿ ಗೌರವವನ್ನು ನೀಡಿ ಅಭಿನಂದಿಸಿದೆ. ತಾಲುಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರ ಆರ ಸದಲಗಿ ಮಾತನಾಡುತ್ತಾ ಪ್ರತಿ ತಾಲೂಕಿಗೆ ಒಂದರಂತೆ ವಿದ್ಯಾ ವಾಹಿನಿ ಪೋರ್ಟಲ್ ಮೂಲಕ ಆಯ್ಕೆಗೊಂಡಿದ್ದು, ರಾಜ್ಯದ 204 ಶಾಲೆಗಳಲ್ಲಿ ಕೊಟಬಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆ ಆಯ್ಕೆಯಾಗಿದೆ. ಒಂದು ಲಕ್ಷ ಬಹುಮಾನದ ಮೊತ್ತ ಶಾಲೆಯ ಅಭಿವೃದ್ದಿಗೆ ಬಳಸಿಕೊಳ್ಳಲು ಸೂಚಿಸಿದೆ ಎಂದರು. ಸಿ.ಆರ್‌.ಪಿ. ಆರ ಎಮ್ ಕುರ್ಲಿ ಮಾತನಾಡಿ, ಪುಷ್ಠಿ ಕಾರ್ಯಕ್ರಮದಡಿ ಉತ್ತಮ ಎಸ್‌. ಡಿಎಂಸಿ ಶಾಲೆ ಎಂದು ಹೆಸರು ಪಡೆದಿರುವ ಈ ಶಾಲೆಯು ಶೈಕ್ಷಣಿಕವಾಗಿ ಗುಣಮಟ್ಟವನ್ನು ಹೊಂದಿರುವ ಶಾಲೆಯಾಗಿದ್ದು, ಬಿಸಿ ಊಟ ನಿರ್ವಹಣೆಯಲ್ಲಿಯೂ ಅತ್ಯುತ್ತಮವಾಗಿದ್ದು, ಶಾಲೆ ಸವಾಂರ್ಗೀಣ ಅಭಿವೃದ್ಧಿ ಹೊಂದಿದ್ದು, ಕಂಪ್ಯೂಟರ್ ಸ್ಮಾರ್ಟ್‌ ಟಿವಿ ಇದರ ಸದುಪಯೋಗವನ್ನು ಪಡಿಸಿಕೊಂಡು ಹೆಚ್ಚು ಗುಣಮಟ್ಟದ ಶಿಕ್ಷಣ ಪಡೆದಿದೆ ಎಂದು ಹೇಳಿದರು. ಪ್ರಧಾನ ಗುರುಗಳಾದ ಮಹಾವೀರ್ ಭೀಮಪ್ಪ ಅಣ್ಣಿಗೇರಿ ಮಾತನಾಡಿ  ತುಂಬಾ ಸುಂದರವಾಗಿರುವ ಶಾಲೆಯಾಗಿದ್ದು, ಈ ಶಾಲೆಗೆ ಪ್ರಶಸ್ತಿ ಬಂದಿರುವುದು ಶ್ಲಾಘನೀಯ. ಶಾಲಾ ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ಎಸ್‌.ಡಿ.ಎಂ.ಸಿ ನಿರ್ವಹಣೆ ಉತ್ತಮವಾಗಿದೆ. ಎಸ್ ಡಿ ಎಮ್ ಸಿ ಅಧ್ಯಕ್ಷ ಮಲ್ಲಿಕಾರ್ಜುನ ನಾಗನಗೌಡರ ಮಾತನಾಡಿ ಈ ಪ್ರಶಸ್ತಿಯ ಗೌರವ ಸಂಪೂರ್ಣವಾಗಿ ಗ್ರಾಮದವರಿಗೆ ಸಲ್ಲಬೇಕು. ಜನಪ್ರತಿನಿಧಿ ಹಾಗೂ  ಅಧಿಕಾರಿ ವರ್ಗ ಹಾಗೂ ಸರ್ವ ಎಸ್ ಡಿ ಎಮ್ ಸಿ ಸದಸ್ಯರ  ಸಹಕಾರದಿಂದ ಸರ್ಕಾರದ ಪ್ರಶಸ್ತಿ ಲಭಿಸಿದೆ. ಈ ಒಂದು ಲಕ್ಷ ರು. ನಲ್ಲಿ ಶಾಲೆಗೆ ಪ್ರಿಂಟರ್, ಇನ್ವರ್ಟರ್, ವಾಟರ್ ಪ್ಯೂರಿಫೈರ್, ಗ್ರಂಥಾಲಯಕ್ಕೆ ರಾ​‍್ಯಕ್, ನಲಿಕಲಿ ಕುರ್ಚಿ, ಟೇಬಲ್, ತರಗತಿಗೆ ಡೆಸ್ಕ್‌ ಗಳನ್ನು ಖರೀದಿ ಮಾಡಿ ಶಾಲಾ ದಾಖಲಾತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಸುತ್ತೇವೆ ಎಂದು ಹೇಳಿದ್ದಾರೆ. ಮಕ್ಕಳ ಕಲಿಕೆ ವಾತಾವರಣ ತುಂಬಾ ಚೆನ್ನಾಗಿದ್ದು, ಶಾಲೆ ಹಸಿರು ಪರಿಸರದೊಂದಿಗೆ ಕಂಗೊಳಿಸುತ್ತಿದ್ದು, ಈ ಶಾಲೆಗೆ ದಾನಿಗಳ ನೆರವಿನ ಮಹಾಪೂರವನ್ನೇ ಹರಿಸಿದ್ದು, ಪುಸ್ತಕಗಳು, ಸ್ಮಾರ್ಟ್‌ ಟಿವಿ, ನಲಿಕಲಿ ಟೇಬಲ್, ಶಾಲೆಗೆ ಪೇಂಟ್ಸ್‌ ಮಾಡಿಸಿರುವುದು ಶಾಲೆಯಲ್ಲಿ ನಮ್ಮ ಸಹಕಾರ ತುಂಬಾ ಇದ್ದು, ಈ ಶಾಲೆಗೆ ಪ್ರಶಸ್ತಿ ಬಂದಿರುವುದು ಊರಿನವರಿಗೆ ತುಂಬಾ ಸಂತೋಷವಾಗಿದೆ ಎಂದರು.ಧಾರವಾಡ ಜಿಲ್ಲೆಯ ಧಾರವಾಡ ಗ್ರಾಮೀಣ  ತಾಲೂಕಿನ ಕೊಟಬಾಗಿ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಊರಿನ ಜನರ ಆಕಾಂಕ್ಷೆಗಳಿಗೆ ಸ್ಪಂದನವೆಂಬಂತೆ ಆರಂಭಗೊಂಡ ಶಾಲೆಯು ಈ ಗ್ರಾಮದ ಜನರ ಶೈಕ್ಷಣಿಕ ತೃಷೆಯನ್ನು ನೀಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾ ಬಂದು ಗ್ರಾಮದ ಪ್ರಗತಿಗೆ ಕಾರಣವಾಗಿದೆ. ದಿ: 19-08-1868 ರಂದು ಆರಂಭಗೊಂಡು ಹಂತ ಹಂತವಾಗಿ ಪ್ರಗತಿಯನ್ನು ಹೊಂದುತ್ತಾ ಸಂಭ್ರಮದಿಂದ 157ನೇ ಸಂವತ್ಸರಕ್ಕೆ ಕಾಲಿಡುವ ಸುಸಂದರ್ಭದಲ್ಲಿ ಶಿಕ್ಷಣಾಭಿಮಾನಿಗಳ, ಪೋಷಕರ ಮತ್ತು ಹಳೆವಿದ್ಯಾರ್ಥಿಗಳ ಅಪೇಕ್ಷೆಯಂತೆ ನಮ್ಮ ಶಾಲೆಯು ನಮ್ಮ ಹೆಮ್ಮೆಯ ಶಾಲೆಯಾಗಿ ಪರಿವರ್ತನೆಗೊಂಡು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಭಾಗೀದಾರರು, ದಾನಿಗಳು, ಶಿಕ್ಷಣ ಪ್ರೇಮಿಗಳ ಅಮೂಲ್ಯ ಸಲಹೆ ಸಹಕಾರಗಳಿಂದ ಶಾಲೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸುಸಜ್ಜಿತ ವಿಶಾಲ ಕ್ರೀಡಾಂಗಣ ಶಾಲೆಗೆ 3 ಎಕರೆ ಸ್ಥಳಾವಕಾಶವಿದ್ದು ಎಲ್ಲರ ಸಹಕಾರದಿಂದ ಮಕ್ಕಳ ಕ್ರೀಡಾ ಚಟುವಟಿ-ಕೆಗಳಿಗೆ ಯಶಸ್ವಿಯಾಗಿ ಬಳಸಲಾಗುತ್ತಿದೆ. ಆಕರ್ಷಕ ತರಗತಿ ಕೊಠಡಿಗಳು ದಾನಿಗಳ ನೆರವಿನಿಂದ ಅತ್ಯುತ್ತಮ ಗುಣಮಟ್ಟದ ಟೈಲ್ಸ್‌ ಅಳವಡಿಸಿ ಉಪಯುಕ್ತವಾದ ವಾಲ್‌ಸ್ಲೇಟ್‌ಗಳನ್ನು ರಚಿಸಲಾಗಿದೆ. ಮಕ್ಕಳ ವಯೋಮಾನಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ಆಕರ್ಷಕ ಪೀಠೋಪಕರಣಗಳನ್ನು ಸುಮಾರು 2.8 ಲಕ್ಷ ರೂ.ಗಳನ್ನು ದಾನಿಗಳ ನೆರವಿನಿಂದ ಸಜ್ಜುಗೊಳಿಸಿ ಅತ್ಯಂತ ಆಕರ್ಷಕ ತರಗತಿ ಕೊಠಡಿಗಳನ್ನು ರಚಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಕಲಿಕೆ ದಾನಿಗಳ ನೆರವಿನಿಂದ 40 ಸಾವಿರ ರೂ. ವೆಚ್ಚದಲ್ಲಿ ಎಲ್‌ಸಿಡಿ ಪ್ರೊಜೆಕ್ಟರ್ ಬಳಸಿ, ಕಲಿಕಾ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ದಾನಿಗಳ ನೆರವಿನಿಂದ ಅತ್ಯುತ್ತಮ ಗುಣಮಟ್ಟದ 10 ಕಂಪ್ಯೂಟರ್‌ಗಳನ್ನು ಅಳವಡಿಸಿ 1ನೇ ತರಗತಿಯಿಂದಲೇ ಕಂಪ್ಯೂಟರ್‌ನ ಮೂಲ ಪರಿಕಲ್ಪನೆಯನ್ನು ಪುಟ್ಟ ಮಕ್ಕಳಿಗೆ ನೀಡಲಾಗುತ್ತಿದೆ.