ಲೋಕದರ್ಶನ ವರದಿ
ರಾಯಬಾಗ 21: ತಾಲೂಕಿನ ಬಾವಚಿ ಗ್ರಾಮದಜೈ ಹನುಮಾನ ಹಾಗೂ ಬೀರೇಶ್ವರ ಜಾತ್ರೆಯು ವಿಜೃಂಭಣೆಯಿಂದ ಜರುಗಿತು. ಶುಕ್ರವಾರ ರಾತ್ರಿ ಜಾತ್ರೆ ನಿಮಿತ್ಯ ಏರ್ಪಡಿಸಲಾಗಿದ್ದ ಭವ್ಯ ರೇಕಾರ್ಡ ಡ್ಯಾನ್ಸ್ ಸ್ಪಧರ್ೆಗಳು ನೋಡುಗರನ್ನು ಮನರಂಜಿಸಿದವು.
ಶನಿವಾರ ಬೆಳಿಗ್ಗೆ ದೇವರಿಗೆ ನೈವೇದ್ಯ ಅಪರ್ಿಸಲಾಯಿತು. ನಂತರ ವಿವಿಧ ಶರ್ಯತ್ತುಗಳನ್ನು ಜರುಗಿದವು. ಡ್ಯಾನ್ಸ್ ಸ್ಪಧರ್ೆಗಳಲ್ಲಿ ಮತ್ತು ಶರ್ಯತ್ತುಗಳಲ್ಲಿ ವಿಜೇತರಾದವರಿಗೆ ಕಮೀಟಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಶನಿವಾರ ರಾತ್ರಿ ರಾಯಚೂರ ಜಿಲ್ಲೆಯ ಆಶಾಪೂರ ಸಂಗಮೇಶ್ವರನಾಟ್ಯ ಸಂಘದಿಂದ ಕೈಲಾಗದಗಂಡ ಕೈಲಾಸ ಕಂಡನಾಟಕ ಪ್ರದರ್ಶನಗೊಳ್ಳಲಿದೆ. ರವಿವಾರ ಬೆಳಿಗ್ಗೆ 10.30ಕ್ಕೆ ದೇವರ ಪಾಲಕಿಯ ಮೆರವಣಿಗೆ ಹಾಗೂ ದೇವರ ನುಡಿಗಳೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.
ಬಾವಚಿ ಹನುಮಾನದೇವರು ಭಕ್ತರ ಬೇಡಿಕೆ ಈಡೇರಿಸುತ್ತಾನೆ ಎಂಬ ಪ್ರತೀತಿ ಇದೆ. ಪ್ರತಿ ವರ್ಷ ಡಿಸೆಂಬರ್ದಲ್ಲಿ ಜರುಗುವ ಈ ಜಾತ್ರೆಗೆ ಬಾವಚಿ ಸುತ್ತಮುತ್ತಲಿನ ಗ್ರಾಮದ ಜನರು ಹಾಗೂ ಅಕ್ಕಪಕ್ಕದ ತಾಲೂಕಿನ ಭಕ್ತರು ಆಗಮಿಸಿ, ತಮ್ಮ ಹರಕೆಯನ್ನು ತೀರಿಸುತ್ತಾರೆ.
ವಿವಿಧ ಶರ್ಯತ್ತುಗಳಲ್ಲಿ ಬಹುಮಾನ ಪಡೆದವರ ವಿವರ: ಜೋಡು ಎತ್ತಿನಗಾಡಿ ಶರ್ಯತ್ತಿನಲ್ಲಿ ದಾನೋಳಿಯ ಬಂಡುಖಿಲಾರೆ ಪ್ರಥಮ, ಬಿಕನಾಳದ ವಿನೋದ ಪರಟ್ಟಿ ದ್ವಿತೀಯ, ದಾನೋಳದ ಅಮರ ಶಿಂದೆ ತೃತೀಯ ಮತ್ತು ಚಿಂಚಲಿಯ ಸಚಿನ ಕೋಳಿ ಚತುರ್ಥ ಬಹುಮಾನ ಪಡೆದರು.
ಕುದುರೆ ಮತ್ತುಎತ್ತಿನಗಾಡಿ ಶರ್ಯತ್ತಿನಲ್ಲಿ ದಾನೋಳಿಯ ಬಂಡುಖಿಲಾರೆ ಪ್ರಥಮ, ಚಂದ್ರುಉಮ್ರಾಣಿ ದ್ವಿತೀಯ, ಹಿರೇಕೊಡಿಯ ಸಂಜು ಬಂಡಗರತೃತೀಯ ಬಹುಮಾನ ಪಡೆದರು.
ಕುದುರೆ ಮತ್ತು ಹಲ್ಲು ಹಚ್ಚದಕರ ಶರ್ಯತ್ತಿನಲ್ಲಿ ಬಾವಚಿಯ ಪಾಂಡು ಶೆಡಬಾಳೆ ಪ್ರಥಮ, ಚಿಕ್ಕೋಡಿಯ ಸಂತೋಷ ಜಯವಂತ ದ್ವಿತೀಯ ಹಾಗೂ ಚಿಕ್ಕೋಡಿಯ ಸಾಗರದೇವ ಕರತೃತೀಯ ಬಹುಮಾನ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಹಾದೇವ ನಾಯಿಕ, ಮಾರುತಿ ನಾಯಿಕ, ನ್ಯಾಯವಾದಿ ಕೆ.ಎಸ್.ಫುಂಡಿಪಲ್ಲೆ, ಬಿ.ಎಮ್.ನಾಯಿಕ, ಎಮ್.ಎಮ್.ಪಾಟೀಲ, ಸಿದ್ದಗೌಡ ಪಾಟೀಲ, ನಿಂಗಪ್ಪ ನಾಯಿಕ, ಶಂಕರ ನಾಯಿಕ, ಜೋತೆಪ್ಪ ಫುಂಡಿಪಲ್ಲೆ, ಅವಗೌಡ ಪಾಟೀಲ, ದಯಾನಂದ ನಾಯಿಕ, ಶಿವಾನಂದ ಅಂಕಲಿ, ರಾಜುಜಲಾಲಪೂರೆ, ಎಮ್.ಎಸ್.ನಾಯಿಕ, ಮಹಾದೇವ ಐಹೊಳೆ, ಎಮ್.ವಾಯ್. ಬಡಿಗೇರ, ಸೇರಿದಂತೆ ಜಾತ್ರಾಕಮೀಟಿ ಸದಸ್ಯರು, ಗ್ರಾ.ಪಂ.ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.