ಲೋಕದರ್ಶನ ವರದಿ
ಕಾಗವಾಡ 25: ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನ ಆರೋಗ್ಯ ಸದೃಢವಾಗಿ ಕಾಯ್ದುಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲೇಬೇಕು. ಯಾವುದೇ ಕ್ರೀಡಾ ಸ್ಪರ್ದೇಯಲ್ಲಿ ಸ್ಪರ್ಧಾಳುಗಳು ಕ್ರೀಡಾ ಮನೋಭಾವನೆಯಿಂದ ಸ್ಪಧರ್ಿಸಬೇಕು. ಬೆಳಗಾವಿ ವಿಭಾಗಿ ವಲಯದಿಂದ20 ತಂಡಗಳು ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಸ್ಪರ್ಧೆ ಯಶಸ್ವಿಗೊಳಿಸಿದ ಕ್ರೀಡಾಪಟುಗಳಿಗೆ ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ಅಭಿನಂದನೆ ಸಲ್ಲಿಸಿದರು.
ಗುರುವಾರ ಸಂಜೆ ಶೇಡಬಾಳದ ಸನ್ಮತಿ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ಜಿಲ್ಲಾ ವಿಭಾಗ ಮಟ್ಟದ ಹ್ಯಾಂಡ್ಬಾಲ್ ಸ್ಪರ್ಧೆಯ ವಿಜೇತರ ತಂಡಗಳೀಗೆ ಬಹುಮಾನ ವಿತರಿಸಿ ಡಿಡಿಪಿಐ ಮಾತನಾಡಿದರು.
ಬೆಳಗಾವಿ ವಿಭಾಗೀಯ ಮಟ್ಟದ ಹ್ಯಾಂಡ್ಬಾಲ್ ಸ್ಪಧರ್ೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗಾವಿ, ಬಾಗಲಕೋಟ, ಹಾವೇರಿ, ಧಾರವಾಡ, ವಿಜಯಪುರ ಈ ಐದು ಜಿಲ್ಲೆಗಳಿಂದ 20 ತಂಡಗಳು ಸ್ಪರ್ಧಿಸಿದವು.
ಸ್ಪರ್ಧಿಗಳು ಜಿಟಿಜಿಟಿ ಮಳೆಯಿದ್ದರೂ ಕಾಗವಾಡದ ಮಲ್ಲಿಕಾರ್ಜುನ ವಿದ್ಯಾಲಯ, ಉಗಾರ ಬುದ್ರುಕ ಜೈಜೀನೇಂದ್ರ ಶಿಕ್ಷಣ ಸಂಸ್ಥೆಯ ಸಭಾ ಭವನದಲ್ಲಿ ನೆರವೇರಿದವು. ಪ್ರಾಥಮಿಕ ವಿಭಾಗದಲ್ಲಿ ವಿದ್ಯಾಥರ್ಿಗಳಲ್ಲಿ ಪ್ರಥಮ ಹಾವೇರಿ, ದ್ವೀತಿಯ ಚಿಕ್ಕೋಡಿ ವಿಭಾಗದ ತಂಡಗಳು ಯಶಸ್ವಿವಾದವು. ಪ್ರೌಢ ವಿಭಾಗದ ಸ್ಪರ್ದೇಯಲ್ಲಿ ಪ್ರಥಮ ಹಾವೇರಿ, ದ್ವೀತಿಯ ಚಿಕ್ಕೋಡಿ, ವಿದ್ಯಾರ್ಥಿನಿಯರ ತಂಡದಲ್ಲಿ ಪ್ರಥಮ ಬಾಗಲಕೋಟ, ದ್ವೀತಿಯ ಧಾರವಾಡ ಜಿಲ್ಲೆಯ ತಂಡದ ವಿದ್ಯಾರ್ಥಿಗಳು ಯಶಸ್ವಿವಾದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಚಿಕ್ಕೋಡಿ ಶಿಕ್ಷಣಾಧಿಕಾರಿ ಗಂಗಾಧರ, ಕಾಗವಾಡ ಬಿಇಓ ಎ.ಎಸ್.ಜೋಡಗೇರಿ, ಚಿಕ್ಕೋಡಿ ಜಿಲ್ಲಾ ದಹಿಕ ಶಿಕ್ಷಣಾಧಿಕಾರಿ ಸಿ.ಎಂ.ಸಾಂಗಲೆ, ಸನ್ಮತಿ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ವಿನೋದ ಬರಗಾಲೆ, ಶೇಡಬಾಳ ಪಟ್ಟಣ ಪಂಚಾಯತಿ ಸದಸ್ಯ ವೃಷಭ ಚೌಗುಲೆ, ಮುಖ್ಯಾಧ್ಯಾಪಿಕೆ ಎಂ.ಎನ್.ಕಾಳೆನಟ್ಟಿ, ಪಟ್ಟಣ ಪಂಚಾಯತಿ ಸದಸ್ಯರು, ಕ್ಷೇತ್ರ ಸಮನ್ವಯ ಅಧಿಕಾರಿ ಆರ್.ಎಚ್.ಖಡಾಖಡಿ, ದಹಿಕ ಶಿಕ್ಷಕರ ಸಂಘದ ಆಧ್ಯಕ್ಷ ಎಲ್.ವೈ.ಚೌಗುಲೆ, ಸಿ.ಎಂ.ಸಂತೋಷ, ಆರ್.ವ್ಹಿ.ಕಾಂಬಳೆ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.