ಪ್ರಿಯಾಂಕ ಜನ್ಮದಿನ: ರಾಬರ್ಟ್ ವಾದ್ರಾ, ಕಾಂಗ್ರೆಸ್ ನಾಯಕರಿಂದ ಶುಭಾಷಯ

ನವದೆಹಲಿ, ಜ.12:      ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ತನ್ನ ಪತ್ನಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜನ್ಮದಿನದ ಅಂಗವಾಗಿ ಉದ್ಯಮಿ ಹಾಗೂ ಪತಿ, ರಾಬರ್ಟ್ ವಾದ್ರಾ   ಶುಭಾಶಯ ಕೋರಿದರು.

ಪ್ರೀ, ಜನ್ಮದಿನದ ಶುಭಾಶಯಗಳು. ಈ ವರ್ಷ ನಿಮಗೆ ಸಂತೋಷಪೂರ್ಣವಾಗಲಿ, ನಿಮ್ಮ ಎಲ್ಲಾ ಇಚ್ಛೆಗಳು ಪೂರ್ಣಗೊಳ್ಳಲಿ, ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯಕರ ವರ್ಷ ನಿಮಗೆ ದೊರೆಯಲಿ. ನಿಮ್ಮ ಕುಟುಂಬವು ಪ್ರತಿದಿನ ನಿಮ್ಮೊಂದಿಗೆ ನಿಲ್ಲುತ್ತದೆ ಎಂದು ವಾದ್ರಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕ ಹಾರೂನ್ ಯೂಸುಫ್ ಕೂಡ ಪ್ರಿಯಾಂಕ ಅವರಿಗೆ ಶುಭಕೋರಿದ್ದಾರೆ.

ದೇಶದ ಜಾತ್ಯತೀತ ತತ್ವವನ್ನು ನಾಶಮಾಡುತ್ತಿರುವ ವಿಭಜಕ ಶಕ್ತಿಗಳ ವಿರುದ್ಧ ಹೋರಾಡುತ್ತಿರುವ ನಿಮಗೆ ದೇವರು ನಿಮಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಯೂಸುಫ್ ಶುಭಕೋರಿದ್ದಾರೆ.