ಬೆಳಗಾವಿ: ಜಾನಪದ ಹಾಡುಗಾರಿಕೆ ಪ್ರೋತ್ಸಾಹಿಸಲು ಪ್ರಿಯಾ ಪುರಾಣಿಕ ಕರೆ

ಲೋಕದರ್ಶನ ವರದಿ

ಬೆಳಗಾವಿ 04:  ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಕರೋಕೆ ಹಾಡುಗಾರಿಕೆಯನ್ನು ಇಷ್ಟಪಡುತ್ತಿದ್ದು ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು  ಸಂಗೀತದಲ್ಲಿ ಅಭಿರುಚಿ ಬೆಳೆಸಿಕೊಳ್ಳಲಾಗುತ್ತಿದೆ.  ಇಂತಹ  ಸಂಗೀತ ಪ್ರೇಮಿಗಳಿಗ ಕರೋಕೆ ಹಾಡುಗಾರಿಕೆಯಲ್ಲಿ ತರಬೇತಿ ಕೊಡುವದರ ಜೊತೆಗೆ ನಮ್ಮ ಸಾಹಿತ್ಯ-ಕಲೆ-ಸಂಸ್ಕೃತಿಯನ್ನು ಬಿಂಬಿಸುವ ಜಾನಪದ  ಪದಗಳನ್ನು  ಸಂಗ್ರಹಿಸಿ, ದಾಖಲಿಸಿ ಇಡುವ ಕಾರ್ಯದಲ್ಲಿ ಇಂತಹ ಅಕಾಡಮಿಗಳು ಕಾರೋನ್ಮುಖರಾಗುವಂತೆ ಬೆಳಗಾವಿಯ ಮಹಿಳಾ ಉದ್ಯಮಿ ಹಾಗೂ ಲಘು ಉದ್ಯೋಗ ಭಾರತಿ ಸಂಸ್ಥೆಯ ರಾಜ್ಯ ಕಾರ್ಯದಶರ್ಿ ಪ್ರಿಯಾ ಪುರಾಣಿಕ,  ಅವರು ಕರೆ ಕೊಟ್ಟರು.  

     ದಿ. 02 ರಂದು  ಸಾಯಂಕಾಲ 5 ಘಂಟೆಯಿಂದ ಲೋಕಮಾನ್ಯ ರಂಗ ಮಂದಿರ ಕೋನವಾಳ ಬೀದಿ, ಬೆಳಗಾವಿಯಲ್ಲಿ  ಏರ್ಪಡಿಸೆಲಾದ ನಿವೇದಾರ್ಪಣ ಅಕಾಡಮಿ ಆಫ್, ಮ್ಯುಜಿಕ, ಬೆಳಗಾವಿ ಇವರ  ಕರೋಕೆ ಹಾಡುಗಾರರ ತಂಡ ''ಶರಧಿ ಲಾಂಛನ ಬಿಡುಗಡೆ ಹಾಗೂ ಮೊದಲ  ಶರಧಿ ಸಂಗೀತ ಕಾರ್ಯಕ್ರಮದ ಉಧ್ಥಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಪ್ರಿಯಾ ಪುರಾಣಿಕ ಅವರು ಜಾನಪದ ಕಲೆಯ ಉಳಿವಿಗಾಗಿ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು.  ಪ್ರತಿಯೊಂದು ಸಂದರ್ಭಗಳಲ್ಲಿ  ನಮ್ಮ ಸಂಸ್ಕೃತಿ ಸಾಹಿತ್ಯವನ್ನು ಬಿಂಬಿಸುವ ನಮ್ಮ ಹಿರಿಯರು ಹಾಡುಗಳನ್ನು ಹೇಳುತ್ತ ತಮ್ಮ ದಿನನಿತ್ಯ್ದ ಕಾಯಕಗಳಿಗೆ ತಾವೇ ಪ್ರೇರಣೆಯಾಗಿದ್ದ ಹಾಡುಗಳು  ಇಂದು ಮಾಯವಾಗುತ್ತಿದ್ದು, ಇಂತಹ ಹಾಡುಗಳನ್ನು ಹಿರಿಯರಿಂದ ದಾಖಲಿಸಿಕೊಂಡು ಜಾನಪದ ಹಾಡುಗಳನ್ನು  ಸಂಗೀತಬದ್ದವಾಗಿ  ಹಾಡಲು ಸಹ  ತರಬೇತಿ ನೀಡುವಂತೆ ಕೋರಿದರು. 

      ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಿವೇದಾರ್ಪಣ ಅಕ್ಯಾಡಮಿ ವಿದ್ಯಾಥರ್ಿಗಳಿಂದಲೇ ನಡೆಸಲಾಗುತ್ತಿದ್ದು, ಈ ರೀತಿಯಾಗಿ ಬೃಹತ್ ಸಾರ್ವಜನಿಕ ವೇದಿಕೆಗಳಲ್ಲಿ ಕರೋಕೆ ಸಂಗೀತ ಪ್ರಸ್ತುತಪಡಿಸಲು ಅಕ್ಯಾಡಮಿಯಲ್ಲಿ ತರಬೇತಿ ಪಡೆದ ವಿದ್ಯಾಥರ್ಿಗಳ ವೃಂದವನ್ನು  "ಶರಧಿ " ಹೆಸರಿನಲ್ಲಿ ರಚಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥೆ ನಿವೇದಿತಾ ಚಂದ್ರಶೇಖರ ಈ ಸಂದರ್ಭದಲ್ಲಿ ತಿಳಿಸಿದರು. ಉಧ್ಘಾಟನಾ ಕಾರ್ಯಕ್ರಮದ ನಂತರ ಕನ್ನಡ, ಹಿಂದಿ ಚಲನಚಿತ್ರಗೀತೆಗಳ ಹಾಗೂ ಭಾವಗೀತೆಗಳ ಮೂಲಕ  ಜನರನ್ನು ಮನರಂಜಿಸಿಲಾಯಿತು.