ಹೆಣ್ಣು ಮಕ್ಕಳು ಸಮಸ್ಯೆಗಳಿಗೆ ಖಾಸಗಿ ಆಸ್ತಿಯ ಮನೋಭಾವವೇ ಕಾರಣ: ರೆಡ್ಡಿ

ವಿಜಯಪುರ೦೯: ನಗರದ  ಎಐಎಮ್ಎಸ್ಎಸ್ ಮಹಿಳಾ ಸಂಘಟನೆ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತು ನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

        ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಮಾತನಾಡಿದ ಎಐಎಮ್ಎಸ್ಎಸ್ ನ ಜಿಲ್ಲಾ ಸಂಚಾಲಕರಾದ ಶಿವಬಾಳಮ್ಮ ಕೊಂಡುಗುಳಿ ಇವರು ಮಹಿಳೆ ಇಂದು ಎರಡು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾಳೆ. ಇಂದು ಕೆಲವು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದ್ದರೂ, ಒಟ್ಟಾರೆ ಮಹಿಳೆಯರ ಸ್ಥಿತಿ ಶೋಚನೀಯವಾಗಿದೆ. ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಮಹಿಳಾ ಸಮುದಾಯದ ನೈಜ ಕನಸುಗಳಾದ ಸ್ವಾತಂತ್ರ್ಯ ಸಮಾನತೆ ಮತ್ತು ಗೌರವಯುತ ಜೀವನ ನನಸಾಗದೆಯೇ ಉಳಿದಿದೆ.. ಹಳೆಯ ಪ್ರತಿಗಾಮಿ ಧೋರಣೆಯಿಂದ ಹೆಣ್ಣು ಮಗುವಿನ ಹುಟ್ಟನ್ನು ನಿರಾಕರಿಸಲಾಗಿದೆಎಂದರು.  

        ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನೀಲಮ್ಮ ಹತ್ತಹಳ್ಳಿ ಉಪನ್ಯಾಸಕರು ಸಕರ್ಾರಿ ಪ್ರಥಮ ದಜರ್ೆ ಕಾಲೆಜು ವಿಜಯಪುರ ಇವರು ಆಗಮಿಸಿ ಮಹಿಳೆರಯರು ಪ್ರಾಚೀನ ಕಾಲದಿಂದಲೂ ಬೇರೆ ಬೇರೆ ಕ್ಷೇತ್ರದಲ್ಲಿ ಅವರ ಸಾಮಥ್ರ್ಯಕ್ಕನುಗುಣವಾಗಿ ಸಾಧನೆ ಮಾಡುತ್ತಾ ಬಂದಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಆದರೆ ಇನ್ನೂ ಅವರ ಪರಿಸ್ಥಿತಿ ಚೆನ್ನಾಗಿಲ್ಲ. ಏಕೆಂದರೆ ಅಂತಹ ಭಯಾನಕ ಘಟನೆಗಳು ಜರುಗುತ್ತಿವೆ. ಹೆಣ್ಣು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಈಶ್ವರಚಂದ್ರ ವಿದ್ಯಾಸಾಗರ, ಸಾವಿತ್ರಿಬಾಯಿ ಫುಲೆ, ಜ್ಯೋತಿಬಾಫುಲೆ ಗಾಂಧಿಜಿಯವರ ಮುಂತಾದ ಮಹನೀಯರು ಶ್ರಮಿಸಿದ್ದಾರೆ. ಆದರೂ ಇನ್ನೂ ಅವರ ಕನಸು ನನಸಾಗಿಲ್ಲ. ಎಲ್ಲರೂ ಒಂದಾಗಿ ಸಮಾಜದ ಬದಲಾವಣೆಗಾಗಿ ಮನಸ್ಸು ಮಾಡಬೇಕು. ಇಂತಹ ಕಾರ್ಯಕ್ರಮಗಳು ಚಿಂತನೆಗಳು ನಡೆದಾಗ ನಮ್ಮಲ್ಲಿಯೂ ಬದಲಾವಣೆ ಬರುತ್ತದೆ. ಹಾಗಾಗಿ ನಾವೆಲ್ಲ ಕೈ ಜೋಡಿಸೋಣ ಎಂದರು.

 ಈ ಕಾರ್ಯಕ್ರಮಕ್ಕೆ ಭಾಷಣಕಾರರಾಗಿ ಆಗಮಿಸಿದ ಶ್ರೀ ಭಗವಾನ್ ರೆಡ್ಡಿ ಯವರು ಮಾತನಾಡುತ್ತಾ ಹೆಣ್ಣು ಮಕ್ಕಳು ಸಮಸ್ಯೆಗಳಿಗೆ ಖಾಸಗಿ ಆಸ್ತಿಯ ಮನೋಭಾವವೇ ಕಾರಣ. ಯಾವಾಗ ಸಮಾಜದಲ್ಲಿ ಖಾಸಗಿ ಆಸ್ತಿಯ ಮನೋಭಾವ ಬಂತು ಅವಾಗ ಮಹಿಳೆಯರು ಕೂಡ ಪುರುಷರ ಆಸ್ತಿಯಾಗಿ ಮಾರ್ಪಟ್ಟರು. ಪುರುಷ ಪ್ರಧಾನ ಧೋರಣೆ ಅವರನ್ನು ಶೋಷಿತ ಮಾನಗಳಿಂದ ತುಳಿಯುತ್ತಾ ಬಂದಿವೆ. ಆದರೆ ಇತಿಹಾಸದ ಕೆಲವು ಹೋರಾಟದಿಂದಾಗಿ ಅವರ ಸ್ಥಾನಮಾನದಲ್ಲಿಯೂ ಬದಲಾವಣೆಯಾಗಿದೆ. ಆದರೆ ಪೂತರ್ಿ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅಂತಹ ಹೋರಾಟದ ದಿನವಾದ ಮಾಚರ್ಿ 8 ವಿಶ್ವ ಮಹಿಳಾ ದಿನವಾಗಿದೆ. ಮಹಿಳೆಯರು ಸುಮಾರು 110 ವರ್ಷಗಳ ಹಿಂದೆ ತಮ್ಮ ಹಕ್ಕುಗಳಿಗಾಗಿ ಅಮೇರಿಕಾದ ಜವಳಿ ಕಾಖರ್ಾನೆಯ ಸಾವಿರಾರು ಮಹಿಳೆಯರು ಬೃಹತ್ ಹೋರಾಟ ನಡೆಸಿದರು. ಇಂತಹ ಇತಿಹಾಸವನ್ನು ಹೊಂದಿದ ದಿನವಾದ ಇಂದು ಎಲ್ಲಾ ಮಹಿಳೆಯರು ಬೆಲೆ ಏರಿಕೆ, ಭ್ರಷ್ಟಚಾರ, ಅಶ್ಲೀಲ ಸಿನಿಮಾ ಸಾಹಿತ್ಯ, ನಿರುದ್ಯೋಗ ಮುಂತಾದ ಸಮಸ್ಯೆಗಳ ವಿರುದ್ದ ಧ್ವನಿ ಎತ್ತವುದು ಅವಶ್ಯಕವಾಗಿದೆ. ದೇಶದಲ್ಲಿ ಎಲ್ಲರೂ ಸುಖವಾಗಿ ಬದುಕಿ ಬಾಳುವಂತಹ ಐಕ್ಯ ಹೋರಾಟಕ್ಕೆ ನಾವೆಲ್ಲ ಇಂದು ಸಜ್ಜಾಗಬೇಕಾಗಿದೆ. ಎಲ್ಲರೂ ಅಂತಹ ಹೊಸ ಸಮಾಜದ ಬರುವಿಗಾಗಿ ಪಣ ತೊಟ್ಟು ಕೆಲಸ ಮಾಡಲು ಮುಂದಾಗಿ ಎಂದು ಕರೆ ನೀಡಿದರು.ಅಧ್ಯಕ್ಷತೆಯನ್ನು ಜಿಲ್ಲಾ ಸಹಸಂಚಾಲಕರಾದ ಗೀತಾ.ಹೆಚ್ ರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಲತಾ, ರೂಪ, ಗುರುಬಾಯಿ, ಪ್ರಿಯಾಂಕ, ಶ್ವೇತಾ, ವಿಜಯಲಕ್ಷ್ಮಿ ಭಜಂತ್ರಿ, ಗೀತಾ ನಿಕ್ಕಂ, ಇನ್ನಿತರ ಹಲವಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.