ಸಾರ್ವಜನಿಕ ಶಿಕ್ಷಣ ಬಲಪಡಿಸುವಲ್ಲಿ ಖಾಸಗಿ ಸಹಭಾಗಿತ್ವ ಅಗತ್ಯ: ಸುರೇಶ್ ಕುಮಾರ್

 ಬೆಂಗಳೂರು, ಜ 17 :         ರಾಜ್ಯದ ಹಲವು ಶಾಲೆಗಳಲ್ಲಿ ಕನಿಷ್ಠ ಶೌಚಾಲಯ ಇಲ್ಲ, ಇಂತಹ ಕೊರತೆಗಳ ಮಧ್ಯೆಯೂ ಸರ್ಕಾರಿ ಶಾಲಾ ಮಕ್ಕಳು ಆತ್ಮವಿಶ್ವಾಸದಿಂದ ಅಧ್ಯಯನ ಮಾಡುತ್ತಿದ್ದು, ಸಾರ್ವಜನಿಕ ಶಿಕ್ಷಣ ಬಲಪಡಿಸಲು ಖಾಸಗಿ ಸಹಭಾಗಿತ್ವ ಅಗತ್ಯ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರತಿಪಾದಿಸಿದ್ದಾರೆ. 

ಶಿಕ್ಷಣ ಇಲಾಖೆ ಅತಿ ದೊಡ್ಡ ಇಲಾಖೆಯಾಗಿದ್ದು, ನಾಡಿನ ಮಕ್ಕಳ  ಸಮಗ್ರ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮುದಾಯದ ಸಹಭಾಗಿತ್ವ ತೀರಾ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಬಲಪಡಿಸಲು ಖಾಸಗಿ ವಲಯ ಮುಂದಾಗಬೇಕು ಎಂದಿದ್ದಾರೆ. 

       ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಶುಕ್ರವಾರ ವಿಕಾಸಸೌಧದಲ್ಲಿ ನಡೆದ 'ಸಾರ್ವಜನಿಕ ಶಿಕ್ಷಣ ಬಲಪಡಿಸುವಲ್ಲಿ ಖಾಸಗಿ ಸಹಭಾಗಿತ್ವ' ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಅಗಾಧ ವಿಸ್ತಾರ ಹೊಂದಿರುವ ಶಿಕ್ಷಣ ಇಲಾಖೆಯ ಇಂದಿನ ಅಗತ್ಯಗಳನ್ನು ಪೂರೈಸಲು ಖಾಸಗಿ ಸಹಭಾಗಿತ್ವ ಅಗತ್ಯ ಮತ್ತು ಅನಿವಾರ್ಯವೂ ಆಗಿದೆ ಎಂದರು. 

 ಈ ಮೂಲಕ ನಮ್ಮಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಬೇಕಾದ ಅಗತ್ಯವಿದ್ದು, ಅದಕ್ಕಾಗಿ ಏರ್ಪಡಿಸಿರುವ ಈ ಸಂವಾದಕ್ಕೆ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದನ್ನು ಕಂಡು ಮನಸ್ಸುತುಂಬಿ ಬಂದಿದೆ. ಪ್ರತಿ ತಿಂಗಳೂ ನಡೆಸಿಕೊಡುವ ಸಂವೇದನಾ-ಸಂವಾದ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ಮಕ್ಕಳು ನನ್ನೊಂದಿಗೆ ಮಾತನಾಡುವಾಗ ನಮಗೆ ಕಂಪ್ಯೂಟರ್ ಅಗತ್ಯವಿದೆ ಎಂದು ಕೇಳುತ್ತಾರೆ. ನಿಜಕ್ಕೂ ಅವರಿಗೆ ಅದು ಬೇಕಾಗಿದೆ. ಮಕ್ಕಳು ಬಡತನದ ಹಿನ್ನೆಲೆಯಿಂದ ಬಂದಿರುವುದರಿಂದ ಅವುಗಳನ್ನು ಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಅಗತ್ಯತೆ ಪೂರೈಸಬೇಕಾದರೆ ಸಮುದಾಯದ ಸಹಭಾಗಿತ್ವ ಅತ್ಯಂತ ಪ್ರಮುಖವಾದು ಎಂದು ಸಚಿವರು ಅಭಿಪ್ರಾಯಪಟ್ಟರು.  

ನೆರೆ ಹಾವಳಿ ಸಂದರ್ಭದಲ್ಲೇ ಶಿಕ್ಷಣ  ಇಲಾಖೆಯ  ಜವಾಬ್ದಾರಿಯನ್ನು ವಹಿಸಿಕೊಂಡ ನಾನು ಮಕ್ಕಳ ಪುಸ್ತಕ, ಪೆನ್ನುಗಳ ಸಮೇತ ಮನೆಗಳು ಮತ್ತು ಶಾಲೆಗಳು ಮುಳುಗಿ ಹೋದ ಘಟನೆಗಳನ್ನು ಕಣ್ಣಾರೆ ಕಂಡಿದ್ದೇನೆ. ಆ ಮಕ್ಕಳ ಶಿಕ್ಷಣಕ್ಕಾಗಿ ಸಮುದಾಯ ಬೆಂಬಲಕ್ಕೆ ನಿಲ್ಲಬೇಕಾದ ಅನಿವಾರ್ಯ ಕರ್ತವ್ಯವೂ  ನಮ್ಮದಾಗಿದೆ. ನೆರೆ ಸಂದರ್ಭದಲ್ಲಿ ಮಕ್ಕಳನ್ನು ಸಕರ್ಾರಿ, ಅನುದಾನಿತ, ಅನುದಾನರಹಿತ ಎಂಬ ಭೇದವಿಲ್ಲದೇ ಎಲ್ಲರಿಗೂ ಇನ್ನೊಂದು ಸೆಟ್ ಪಠ್ಯಪುಸ್ತಕಗಳನ್ನು ಕೇವಲ ಮೂರು ವಾರದಲ್ಲಿ ಪೂರೈಸಲು ಕ್ರಮಕೈಗೊಳ್ಳಲಾಯಿತು ಎಂದು ಸಚಿವರು ತಿಳಿಸಿದರು. 

      ಶಾಲೆಗಳು ಮುಳುಗಿ, ನೆರೆ ಇಳಿದ ನಂತರ ಮಕ್ಕಳು ಶೆಡ್ ಗಳು, ತೆಂಗಿನ ಗರಿಯ ಚಪ್ಪರ, ತಗಡಿನ ನೆರಳಲ್ಲಿ ಪಾಠ ಪ್ರವಚನ ಆಲಿಸುತ್ತಿವಂತಹ ಅನುಭವಗಳನ್ನು ಕಂಡಿದ್ದೇನೆ.  ಈ ಎಲ್ಲ ಲೋಪಗಳ ಹೊರತಾಗಿಯೂ ನಾವು ನಮ್ಮ ಮಕ್ಕಳ ಆತ್ಮವಿಶ್ವಾಸ ಕುಗ್ಗದಂತೆ ಕೆಲಸ ಮಾಡಬೇಕಾಗಿದ್ದು, ಎಲ್ಲ ರೀತಿಯಲ್ಲೂ ಇದಕ್ಕೆ ಸರ್ವರ ಅಪಾರ ಬೆಂಬಲ, ಸಹಾಯ, ಸಹಕಾರದ ಅಗತ್ಯವಿದೆ ಎಂದು ಸುರೇಶ್ ಕುಮಾರ್ ಹೇಳಿದರು.   

ಶಾಲಾ ಮಕ್ಕಳಿಗಾಗಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏರ್ಪಡಿಸಿರುವ 'ಪರೀಕ್ಷಾ ಪೇ ಚಚರ್ಾ' ಕಾರ್ಯಕ್ರಮಕ್ಕೆ ನಮ್ಮ ರಾಜ್ಯದ 42 ಮಕ್ಕಳು ಆಯ್ಕೆಯಾಗಿದ್ದು, ಅದರಲ್ಲಿ 27 ಮಕ್ಕಳು ಸಕರ್ಾರಿ ಶಾಲೆ ಮಕ್ಕಳು ಎನ್ನುವುದು ನಿಜಕ್ಕೂ ಸಂತಸದ ಸಂಗತಿ. ನಮ್ಮ ಸಕರ್ಾರಿ ಶಾಲೆಗಳ ಹಾಗೂ ಸಕರ್ಾರಿ ಶಿಕ್ಷಕರ ಕಾರ್ಯಕ್ಷಮತೆ ಯಾವುದೇ ಖಾಸಗಿ ಶಾಲೆಗಳಿಗೆ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾದರಪಡಿಸಿವೆ. ಇದಕ್ಕೆ ನಮ್ಮ ಸಮುದಾಯದ ಬೆಂಬಲವೂ ದೊರೆತರೆ ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯವಾಗುತ್ತದೆ ಎಂದು ಸುರೇಶ್ ಕುಮಾರ್ ಹೇಳಿದರು.  

ಇದುವರೆಗೆ ಶಾಲಾ ಕಟ್ಟಡ, ಕೊಠಡಿಗಳನ್ನು ನಿಮರ್ಿಸಲು ಮುಂದಾಗುತ್ತಿದ್ದ ಭಾರತೀಯ ಯುವ ತೇರಾಪಂತ್ ಸಮಿತಿಯ ವಿಮಲ್ ಕಠಾರಿಯಾ ಅವರು, ಶಾಲೆಗಳಿಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡುವ  ಉಪಕ್ರಮಕ್ಕೆ ಮುಂದಾಗಿದೆ. ಸಾಂಕೇತಿಕವಾಗಿ ಕಂಪ್ಯೂಟರ್, ಲ್ಯಾಪ್ ಟಾಪ್ ಸೆಟ್ ಗಳನ್ನು ಶಿಕ್ಷಣ  ಇಲಾಖೆ ಆಯುಕ್ತರಿಗೆ ಹಸ್ತಾಂತರಿಸಿದರು. 

100 ಶಾಲಾ ಕೊಠಡಿಗಳ ನಿಮರ್ಾಣ ಪ್ರಗತಿಯಲ್ಲಿವೆ , ಇನ್ನು ನಾವು ಶಾಲೆಗಳಲ್ಲಿ ಹಸಿರೀಕರಣ ಮತ್ತು ಡಿಜಿಟಲ್ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು. ಸ್ಯಾಮ್ ಸಂಗ್ ಕಂಪನಿಯವರು ತುಮಕೂರು ಮತ್ತು ರಾಮನಗರ ಜಿಲ್ಲೆಯ 50 ಶಾಲೆಗಳಿಗೆ 1000 ಇ-ಕಂಟೆಟ್ಸ್ ಸಮೇತ ಟ್ಯಾಬ್ ಗಳನ್ನು ನೀಡುತ್ತಿದ್ದು, ಇನ್ನು ಮುಂದೆ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳ 50 ಶಾಲೆಗಳಿಗೆ 1000 ಟ್ಯಾಬ್ ಗಳನ್ನು ಒದಗಿಸುವುದಾಗಿ ತಿಳಿಸಿದರು. 

     ಅರಕಲಗೂಡು ಪದ್ಮನಾಭ ಮಾತನಾಡಿ, ನಾವು ಒಳ್ಳೆಯ ಕೆಲಸ ಮಾಡಲು ಮುಂದಾದರೆ ಸಮುದಾಯ ಹಾಗೂ ಭಗವಂತನೂ ಸಹ ನಮ್ಮೊಂದಿಗಿದ್ದು, ಸಹಕಾರ ನೀಡುತ್ತಾನೆ ಎಂದು ತಮ್ಮ ಅನುಭವದ   ಹಲವಾರು ನಿದರ್ಶನಗಳೊಂದಿಗೆ ಗಣಪತಿ ದೇವಾಲಯವೊಂದರ ಅರ್ಚಕನೂ ಸಹ 31 ಸಾವಿರ ರೂ. ದೇಣಿಗೆ ನೀಡಿದ್ದನ್ನು ಉದಾಹರಿಸಿದರು.   

  

     ಥಿಂಕ್ ಥ್ರೂ ಕನ್ಸಲ್ಟೆಂಟ್ಸ್ ದೆಹಲಿ, ಬಿಐಎಲ್, ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ , ಎಂಬೆಸಿ ಗ್ರೂಪ್, ಬಯೋಕಾನ್, ಸ್ಯಾಮ್ ಸಂಗ್, ಎಚ್ ಪಿ ಇಂಡಿಯಾ, ಮಕ್ಕಳ ಜಾಗೃತಿ, ಟಯೋಟಾ  ಒಟ್ಟು 72ಕಂಪನಿಗಳಿಂದ 110 ಪ್ರತಿನಿಧಿಗಳು ಭಾಗವಹಿಸಿದ್ದರು. 

     ಸಂವಾದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದಶರ್ಿ ಎಸ್. ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ.ಜಗದೀಶ್ , ಸಮಗ್ರ ಶಿಕ್ಷಣ ಕನರ್ಾಟಕ ರಾಜ್ಯ ಯೋಜನಾ ನಿದರ್ೆಶಕ ಡಾ. ಎಂ.ಟಿ. ರೇಜು, ಹಿರಿಯ ಸಹಾಯಕ ನಿದರ್ೆಶಕಿ ಬಿ. ಮಂಗಳಾ,  ಅಪರೂಪ ಮತ್ತಿತರರು ಪಿಪಿಟಿ ಮೂಲಕ ಇಲಾಖೆಯ ಕಾರ್ಯಕ್ರಮಗಳನ್ನು  ಸಾದರಪಡಿಸಿದರು. 

     ಸಾಂಸ್ಥಿಕ ಸಾಮುದಾಯಿಕ ಜವಾಬ್ದಾರಿಯ ಪಾಲುದಾರರ ಕೊಡುಗೆ ಹಾಗೂ ರಾಜ್ಯದ ಸಕರ್ಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಸುಧಾರಣೆ ಕಾರ್ಯತಂತ್ರಗಳ ಕುರಿತು ಬೃಹತ್ ಸಂಖ್ಯೆಯಲ್ಲಿ ಹಾಜರಾಗಿದ್ದ  ಖಾಸಗಿ ಸಾಮುದಾಯಿಕ ಸಂಸ್ಥೆಗಳ ಪ್ರತಿನಿಧಿಗಳು ಹಲವಾರು ಸಲಹೆಗಳನ್ನು ನೀಡಿದರು.