ಕೈದಿಗಳ ಜಗಳ: ಬಿಡಿಸಲು ಹೋದ ಜೈಲರ್ ಮೇಲೆ ಹಲ್ಲೆ

ಕೈದಿಗಳ ಜಗಳ: ಬಿಡಿಸಲು ಹೋದ ಜೈಲರ್ ಮೇಲೆ ಹಲ್ಲೆ Prisoner fight: Jailer attacked as he went to free them

ಜಮಖಂಡಿ 12: ನಗರದ ಹೊರವಲಯ ಮುಧೋಳ ರಸ್ತೆಯಲ್ಲಿರುವ ಉಪ ಕಾರಾಗೃಹದ ವಿಚಾರಣಾಧೀನ ಕೈದಿಗಳ ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳು ಹಲ್ಲೆ ನಡೆಸಿದ ಘಟನೆ ಸಂಜೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಹಲ್ಲೆಗೊಳಗಾಗಿರುವ ಜೈಲರ್ ವಿ.ಡಿ.ಕುಂಬಾರ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಘಟನೆಯ ಹಿನ್ನೆಲೆ ; 

ಜೈಲಿನಲ್ಲಿ ಬೀಗಮುದ್ರೆ ಮಾಡುವ ಸಂದರ್ಭದಲ್ಲಿ ಜೈಲಿನ ಒಳಭಾಗದ ಸರ್ಕಲ್ 1 ಹಾಗೂ 2ರ ಮಧ್ಯಭಾಗದಲ್ಲಿ ವಿಚಾರಣಾಧಿನ ಕೈದಿಗಳಾದ ಪ್ರವೀಣ ಶಂಕರ ಮ್ಯಾಗೇರಿ, ದುರ್ಗ​‍​‍್.ಫಕ್ಕಿರ​‍್ಪ.ವಾಲ್ಮಿಕಿ ಹಾಗೂ ಮತ್ತೊಂದು ಗುಂಪಿನ ವಿಚಾರಣಾಧಿನ ಕೈದಿಗಳಾದ ಜಾಕೀರ ಹುಸೇನ್ ಮಕಾಂದಾರ, ಫಯಾಜ್‌. ಕರೀಂಶಾ ಮಕಾಂದಾರ, ಸಚಿನ ಅಶೋಕ ನಾಯ್ಕೊಡೆ, ಆರೀಪ್‌.ಫಾರುಕ್‌ಅಹಮದ್‌. ತಾಳಿಕೊಟಿ, ಮಧ್ಯದಲ್ಲಿ ಕ್ಷುಲಕ ಕಾರಣಕ್ಕೆ ಜಗಳ ಹೊಡೆದಾಟ - ಬಡಿದಾಟ ಪ್ರಾರಂಭವಾಗಿದೆ.  

ಜೈಲಿನಲ್ಲಿ ಕೈದಿಗಳ ಹೊಡೆದಾಟ - ಬಡಿದಾಟದ ಜಗಳವನ್ನು ಬಿಡಿಸಲು ಮುಂದಾದ ಜೈಲರ ವಿ.ಡಿ.ಕುಂಬಾರ ಹಾಗೂ ಸಿಬ್ಬಂದಿಗಳನ್ನು ವಿಚಾರಣಾಧಿನ ಕೈದಿಗಳು ನೂಕಾಡಿದ್ದಾರೆ ಹಾಗೂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಈ ಸಂದರ್ಭದಲ್ಲಿ ಜೈಲರ್ ಕುಂಬಾರ ಅವರ ಎಡಗೈ ಹೆಬ್ಬೆರಳಿಗೆ ಪೆಟ್ಟಾಗಿ ಮೂಳೆ ಮುರಿದಿದೆ. 

ಜೈಲಿನಲ್ಲಿ ಇದ್ದ ವಿಚಾರಣಾಧಿ ಕೈದಿಗಳು ಮಹಾಲಿಂಗಪುರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಡಕಾಯಿತಿ ಹಾಗೂ ಅಪಹರಣ ಪ್ರಕರಣದ ಆರೋಪಿಗಳಾಗಿರುವ ಇವರು ನ್ಯಾಯಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. 

ಸ್ಥಳಕ್ಕೆ ಜೈಲರ್ ಎಸ್‌ಪಿ ಕೊಟ್ರೇಶ ಭೇಟಿ; 

ಕೇಂದ್ರ ಕಾರಾಗೃಹ ವಿಜಯಪುರದ ಎಸ್‌ಪಿ ಕೊಟ್ರೇಶ ಅವರು ನಗರದ ಉಪಕಾರಾಗೃಹಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ಹಾಗೂ ಘಟನೆಯ ವಿವರಣೆಯನ್ನು ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವದೆಂದು ತಿಳಿಸಿದ್ದಾರೆ. ಮಹಾಲಿಂಗಪೂರದ ವಿಚಾರಣಾಧಿನ ಖೈದಿಗಳು ಪರಸ್ಪರ ಜಗಕ್ಕಿಳಿದಾಗ ಬಿಡಿಸಲು ಹೋದ ನಮ್ಮ ಅಧಿಕಾರಿಗಳಿಗೆ ಪಟ್ಟಾಗಿದ್ದು ಚಿಕಿತ್ಸೆ ಕೊಡಿಸಲಾಗಿದೆ. ಈ ಕುರಿತು ನಾಲ್ವರ ವಿರುದ್ಧ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.  

ಜೈಲಿನಲ್ಲಿ ಯಾವುದೇ ಅಕ್ರಮಗಳು ನಡೆಯುತ್ತಿಲ್ಲ. ಪ್ರತಿದಿನ ಬೆಳಗಿನ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿಚಾರಣಾಧಿನ ಕೈದಿಗಳನ್ನು ಸೆಲ್‌ಗಳಿಂದ ಆವರಣಕ್ಕೆ ಬಿಡಲಾಗುತ್ತದೆ. ಪುನಹ ಸಂಜೆ 6ಕ್ಕೆ ಸೆಲ್ ಒಳಗಡೆ ಹಾಕಿ ಬೀಗಮುದ್ರೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕೈದಿಗಳ ನಡುವೆ ಕ್ಷುಲಕ ಕಾರಣಕ್ಕೆ ಗಲಾಟೆಯಾಗಿದೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. 

ಬಾಗಲಕೋಟ ಜಿಲ್ಲಾ ಎಸ್‌ಪಿ ಸಿದ್ಧಾರ್ಥ ಗೋಯಲ್ ಭೇಟಿ ಪ್ರಕರಣ ದಾಖಲು; 

ನಗರದ ಉಪಕಾರಾಗೃಹದಲ್ಲಿ ವಿಚಾರಣಾಧಿನ ಕೈದಿಗಳು ಜೈಲರ್ ಮೇಲೆ ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ನಗರದ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ವಿಚಾರಣೆ ಮಾಡಲಾಗುತ್ತಿದೆ. ವಿಚಾರಣಾಧಿನ ಖೈದಿಗಳಾದ ಜಾಕೀರ ಹುಸೇನ್ ಮಕಾಂದಾರ, ಫಯಾಜ್‌. ಕರೀಂಶಾ ಮಕಾಂದಾರ, ಸಚಿನ ಅಶೋಕ ನಾಯ್ಕೊಡೆ, ಆರೀಪ್‌.ಫಾರುಕ್‌ಅಹಮದ್‌. ತಾಳಿಕೊಟಿ ಎಂಬ ನಾಲ್ವರ ಅಪಹರಣ ಹಾಗೂ ಡಕಾಯತ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಮುಂದಿನ ತನಿಖೆಯನ್ನು ನಡೆಸಲಾಗುತ್ತದೆ ಎಂದು ಮಾಧ್ಯಮಕ್ಕೆ ಮುಂದೆ ತಿಳಿಸಿದ್ದಾರೆ.