ಮಾನವ ಹಕ್ಕುಗಳ ಸಂರಕ್ಷಣೆಗೆ ಆದ್ಯತೆ ಅಗತ್ಯ: ಚೈತ್ರಾ

ಬೈಲಹೊಂಗಲ- ಪ್ರತಿಯೊಬ್ಬರು ಮಾನವ ಹಕ್ಕುಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ನ್ಯಾಯಾಧೀಶೆ ಚೈತ್ರಾ ಎಂ. ಹೇಳಿದರು. ಬೈಲಹೊಂಗಲ-ಮಾನವ ಹಕ್ಕುಗಳ ಉಲ್ಲಂಘಣೆ ತಡೆಯುವಲ್ಲಿ ನ್ಯಾಯಾಂಗ ಪಾತ್ರ ಬಹುಮುಖ್ಯವಾಗಿದ್ದು, ಪ್ರತಿಯೊಬ್ಬರು ಮಾನವ ಹಕ್ಕುಗಳ ಸಂರಕ್ಷಣೆಗೆ ಮಾಡಬೇಕು ಎಂದು ನ್ಯಾಯಾಧೀಶೆ ಚೈತ್ರಾ ಎ.ಎಂ. ಹೇಳಿದರು.

         ಅವರು ಮಂಗಳವಾರ ಪಟ್ಟಣದ ಗಣಾಚಾರಿ ಕಾಲೇಜಿನಲ್ಲಿ ತಾಲೂಕ ಕಾನೂನು ಸಮಿತಿ, ನ್ಯಾಯವಾದಿಗಳ ಸಂಘ, ಶಿಶು ಅಭಿವೃದ್ಧಿ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶ್ರೀಮತಿ ಈರಮ್ಮ ಬಸಪ್ಪ ಗಣಾಚಾರಿ ಮಹಿಳಾ ಪದವಿ ಪೂರ್ವ ಕಾಲೇಜು ಇವರ ಸಹಯೋಗದೊಂದಿಗೆ ಜರುಗಿದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾನವ ಹಕ್ಕುಗಳ ಬಗ್ಗೆ ತಿಳಿದುಕೊಂಡರೆ ಸಹಬಾಳ್ವೆ ಸಾಧ್ಯ. ಮಾನವ ಹಕ್ಕುಗಳನ್ನು ಜಾರಿಗೆ ತರುವಲ್ಲಿ ನಮ್ಮ ದೇಶ ಯಾವುದೇ ರೀತಿಯಲ್ಲಿ ಹಿಂಜರಿದಿಲ್ಲ. ಅವು ಸಂವಿಧಾನದಲ್ಲಿ ಅಡಕವಾಗಿದೆ ಎಂದರು. 

ತಹಶೀಲ್ದಾರ ಡಾ. ಡಿ.ಎಚ್.ಹೂಗಾರ ಮಾತನಾಡಿ, ನಾಡು ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರಲ್ಲದೆ ದೇಶದ ಕಾನೂನುಗಳನ್ನು ಅರಿತರೆ ಸ್ವಸ್ತ್ಯ ಸಮಾಜ ನಿರ್ಮಿಸಲು ಸಾಧ್ಯ ಎಂದರು. 

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಆರ್.ಮೆಳವಂಕಿ ಮಾನವ ಹಕ್ಕುಗಳ ಅಧಿನಿಯಮ 380 ಭಾಷೆಗಳಲ್ಲಿ ಅನ್ವಯವಾಗಿದ್ದು ಗಿನ್ನೀಸ ದಾಖಲೆ ಎಂದರು.

ಪ್ರಾಚಾರ್ಯ ಡಾ. ಸಿ.ಬಿ. ಗಣಾಚಾರಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗ ತಗೆದುಕೊಳ್ಳಬೇಕು ಎಂದರು.

ಸಿಡಿಪಿಓ ಮಹಾಂತೇಶ ಭಜಂತ್ರಿ, ಎಜಿಪಿ ರಮೇಶ ಕೋಲಕಾರ,ನ್ಯಾಯವಾದಿ ಎಮ್.ಎಫ್.ತಡಸಲ  ಮಾತನಾಡಿ, ಜಾಗತಿಕ ಮಟ್ಟದಲ್ಲಿ ವಿಶ್ವ ಮಾನವ ಹಕ್ಕುಗಳ ರಚನೆ, ಉದ್ದೇಶ, ಅವಶ್ಯಕತೆಗಳನ್ನು ತಿಳಿಸಿದರು. 

    ವೇದಿಕೆ ಮೇಲೆ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಕೆ.ಎಸ್. ಕುಲಕರ್ಣಿ ಕಾರ್ಯದರ್ಶಿ ಡಿ.ವಾಯ್. ಗರಗದ ಎಸ್.ಬಿ. ಬಡಿಗೇರ ಇದ್ದರು.

    ಕುಮಾರಿ ಮಂಗಲಾ ಪೂಜೇರಿ ಪ್ರಾಥರ್ಿಸಿದರು. ಪ್ರಾಚಾರ್ಯ ಡಿ.ಬಿ.ಪಾಟೀಲ ಸ್ವಾಗತಿಸಿದರು. ಶ್ರೀಮತಿ ಗೀತಾ ಸುರಕೋಡ ನಿರೂಪಿಸಿದರು. ವ್ಹಿ.ಡಿ.ಮಾಕಾರ ವಂದಿಸಿದರು. ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.