ಲೋಕದರ್ಶನ ವರದಿ
ಶಿರಹಟ್ಟಿ 19: ಶಿರಹಟ್ಟಿ ಮತಕ್ಷೇತ್ರದಾಂತ್ಯ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಯಾವುದೇ ರೀತಿಯ ಲೋಪದೋಷ ಹಾಗೂ ನಿಷ್ಕಾಣಜಿಗಳಿಗೆ ಆಸ್ಪದ ನೀಡದೇ ಪ್ರತಿಯೊಂದು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವದಕ್ಕೆ ಆದ್ಯತೆ ನೀಡಿ ಎಂದು ಶಾಸಕ ರಾಮಣ್ಣ ಲಮಾಣಿ ಹೇಳೀದರು.
ಅವರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಕಡಕೋಳ ಬೆಳ್ಳಟ್ಟಿ ರಸ್ತೆ 13.80 ರಿಂದ 14.50 ಕಿ.ಮೀ ಕಡಕೋಳ ಗ್ರಾಮದ ಎಸ್ಟಿ ಜನವಸತಿ ಪ್ರದೇಶದ ಪರಿಮಿತಿಯಲ್ಲಿ ಸುಮಾರು 51.25 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿಮರ್ಾಣವಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಈ ಗ್ರಾಮದ ಜನರ ಬಹು ದಿನಗಳ ಬೇಡಿಕೆಯಾದ ಉತ್ತಮ ರಸ್ತೆ ಕಾಮಗಾರಿಯ ಕನಸು ನನಸಾಗುವ ಕಾಲ ಬಂದಿದೆ, ಇಲ್ಲಿ ನಿಮರ್ಾಣವಾಗುತ್ತಿರುವ ಈ ರಸ್ತೆಯು ಬೆಳ್ಳಟ್ಟಿ ಮತ್ತು ಕಡಕೋಳ ಗ್ರಾಮದ ನಡುವಿನ ಜನರಿಗೆ ಉತ್ತಮ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚೀಗೇರಿ, ಗ್ರಾ.ಪಂ ಅಧ್ಯಕ್ಷ ಫಕ್ಕೀರೇಶ ಗೌಳಿ, ನಿಂಗಪ್ಪ ಹೊಸಮನಿ, ಶೇಖರ ಹೈದರಿ, ಬಸವರಾಜ ಪೂಜಾರ, ಅಪ್ಪು ಪೂಜಾರ, ಶರಣಪ್ಪ ಹಲರ್ಾಪೂರ, ಮಾದೇವಪ್ಪ ಆಡವಿ, ತೋಟಪ್ಪ ಸೊನ್ನದ, ಲಕ್ಷ್ಮಣ ಲಮಾಣಿ, ಶೇಖರ ಐದರಿ, ಗುತ್ತಿಗೆದಾರ ಆರ್. ಬಿ. ದನದಮನಿ, ಇಲಾಖೆಯ ಎಚ್,ವಿ ಹೊಸಮನಿ, ಶಂಭು ಕಾಳಗಿ ಇನ್ನೂ ಅನೇಕರು ಉಪಸ್ಥಿತರಿದ್ದರು.