ಜನರ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಿ: ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಜಕುಮಾರ

ಗದಗ :   ಇತ್ತೀಚಿನ  ನೆರೆ ಹಾವಳಿ ಸಂದರ್ಭದಲ್ಲಿ ಗದಗ ಜಿಲ್ಲಾಡಳಿತ ಕೈಗೊಂಡಿದ್ದ  ಮುನ್ನೆಚ್ಚರಿಕೆ ಹಾಗೂ ತ್ವರಿತ ಕ್ರಮಗಳಿಂದಾಗಿ ಜೀವಹಾನಿ ಆಗದೇ ಸಂಕಷ್ಟಕ್ಕೊಳಗಾದ ಗ್ರಾಮಸ್ಥರಿಗೆ ಸೂಕ್ತ ಸ್ಪಂದಿಸಿದ್ದು ಒಳ್ಳೆಯ ಕೆಲಸವಾಗಿದೆ ಎಂದು ರಾಜ್ಯದ ಅಪರ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ  ಡಾ. ರಾಜ್ಕುಮಾರ ಖತ್ರಿ ನುಡಿದರು.

ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂಕಷ್ಟ ಸ್ಥಿತಿಯಲ್ಲಿ ಜಿಲ್ಲೆಯು ಕೆಲಸ ಮಾಡಿ ವಿಶ್ವಾಸಗಳಿಸಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಜನರ ಸಮಸ್ಯೆಗಳ ನಿವಾರಣೆಗೆ ಪ್ರಮುಖ ಆದ್ಯತೆ ನೀಡಬೇಕು. ರಾಜ್ಯ ಸರ್ಕಾರ ಯೋಜನೆಗಳು ಸೂಕ್ತವಾಗಿ ಜಾರಿಯಾಗುವಂತೆ ಕಾರ್ಯನಿರ್ವಹಿಸಬೇಕು . ಈ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ನನಗೆ ಮತ್ತೆ ಗದಗ ಜಿಲ್ಲೆಯ ಉಸ್ತುವಾರಿ ಕಾರ್ಯದಶರ್ಿಯಾಗಿ ಕೆಲಸ ಮಾಡುವ ಅವಕಾಶ ದೊರಕಿದ್ದು ಜಿಲ್ಲೆಯ ಅಭಿವೃದ್ಧಿ ಕುರಿತು ಯಾವುದೇ ಪ್ರಸ್ತಾವನೆಗಳು ಇಲಾಖೆಯ ಆಯಾ ಕೇಂದ್ರ ಕಚೇರಿ ಮಟ್ಟದಲ್ಲಿ ತ್ವರಿತವಾಗಿ ಜಾರಿಗೊಳಿಸಲು ತಾವು ಸ್ಪಂದಿಸುವುದಾಗಿ ಡಾ. ರಾಜ್ಕುಮಾರ ಖತ್ರಿ ತಿಳಿಸಿದರು. 

     ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಜಿಲ್ಲೆಯ ನೆರೆ ಸಂದರ್ಭದಲ್ಲಿ ನರಗುಂದ, ರೋಣ ಹಾಗೂ ಶಿರಹಟ್ಟಿಯ ಗ್ರಾಮಗಳು ಸಂಕಷ್ಟದಲ್ಲಿದ್ದಾಗ ಮುಂಜಾಗ್ರತೆಯಾಗಿ ಜನ, ಜಾನುವಾರು ಸ್ಥಳಾಂತರಗೊಳಿಸಿ 44 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಜನರಿಗೆ ಊಟ ವಸತಿ, ಜತೆ ಜಾನುವಾರುಗಳಿಗೆ ಮೇವು ಒದಗಿಸಲಾಗಿತ್ತು ಎಂದರು.  ಸದ್ಯ ಕೊಣ್ಣೂರಲ್ಲಿ ಮನೆ ಕಳೆದುಕೊಂಡ ಸಂತ್ರಸ್ಥರಿಗೆ ತಾತ್ಕಾಲಿಕ ಶೆಡ್ ವಸತಿ ಮಾಡಲಾಗಿದೆ. ಆ ಸಂದರ್ಭದಲ್ಲಿ ರಾಜ್ಯ ಸಕರ್ಾರದ ನಿದರ್ೇಶನದಂತೆ ಕುಟುಂಬಗಳಿಗೆ ಆಹಾರ ಕಿಟ್ಗಳನ್ನು ನೀಡಿದ್ದಲ್ಲದೇ 10,229 ಕುಟುಂಬಗಳಿಗೆ ತಲಾ 10 ಸಾವಿರ ರೂ ಪರಿಹಾರ ವಿತರಿಸಲಾಗಿದೆ. ಮನೆಹಾನಿ ಕುರಿತು ಸಮಗ್ರ ಸಮೀಕ್ಷೆ ಮಾಡಿದ್ದ ದತ್ತಾಂಶವನ್ನು ಸಕರ್ಾರಕ್ಕೂ ಅಪ್ಲೋಡ್ ಮಾಡಲಾಗಿದೆ. ಎ ವಿಭಾಗದಲ್ಲಿ 365, ಬಿ ವಿಭಾಗದಲ್ಲಿ 735 ಹಾಗೂ ಸಿ ವಿಭಾಗದಲ್ಲಿ 1429 ಸೇರಿದಂತೆ ಒಟ್ಟು 2529 ಮನೆಗಳ ಹಾನಿ ಆಗಿವೆ. ಇದರಲ್ಲಿ ಎ ಹಾಗೂ ಬಿ ವಿಭಾಗದ ಮನೆಹಾನಿ ಪರಿಹಾರ ರಾಜೀವಗಾಂಧಿ ವಸತಿ ನಿಗಮ ವಿತರಿಸಲಿದ್ದು ಸಿ ವಿಭಾಗದ ಮನೆಹಾನಿಯನ್ನು ತಹಶೀಲ್ದಾರುಗಳ ಮೂಲಕ ರಾಜ್ಯ ಸಕರ್ಾರದ ನಿದರ್ೇಶನದಂತೆ ವಿತರಣೆ ಕ್ರಮ ಜರುಗಿಸಲಾಗುತ್ತಿದೆ ಎಂದರು. 

ಗದಗ ಜಿಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ. ಆನಂದ ಕೆ ಮಾತನಾಡಿ ನೆರೆ ಸಂದರ್ಭದಲ್ಲಿ ಸ್ಥಳಾಂತರ ಹಾಗೂ ನೆರೆ ನಂತರ ಗ್ರಾಮಗಳ ಸುಸುಜ್ಜಿತ ಆರೋಗ್ಯ ಕುರಿತಂತೆ ಕೈಗೊಳ್ಳಲಾದ ಕ್ರಮಗಳ ಕುರಿತು ವಿವರಿಸಿದರು. ನೆರೆ ಸಂದರ್ಭದಲ್ಲಿ ಜಿಲ್ಲೆಯ 11,809 ಹೆ. ಕೃಷಿ ಬೆಳೆ, 2921 ಹೆ. ತೋಟಗಾರಿಕೆ ಬೆಳೆ ಹಾನಿ ಆಗಿದೆ. 2018 ರ ಮುಂಗಾರು ಬೆಳೆ ವಿಮಾ 224 ಕೋಟಿ ರೂ ಪರಿಹಾರ 171 ಕೋಟಿ ರೂ ರೈತರ ಖಾತೆಗಳಿಗೆ ಜಮೆಯಾಗಿದ್ದು 53 ಕೋಟಿ ರೂ ವಿವಿಧ ಕಾರಣಗಳಿಂದ ವಿಳಂಬವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿದರ್ೇಶಕ ರುದ್ರೇಶಪ್ಪ ತಿಳಿಸಿದರು. 

    ತಕ್ಷಣವೇ ಕೃಷಿ ಆಯುಕ್ತ ಬೃಜೇಶಕುಮಾರ ದೀಕ್ಷಿತ ಅವರಿಗೆ ದೂರವಾಣಿ ಮೂಲಕ ಸಂಪರ್ಕಸಿದ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಜಿಲ್ಲೆಯಲ್ಲಿ ವಿಮಾ ಪರಿಹಾರ ವಿಳಂಬದಿಂದ ಜಿಲ್ಲಾಡಳಿತ, ಪೋಲಿಸ್ ಇಲಾಖೆಗಳ ಮೇಲೆ ಅನಗತ್ಯ ಒತ್ತಡ, ಸಮಸ್ಯೆಗಳು ಉಂಟಾಗುವ ಹಿನ್ನೆಲೆಯಲ್ಲಿ ತೀವ್ರವಾಗಿ ಬಾಕಿ ಇರುವ ವಿಮಾ ಕ್ಲೇಮುವನ್ನು ಪೂರ್ಣಗೊಳಿಸಲು ಕೋರಿದರು. ಜಿಲ್ಲೆಯ ರೈತರು ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳು, ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಸಿಇಓ ಅವರೊಂದಿಗೆ ಸದಾ ಸಂಪರ್ಕದಲ್ಲಿದ್ದು ಮಾರುಕಟ್ಟೆ ಹಾಗೂ ಪೇಟೆಯ ವಾಸ್ತವತೆಗೆ ಅನುಗುಣವಾಗಿ ರೈತರಿಗೆ ಬೆಳೆ ಬೆಳೆಯುವ ಕುರಿತು ಮಾರ್ಗದರ್ಶನ ನೀಡಲು ಹಾಗೂ ರೈತರು ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಬೆಳೆ ಬೆಳೆಯುವಂತೆ ಪ್ರೇರೆಪಿಸಲು ಡಾ. ರಾಜ್ಕುಮಾರ ಖತ್ರಿ  ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

      ಗದಗ ಜಿಲ್ಲೆಯ  ಕುರಿತಂತೆ ಆಡಳಿತಾತ್ಮಕ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ಇಲಾಖೆ ಜಿಲ್ಲಾ ಮುಖ್ಯಸ್ಥರು ಜಿಲ್ಲಾಧಿಕಾರಿಗಳ ಮುಖಾಂತರ ತಮ್ಮ ಅವಗಾಹನೆಗೆ ತರಲು ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ವಿಶಿಷ್ಟವಾಗಿ ಶಿಕ್ಷಣ, ಆರೋಗ್ಯ, ಕೃಷಿ ಹಾಗೂ ಕುಡಿಯುವ ನೀರು ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಗದಗ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಡಾ.ರಾಜ್ಕುಮಾರ ಖತ್ರಿ ಅಧಿಕಾರಿಗಳಿಗೆ ನಿದರ್ೇಶನ ನೀಡಿದರು. 

        ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.