ಶಿಕ್ಷಣಕ್ಕೆ ಆದ್ಯತೆ ನೀಡಿ, ಶಾಲೆಗಳ ನಿರ್ಮಾಣಕ್ಕೆ ಒತ್ತು ನೀಡಿ: ಶಾಸಕ ಮಹೇಂದ್ರ ತಮ್ಮಣ್ಣವರ

ಶಿಕ್ಷಣಕ್ಕೆ ಆದ್ಯತೆ ನೀಡಿ, ಶಾಲೆಗಳ ನಿರ್ಮಾಣಕ್ಕೆ ಒತ್ತು ನೀಡಿ: ಶಾಸಕ ಮಹೇಂದ್ರ ತಮ್ಮಣ್ಣವರ Prioritize education and emphasize the construction of schools: MLA Mahendra Tammannavar

           ಪಾಲಬಾವಿ 07: ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು. ದೇವಸ್ಥಾನಗಳನ್ನು ನಿರ್ಮಿಸುವಕಿಂತ ಹೆಚ್ಚು ಶಾಲೆಗಳ ನಿರ್ಮಾಣಕ್ಕೆ ಗಮನಕೊಡಬೇಕು. ಶಿಕ್ಷಣವನ್ನು ಪಡೆದುಕೊಂಡ ವ್ಯಕ್ತಿಯು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗುತ್ತಾನೆ. ಕುಡಚಿ ಮತಕ್ಷೇತ್ರದಲ್ಲಿ ರಸ್ತೆ ನಿರ್ಮಾಣ, ಶುದ್ಧ ಕುಡಿಯುವ ನೀರು, ಚರಂಡಿ, ಸಾರ್ವಜನಿಕ ಹೈಟೆಕ್ ಶೌಚಾಲಯ, ಗ್ರಂಥಾಲಯ, ಸಮುದಾಯ ಭವನ, ಶಾಲಾ ಕಟ್ಟಡವು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇನೆ. ಕ್ಷೇತ್ರದ ತರವಾಂಗಿನ ಅಭಿವೃದ್ಧಿಗೆ ನನ್ನ ಗುರಿಯಾಗಿದೆ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು. ಅವರು ಜುಲೈ 07ರಂದು ಮಂಗಳವಾರ ಕುಡಚಿ ಮತಕ್ಷೇತ್ರದ ಕಟಕಬಾವಿ, ದೇವಾಪುರಹಟ್ಟಿ, ಸವಸುದ್ದಿ, ಖಣದಾಳ, ಇಟನಾಳ, ಮುಗಳಖೋಡ ಪಟ್ಟಣವು ಸೇರಿದಂತೆ ಅಂದಾಜು 5.20ಕೋಟಿ ವೆಚ್ಚದಲ್ಲಿ ವಿವಿಧ ಗ್ರಾಮಗಳಲ್ಲಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

           ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಚಿಕ್ಕೋಡಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಪಾಟೀಲ, ಕುಡಚಿ ಮತಕ್ಷೇತ್ರದ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಮುಗಳಖೋಡ ಪುರಸಭೆ ಸದಸ್ಯ ಪರ​‍್ಪಗೌಡ ಖೇತಗೌಡರ, ಮಯೂರ ಕುರಾಡೆ, ಪ್ರಕಾಶ ಆದಪ್ಪಗೋಳ, ಕರೆಪ್ಪ ಮಂಟೂರ, ವಿರೂಪಾಕ್ಷಿ ಹಿರೇಮಠ, ವರ್ಧಮಾನ ಶಿರಹಟ್ಟಿ, ಸಚಿನ ಹಳಕಲ್ಲ, ಮುತ್ತಪ್ಪ ಡಾಂಗೆ, ಸಾಹುಕಾರ್ ಮಾಧು ಮಗದುಮ್ಮ, ಇಟನಾಳ ಗ್ರಾಪಂ ಮಾಜಿ ಅಧ್ಯಕ್ಷ ವಿಠಲ ಅರಭಾವಿ, ರವಿ ಮಾದರ, ಬಾಳಪ್ಪ ಮಾದರ, ರಘುನಾಥ ಹಿಡಕಲ್ಲ, ಈರ​‍್ಪ ವಡ್ಡರ, ಸದಾಶಿವ ಮಾಂಗ, ಕುಮಾರ ಮಾಂಗ, ಮಹಾದೇವ ಮಾಂಗ, ಜಾನ್ ತೆಳಗಡೆ, ಅಜಿತ ದೊಡಮನಿ, ಶೇಖರ ಮಾಂಗ, ಬಿ.ಎಸ್‌.ಪಾಟೀಲ, ಮಲಗೌಡ ಪಾಟೀಲ, ಹನುಮಂತ ಪಿಡಾಯಿ, ಮಲ್ಲಪ್ಪ ಕಾಂಬಳೆ, ಬಸಪ್ಪ ಪಾಟೀಲ, ಕರೆಪ್ಪ ಪೂಜಾರಿ, ಮಾರುತಿ ತರಾಳೆ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

ಫೋಟೋ ಶೀರ್ಷಿಕೆ: ಖಣದಾಳ ಗ್ರಾಮದಲ್ಲಿ ಡಾ.ಬಾಬು ಜಗಜೀವನ ರಾಮ್ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುತ್ತಿರುವ ಶಾಸಕ ಮಹೇಂದ್ರ ತಮ್ಮಣ್ಣವರ, ನಿರ್ಮಲಾ ಪಾಟೀಲ, ಪ್ರದೀಪ ಹಾಲ್ಗುಣಿ, ಸದಾಶಿವ ಮಾಂಗ ಇದ್ದರು.