ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ರಸ್ತೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ

ಗದಗ 22: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ರಸ್ತೆ, ಸ್ವಚ್ಛತೆ ಕುರಿತ ಮೂಲಭೂತ ಸೌಕರ್ಯ ಕಲ್ಲಿಸಲು  ರಾಜ್ಯ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ರಾಜ್ಯದ ಗಣಿ, ಭೂವಿಜ್ಞಾನ, ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ನುಡಿದರು.  

ಸಚಿವರು ಗದಗ ತಾಲೂಕಿನ  ಹೊಂಬಳದಲ್ಲಿ 99ಲಕ್ಷ ರೂ. ವೆಚ್ಚದಲ್ಲಿ  ಮೈಲಾರಪ್ಪ ಸಕರ್ಾರಿ ಪ.ಪೂ.ಕಾಲೇಜಿನಲ್ಲಿ 1.11ಕೋಟಿ ರೂ ವೆಚ್ಚದಲ್ಲಿ ಐದು ಹೆಚ್ಚುವರಿ ಕೊಠಡಿಗಳ ಕಟ್ಟಡ ಕಾಮಗಾರಿ, ಬಸ್ ಪ್ರಯಾಣಿಕರ ತಂಗುದಾಣ, ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ  ಹುಲಿಗೆಮ್ಮ, ಗಣೇಶ ಸಮುದಾಯ ಭವನಗಳ  ಕಾಮಗಾರಿಗಳಿಗೆ  ಭೂಮಿಪೂಜೆ ನೆರವೇರಿಸಿದರು.  ಇಂದು ಜಗತ್ತು ಹೆಚ್ಚು ಹೆಚ್ಚು ಸ್ಪರ್ಧಾತ್ಮಕ ವಾಗುತ್ತಿದೆ. ಶಿಕ್ಷಣ ಹೆಚ್ಚಿನ ಮಹತ್ವ ಪಡೆಯುತ್ತಿದ್ದು ಯಾವುದೇ ರಂಗದಲ್ಲಿ  ಉದ್ಯೋಗ ಪಡೆಯಲು ಅಥವಾ ನೀಡಲು ಪ್ರಮುಖ ಸಂಗತಿಯಾಗಿದೆ. ಜೋತೆಗೆ ವೈಯಕ್ತಿಕ ಮತ್ತು ಸಾರ್ವಜನಿಕ ಆರೋಗ್ಯ ಹಾಗೂ ಶಾಂತಿ ಮತ್ತು ನೆಮ್ಮದಿಯ ಜೀವನಕ್ಕೆ ಮೂಲ ಸೌಲಭ್ಯಗಳು, ಅಗತ್ಯವಾಗಿವೆ. ಅವುಗಳ ಸರಿಯಾದ ನಿರ್ವಹಣೆ ಮತ್ತು ಉಪಯೋಗ ಮಾಡಿಕೊಳ್ಳುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಸಚಿವ ಪಾಟೀಲ ನುಡಿದರು. 

ಜಿ.ಪಂ.ಸದಸ್ಯೆ ಲಲಿತಾ ಹುಣಸಿಕಟ್ಟಿ, ತಾ.ಪಂ. ಸದಸ್ಯೆ ಮುಮ್ತಾಜ್ ಬೇಗಂ ಬಾಪುನವರ,  ಗ್ರಾ.ಪಂ. ಅಧ್ಯಕ್ಷ ಬಸವರಾಜ ಹುಣಸಿಮರದ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಡಾ. ಜನಗಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಕಾರಿ ಅಭಿಯಂತ ದೇವರಾಜ್,  ಮೋಹನ ಮಾಳಶೆಟ್ಟಿ, ಸಿಕಂದರ ಬಾಪೂನವರ, ಜನಪ್ರತಿನಿಧಿಗಳು, ಗಣ್ಯರು, ಗುರುಹಿರಿಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

 ತದನಂತರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ಅವರು ಸಂಸದ ಪಿ.ಸಿ.ಗದ್ಧಿಗೌಡರು ತಮ್ಮ ಸಂಸದರ ಅಭಿವೃದ್ಧಿ ಅನದಾನದಲ್ಲಿ ಹೊಂಬಳದ ಶಂಕರಲಿಂಗ ದೇವಸ್ಥಾನದ ನಿಮರ್ಾಣಕ್ಕೆ ನೀಡಿದ 5 ಲಕ್ಷ ರೂ. ವೆಚ್ಚದ  ಕಾಮಗಾರಿಗೆ    ಮತ್ತು ಎಚ್.ಎಸ್. ವೆಂಕಟಾಪುರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೀಡಿದ 5 ಲಕ್ಷ ರೂ. ವೆಚ್ಚದ ದುಗರ್ಾ ದೇವಿ ಸಮುದಾಯ ಭವನ ನಿಮರ್ಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.