ಕೊಪ್ಪಳ 22 : ವಿಕಲಚೇತನರಿಗೆ ಸಕರ್ಾರಿ ಸೌಲಭ್ಯ ನೀಡುವುದು ಮಾತ್ರವಲ್ಲ ಅವರ ಸರ್ವತೋಮುಖ ಅಭಿವೃದ್ಧಿಗೂ ಆದ್ಯತೆ ನೀಡಿ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ರಾಜ್ಯ ಆಯುಕ್ತರಾದ ವಿ.ಎಸ್. ಬಸವರಾಜು ಹೇಳಿದರು.
ಅವರು ಇಂದು (ನ.22) ಜಿಲ್ಲಾ ಪಂಚಾಯತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ವಿಕಲಚೇತನರ ಕಾರ್ಯಕ್ರಮಗಳ ಅನುಷ್ಠಾನದ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಗವಿಕಲರ ಕಾಯ್ದೆ-2016 ರನ್ವಯ ಸಕರ್ಾರದ ವಿವಿಧ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ಗಳಲ್ಲಿ ವಿಕಲಚೇತನರ ಅಭಿವೃದ್ಧಿಗಾಗಿ ಶೇ.5 ರಷ್ಟು ಅನುದಾನವನ್ನು ಕಾಯ್ದಿರಿಸಲಾಗಿದೆ. ಅದರಂತೆ ವಿವಿಧ ಸೌಲಭ್ಯಗಳನ್ನು ಹಣಕಾಸಿನ ನೆರವನ್ನು ನೀಡಿದ ಕೂಡಲೇ ಅಧಿಕಾರಿಗಳ ಜವಾಬ್ದಾರಿ ಮುಗಿಯುವುದಿಲ್ಲ. ಫಲಾನುಭವಿಗಳ ಶಿಕ್ಷಣ, ಸ್ವಾವಲಂಬಿ ಬದುಕಿಗಾಗಿ ಅವರಿಗೆ ಮಾರ್ಗದರ್ಶನ ನೀಡಿ. ಹಾಗೂ ವಿಕಲಚೇತನ ಮಕ್ಕಳ ಪಾಲಕರಿಗೆ ಅಂತಹ ಮಕ್ಕಳನ್ನು ನಿರ್ವಹಿಸುವ ವಿಧಗಳು ಹಾಗೂ ಕೌಶಲ್ಯಗಳ ಕುರಿತು ತರಬೇತಿ ನೀಡಿ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ಯುವಸ್ಪಂದನ ಎಂಬ ಉತ್ತಮ ಕಾರ್ಯಕ್ರಮವಿದ್ದು, ಆ ಕಾರ್ಯಕ್ರಮದಡಿ ವಿಕಲಚೇತನರಿಗೆ ಸ್ವಾವಲಂಬನೆ ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿ. ವಿಕಲಚೇತನರೂ ಕೂಡ ತಮ್ಮ ದೌರ್ಬಲ್ಯವನ್ನು ಮೀರಿ ಉನನತ ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ನಡೆಸಬಹುದು. ಆದ್ದರಿಂದ ಸಕರ್ಾರಿ ಸೌಲಭ್ಯ ಪಡೆಯುವುದು ಮಾತ್ರವಲ್ಲ ಅದರಾಚೆಗೂ ಸಮಾಜದಲ್ಲಿ ಗೌರವಯುತವಾಗಿ ಬದುಕು ಕಟ್ಟಿಕೊಳ್ಳಲು ಶ್ರಮ ವಹಿಸಬೇಕು ಎಂದು ಅವರು ಹೇಳಿದರು.
ಮಾನಸಿಕ ದೌರ್ಬಲ್ಯ ಹೊಂದಿದ ಮಕ್ಕಳನ್ನು ನಿಭಾಯಿಸುವುದು ಸುಲಭವಲ್ಲ. ಅವರ ಪಾಲಕರು ಮಕ್ಕಳನ್ನು ನೋಡಿಕೊಳ್ಳುವುದರ ಜೊತೆಗೆ ಕುಟುಂಬ ನಿರ್ವಹಣೆಗೆ ಕೂಲಿ ಮಾಡುವ ಅನಿಔಆರ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಮ್ಕಕಳೆಡೆಗೆ ಹೆಚ್ಚು ಗಮನ ಕೊಡಲು ಕಷ್ಟವಾಗುತ್ತದೆ. ಆದ್ದರಿಂದ ಪ್ರಾಯೋಗಿಕವಾಗಿ ತಾಲ್ಲೂಕು ಮಟ್ಟದಲ್ಲಿ ಅಂತಹ ಮಕ್ಕಳನ್ನು ದಿನವಿಡೀ ನೋಡಿಕೊಳ್ಳುವ ಡೇ-ಕೇರ್ ಸೆಂಟರ್ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಿ. ಇದು ಯಶಸ್ವಿಯಾದರೆ ಹೋಬಳಿ ಮಟ್ಟದಲ್ಲಿಯೂ ಈ ಕಾರ್ಯಕ್ರಮವನ್ನು ಜಾರಿಗೆ ತರಬಹುದು ಎಂದು ಅವರು ಹೇಳಿದರು.
ಎಲ್ಲಾ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ವಿಕಲಚೇತನರಿಗೆ ಮೀಸಲಿಟ್ಟ ಅನುದಾನದ ಕುರಿತು ಮಾಹಿತಿ ನೀಡಬೇಕು. ಹಾಗೂ ವಿಕಲಚೇತನರು ಕಚೇರಿಗೆ ಬಂದಾಗ ಅವರೊಂದಿಗೆ ಗೌರವಯುತವಾಗಿ ವತರ್ಿಸಿ, ಕುಳಿತುಕೊಳ್ಳಲು ಹಾಗೂ ಅವರಿಗೆ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ ವಿತರಣೆ ಕುರಿತಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಅದರಂತೆ ನಿಯಮಾನುಸಾರ ಗುರುತಿನ ಚೀಟಿಗಳನ್ನು ನೀಡಲಾಗುತ್ತದೆ. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾಥರ್ಿ ವಸತಿ ನಿಲಯಗಳಲ್ಲಿ ವಿಕಲಚೇತನರಿಗೆ ಸೀಟುಗಳನ್ನು ಮೀಸಲಿರಿಸಲಾಗಿರುತ್ತದೆ. ವಿಕಲಚೇತನ ವಿದ್ಯಾಥರ್ಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ವಿಆರ್ಡಬ್ಲ್ಯೂ ಹಾಗೂ ಎಂಆರ್ಡಬ್ಲ್ಯೂಗಳು ವಿಕಲಚೇತನ ವಿದ್ಯಾಥರ್ಿಗಳ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನೀಡಬೇಕು. ವಿಆರ್ಡಬ್ಲ್ಯೂ ಹಾಗೂ ಎಂಆರ್ಡಬ್ಲ್ಯೂಗಳನ್ನು ನೇಮಕ ಮಾಡಿರುವ ಉದ್ದೇಶ ವಿಕಲಚೇತನರನ್ನು ಗುರುತಿಸಿ ಸಕರ್ಾರದ ಸೌಲಭ್ಯಗಳನ್ನು ಅವರಿಗೆ ತಲುಪಿಸಬೇಕು. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ ಎಂದು ಅವರು ಹೇಳಿದರು.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ವಿಕಲಚೇತನ ಮಕ್ಕಳಿಗೆ ನೀಡಲಾಗುವ ಸ್ಕಾಲರ್ಶಿಪ್ನ್ನು ಯಾವುದೇ ಕಾರಣಕ್ಕೂ ತಡೆಹಿಡಿಯದೇ ನಿಯಮಾನುಸಾರ ವಿತರಿಸಿ. ಹಾಗೂ ಅಂತಹ ಮಕ್ಕಳ ಕುರಿತು ವಿಶೇಷ ಗಮನ ನೀಡಿ. ನಿಯಮ ಮೀರಿ ಯಾವ ಅಧಿಕಾರಿಗಳೂ ವತರ್ಿಸಬಾರದು. ವಿಕಲಚೇತನರು ಮೊದಲು ತಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳಬೇಕು. ಸ್ವಯಂ ಪ್ರೇರಿತರಾಗಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.
ವಿವಿಧ ಇಲಾಖೆಗಳಲ್ಲಿ ವಿಕಲಚೇತನರಿಗೆ ಇರುವ ಮೀಸಲಾತಿ ಹಾಗೂ ಸೌಲಭ್ಯಗಳ ಕುರಿತು ಚಚರ್ಿಸಲಾಯಿತು. ವಿಕಲಚೇತನರ ಅಹವಾಲುಗಳನ್ನು ಸ್ವೀಕರಿಸಿದ ಆಯುಕ್ತರು ಯಾವುದೇ ಇಲಾಖೆಯಲ್ಲಿ ವಿಕಲಚೇತನರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೇ ಇದ್ದಲ್ಲಿ ಅಥವಾ ಅಧಿಕಾರಿಗಳಿಂದ ತೊಂದರೆಯಾದಲ್ಲಿ ನೇರವಾಗಿ ಆಯುಕ್ತರ ಕಚೇರಿಗೆ ವಿವರವಾಗಿ ಪತ್ರ ಬರೆಯಲು ವಿಕಲಚೇತನರಿಗೆ ತಿಳಿಸಿದರು.
ಸಭೆಯಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಸಹಾಯಕ ಆಯುಕ್ತರಾದ ಎಸ್.ಕೆ. ಪದ್ಮನಾಭ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಡಿ.ಎನ್. ಮೂಲಿಮನಿ, ಸಾಮಥ್ರ್ಯ ಸಂಸ್ಥೆಯ ನಿದರ್ೇಶಕ ಬಿ. ಹಂಪಣ್ಣ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿಕಲಚೇತನರು, ಅವರ ಪಾಲಕರು, ಸಂಘ-ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.