ಗುಣಮಟ್ಟ ಕಾಮಗಾರಿಗೆ ಆದ್ಯತೆ ನೀಡಿ: ಶಾಸಕ ಚರಂತಿಮಠ

ಲೋಕದರ್ಶನವರದಿ

ಹುನಗುಂದ; ಗುಣಮಟ್ಟದ ಕಾಮಗಾರಿ ನಡೆಸಲು ಅಧಿಕಾರಿಗಳು ಹೆಚ್ಚು ಆಧ್ಯತೆ ನೀಡಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.

  ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ 1ಕೋಟಿ 24ಲಕ್ಷ ರೂ ಮೌಲ್ಯದ ಕಾಂಕ್ರೀಟ್ ಅಳವಡಿಸುವ ಕಾಮಗಾರಿಯ ಭೂಮಿ ಪೂಜೆ,ಬಸ್ ಪಾಸ್ ವಿತರಣಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸ್ ನಿಲ್ದಾಣದ ಆವರಣದಲ್ಲಿ ಗುಣಮಟ್ಟದ ಕಾಂಕ್ರಿಟ್ ಅಳವಡಿಸುವ ಉದ್ದೇಶದಿಂದ ಸಕರ್ಾರ ಕೋಟ್ಯಾಂತರ ರೂ ಅನುದಾನ ನೀಡಿದೆ. ಸಮರ್ಪಕವಾಗಿ ಕಾಮಗಾರಿ ನಡೆಸುವ ಮೂಲಕ ಅನುದಾನದ ಸದ್ಭಳಕೆಯನ್ನು ಅಧಿಕಾರಿಗಳು ಮಾಡಿಕೊಳ್ಳಬೇಕು ಮತ್ತು ಗುತ್ತಿಗೆದಾರರು ಮಾಡುವ ಕಾಮಾಗಾರಿಯನ್ನು ಸಾರ್ವಜನಿಕರು ಹಾಗೂ ಪಟ್ಟಣದ ಪಪಂ ಸದಸ್ಯರು ನಿಗಾ ಇಡಬೇಕು ಎಂದರು.

ಪಾಸ್ ಕೇಂದ್ರ ಉದ್ಘಾಟನೆ:ಪಟ್ಟಣದ ಬಸ್ ನಿಲ್ದಾಣದಲ್ಲಿ ನೂತಣವಾಗಿ ಪ್ರಾರಂಭಗೊಂಡಿರುವ ಬಸ್ ಪಾಸ್ ವಿತರಣಾ ಕೇಂದ್ರವನ್ನು ಶಾಸಕ ಡಾ.ವೀರಣ್ಣ ಚರಂತಿಮಠ ಉದ್ಘಾಟಿಸಿ ನಂತರ ಮಾತನಾಡಿದ ಅವರು, ವಾಯುವ್ಯ ಕನರ್ಾಟಕ ರಸ್ತೆ ಸಾರಿಗೆ ಸಂಸ್ಥೆಯು ಅಮೀನಗಡ ಪಟ್ಟಣದ ಬಸ್ ನಿಲ್ದಾಣದಲ್ಲಿ ಇಂದಿನಿಂದ ಬಸ್ ಪಾಸ್ ವಿತರಣಾ ಕೇಂದ್ರ ಪ್ರಾರಂಭ ಮಾಡಲಾಗಿದೆ. ವಿದ್ಯಾಥರ್ಿಗಳು ಹಾಗೂ  ಸಾರ್ವಜನಿಕರು ಅದನ್ನು ಸದುಪಯೋಗ ಪಡೆದುಕೊಳ್ಳಬೇಕು. ಬಸ್ ನಿಲ್ದಾಣದ ಆವರಣದಲ್ಲಿ ಕೆ.ಎಸ್.ಆರ್.ಸಿ ಇಲಾಖೆ ಅಧಿಕಾರಿಗಳು ಸ್ವಚ್ಚತೆಗೆ ಆದ್ಯತೆ ನೀಡಿ ವಿವಿಧ ಗ್ರಾಮಗಳಿಗೆ ಬಸ್ ಸಂಚಾರ ಸಮಸ್ಯೆ ಕುರಿತು ಮಾಹಿತಿ ಬಂದಿದೆ ಕೂಡಲೇ ಅಮೀನಗಡ ಪಟ್ಟಣದಿಂದ ಅಗ್ರಾಮೀಣ ಬಸ್ ಸಂಚಾರ ಸಮಸ್ಯೆ ಬಗೆಹರಿಸುವಂತೆ ಶಾಸಕರು ಸಿಬ್ಬಂದಿಗೆ ಸೂಚಿಸಿದರು. 

 ಅಮೀನಗಡದಿಂದ ಗುಡೂರ, ಬಾಗಲಕೋಟೆಗೆ ಪ್ರಯಾಣ ಮಾಡುವ ನೂತಣ ಬಸ್ ಸಂಚಾರ ಕೂಡಾ ಶಾಸಕ ಡಾ.ವೀರಣ್ಣ ಚರಂತಿಮಠ ಚಾಲನೆ ನೀಡಿದರು.

  ಸ್ಥಳದಲ್ಲಿ ಸಾರಿಗೆ ಇಲಾಖೆ ಡಿಸಿ ಬಸವರಾಜ ಅಮ್ಮಣ್ಣವರ, ಹುನಗುಂದ ತಹಶೀಲ್ದಾರ ಬಸವರಾಜ ನಾಗರಾಳ, ಉಪತಹಶೀಲ್ದಾರ ಎಸ್.ವಿ.ಕುಂದರಗಿ, ಪಪಂ ಮುಖ್ಯಾಧಿಕಾರಿ ಎಸ್.ಟಿ.ಆಲೂರ, ಪಪಂ ಸದಸ್ಯರಾದ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ, ಶೇಖಪ್ಪ ಲಮಾಣಿ, ಸಂಗಪ್ಪ ತಳವಾರ, ಹುನಗುಂದ ಘಟಕ ವ್ಯವಸ್ಥಾಪಕ ಬಿ.ಬಿ.ಚಿತ್ತವಾಡಗಿ, ಕಂದಾಯ ನೀರೀಕ್ಷಕರು ಜೆ,ಎಸ್,ಚಿನಿವಾಲರ್, ತಲಾಟಿ ಎಸ್.ಎನ್,ಶೆಟ್ಟರ, ಜೆ.ಬಿ.ಕೋಟಿಕಲ್,ರಾಮಣ್ಣ ಬ್ಯಾಕೋಡ್ ಸೇರಿದಂತೆ ಇತರರು ಇದ್ದರು.

  ಶಾಸಕರಿಗೆ ಮನವಿ: ಅಮೀನಗಡ ಪಟ್ಟಣದಲ್ಲಿ ನಿಮರ್ಾಣವಾಗಿರುವ ನೂತನ ಬಸ್ ನಿಲ್ದಾಣವನ್ನು ಉದ್ಘಾಟನೆ ಮಾಡಬೇಕು. ಜೊತೆಗೆ ಪ್ರತಿದಿನ ಪ್ರಯಾಣಿಕರು ಅನುಭವಿಸುವ ಸಾರಿಗೆ ಸಂಚಾರ ಸಮಸ್ಯೆಯನ್ನು  ಬಗೆಹರಿಸುವಂತೆ ಕನರ್ಾಟಕ ರಕ್ಷಣಾ ವೇದಿಕೆ ವತಿಯಿಂದ ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೆ .  ಕರವೇ ಅಧ್ಯಕ್ಷ ಸಂಗಮೇಶ ಬೇವೂರ, ಚಂದ್ರು ಹುಬ್ಬಳ್ಳಿ ಸೇರಿದಂತೆ ಇತರರು ಮನವಿ ಸಲ್ಲಿಸಿದರು.