ವಸತಿ ಶಾಲೆಯ ಪ್ರಾಂಶುಪಾಲ ಹಾಗೂ ದೈಹಿಕ ಶಿಕ್ಷಕ ಅಮಾನತ್ತು
ಬೀಳಗಿ 20 :ತಾಲೂಕಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ (ಬಾಡಗಂಡಿ) ಬೀಳಗಿಯ ಪ್ರಾಂಶುಪಾಲ ಪಡಿಯಪ್ಪ ಬಿದರಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಪ್ರಭಾರ ನಿಲಯ ಪಾಲಕ ಶಾಸಪ್ಪ ಮಾಳಗೊಂಡ ಅವರನ್ನ ಕರ್ನಾಟಕ ನಾಗರೀಕ ಸೇವಾ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾಂತರಾಜು ಪಿ.ಎಸ್. ಭಾ.ಆ.ಸೇ. ಕಾರ್ಯನಿರ್ವಾಹಕ ನಿರ್ದೇಶಕರು ಬೆಂಗಳೂರ ರವರು ಅಮಾನತ್ತುಗೊಳಿಸಿ ಆದೇಶಿಸಲಾಗಿದೆ.
ವಸತಿ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ ಕು.ಶರಣಯ್ಯ ಬಸಯ್ಯ ಬೆನಕಾಳಮಠ ರವರನ್ನು ಇವರ ಸಹೋದರನಾದ ಅಮರೇಶ ಬಸವಯ್ಯ ಬೆನಕಾಳಮಠ ರವರು ಗಣೇಶ ಹಬ್ಬಕ್ಕೆಂದು ಊರಿಗೆ ಕರೆದುಕೊಂಡು ಇಳಕಲ್ ಕಡೆಗೆ ಬೈಕ್‌ನಲ್ಲಿ ಹೊರಟಿದ್ದ ಸಂದರ್ಭದಲ್ಲಿ ರಾಮಥಾಳ ಕ್ರಾಸ್ ಬಳಿ ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತ ಪಟ್ಟಿರುತ್ತಾರೆ.
ವಿದ್ಯಾರ್ಥಿಗಳನ್ನು ಊರಿಗೆ ಕಳುಹಿಸುವ ಮುಂಚೆ ಜಾಗರೂಕತೆಯಿಂದ ಪೋಷಕರೊಂದಿಗೆ ಮಕ್ಕಳನ್ನ ಕಳುಹಿಸದ ಪ್ರಾಂಶುಪಾಲರು ಹಾಗೂ ನಿಲಯಪಾಲಕರು. ಘಟನೆ ಕುರಿತು ಕಾರಣ ಕೇಳಿ ನೋಟೀಸ್ ಜಾರಿಮಾಡಲಾಗಿತ್ತು ನೋಟಿಸಿಗೆ ನಿಗಧಿತ ಸಮಯದಲ್ಲಿ ಉತ್ತರ ನೀಡದ ಬೇಜವಾಬ್ದಾರಿತನದಿಂದ ವರ್ತಿಸಿದ್ದರು. ಇವರು ಅಮಾನತ್ತಿನ ಅವಧಿಯಲ್ಲಿ ಸಕ್ಷಮೆ ಪ್ರಾಧಿಕಾರದ ಅನುಮತಿಯಿಲ್ಲದೇ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ (ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮಗಳು-1957ರ ನಿಯಮ 98ರ ರೀತ್ಯಾ ಜೀವೆನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ). ಪ್ರಾಂಶುಪಾಲರ ಅಮಾನತ್ತಿನಿಂದ ತೆರವಾದ ಪ್ರಾಂಶುಪಾಲರ ಹುದ್ದೆಗೆ ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ ಸಿದ್ದಲಿಂಗಪ್ಪ ಯಮಕನಮರಡಿ, ಹಿಂದಿ ಭಾಷಾ ಶಿಕ್ಷಕರು ಹಾಗೂ ನಿಲಯಪಾಲಕರ ಹುದ್ದೆಗೆ ಕಲಕಪ್ಪ ಮುಸಿಗೇರಿ, ಕಂಪ್ಯೂಟರ್ ಶಿಕ್ಷಕರು ಇವರನ್ನು ಹೆಚ್ಚುವರಿ ಪ್ರಭಾರದಲ್ಲಿ ಇರಿಸಿ ಆದೇಶಿಸಿದೆ.