ಮುಂಬೈ, ಆ 10 ಲೇಖನಿ ಮೇಲೆ ಹಿಡಿತ ಸಾಧಿಸಲು ಆ ವ್ಯಕ್ತಿ ತನ್ನ ಜೀವನದುದ್ದಕ್ಕೂ ಸಂಘರ್ಷ ಪಡುತ್ತಲೇ ಇದ್ದವರು 'ಗೋಪಾಲ ಸಿಂಹ ನೇಪಾಲಿ', ಇವರನ್ನು 'ಗೀತೆಗಳ ರಾಜಕುಮಾರ' ಎಂದೇ ಕರೆಯಲಾಗುತ್ತಿತ್ತು; ಹಿಂದಿ ಸಾಹಿತ್ಯದಿಂದ ಹಿಡಿದು ಪತ್ರಿಕೋದ್ಯಮ ಹಾಗೂ ಚಿತ್ರರಂಗದಲ್ಲಿಯೂ ಉನ್ನತ ಸ್ಥಾನವನ್ನು ಗಳಿಸಿರುವ ಛಾಯಾವಾದದ ವಿಶಿಷ್ಟ ಕವಿ ಹಾಗೂ ಗೀತಕಾರರಾಗಿದ್ದರು ಗೋಪಾಲ ಸಿಂಹ ನೇಪಾಲಿ
ಭಾನುವಾರ ಆ 11, ಇಂತಹ ಮೇರು ಸಾಹಿತಿಯ ಜನ್ಮದಿನ. ಬಿಹಾರದ ಪಶ್ಚಿಮ ಚಂಪಾರಣ್ಯ ಜಿಲ್ಲೆಯ ಬೇತಾಯದಲ್ಲಿ ಆ 11, 1911 ರಂದು ಇವರು ಜನಿಸಿದರು. ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎನ್ನುವಂತೆ ಬಾಲ್ಯದಲ್ಲಿಯೇ ಗೋಪಾಲ ಸಿಂಹ ನೇಪಾಲಿ ಅವರಲ್ಲಿ ಅದ್ಭುತ ಪ್ರತಿಭೆ ಕಂಡುಬಂದಿತ್ತು.
ಒಮ್ಮೆ ಅಂಗಡಿಯವನು ಬಾಲಕ ಗೋಪಾಲ ಸಿಂಹಗೆ ಹಳೆಯ ಕಾರ್ಬನ್ ಪೇಪರ್ ಒಂದನ್ನು ನೀಡಿದರು. ಆಗ ಬಳಸಲ್ಪಟ್ಟ ಕಾರ್ಬನ್ ಪೇಪರ್ ನೀಡಿದ್ದನ್ನು ಕಂಡ ಗೋಪಾಲ ಸಿಂಹ, ಅಂಗಡಿಯವನಿಗೆ ಒಂದು ಕವಿತೆಯನ್ನು ಹೇಳುತ್ತಾರೆ. ಇದನ್ನು ಕೇಳಿದ ಅಂಗಡಿಯವನಿಗೆ ನಾಚಿಕೆ ಮುಜುಗರವಾಗಿ, ಹೊಸ ಕಾರ್ಬನ್ ನೀಡಿ ಕ್ಷಮೆ ಕೇಳುತ್ತಾನೆ.
ಅದು ಚಂಪಾರಣ್ಯದಲ್ಲಿ ಮಹಾತ್ಮಾ ಗಾಂಧೀಜಿಯವರ ಅಸಹಕಾರ ಚಳುವಳಿ ಮುಂಚೂಣಿಯಲ್ಲಿದ್ದ ಸಂದರ್ಭ. ಇದೇ ಹೊತ್ತಿಗೆ ಕಮಲನಾಥ್ ತಿವಾರಿ, ಪಂಡಿತ್ ಕೇದಾರ್ ಮಣಿ ಶುಕ್ಲ ಹಾಗೂ ಪಂಡಿತ್ ರಾಮ ಕೃಷಿದೇವ್ ತಿವಾರಿ ನೇತೃತ್ವದ ಚಳುವಳಿಯೊಂದು ತಲೆ ಎತ್ತಿತ್ತು. ಅಸಹಕಾರ ಚಳುವಳಿ ಮಾದರಿಯ ಈ ಮತ್ತೊಂದು ಚಳುವಳಿಗೆ ಗೋಪಾಲ ಸಿಂಹ ನೇಪಾಲಿ ಹತ್ತಿರವಾಗಿದ್ದರು.
ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಕೈ ಆಡಿಸಿರುವ ನೇಪಾಲಿ ಅವರ ಮೊದಲ ಕವಿತೆ ''ಭಾರತ್ ಗಗನ್ ಕೆ ಜಗಮಗ್ ಸಿತಾರೆ, 1930 ರಲ್ಲಿ ರಾಮವೃಕ್ಷ ಬೇನಿಪೂರಿ ಅವರ ಸಂಪಾದಕತ್ವದ ಪತ್ರಿಕೆಯಲ್ಲಿ ಈ ಕವಿತೆ ಪ್ರಕಾಶಿಸಲ್ಪಟ್ಟಿತ್ತು. ಪತ್ರಕರ್ತರಾಗಿ ಸುಮಾರು 4 ಹಿಂದಿ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದರು. ರತಲಾಮ್ ಟೈಮ್ಸ್, ಚಿತ್ರಪಟ್, ಸುಧಾ ಮತ್ತು ಯೋಗಿ ಸಂಪಾದಕರಾಗಿದ್ದರು. ಯುವಾವಸ್ಥೆಯಲ್ಲಿ ನೇಪಾಲಿ ಅವರು ಗೀತೆಗಳಿಂದ ಹೆಚ್ಚು ಜನಪ್ರಿಯರಾದರು. ಹಲವು ಕವಿ ಸಮ್ಮೇಳನಗಳಲ್ಲಿ ಭಾಗವಹಿಸಿದ್ದರಲ್ಲದೇ ಅನೇಕ ಸನ್ಮಾನಗಳಿಗೂ ಅವರು ಪಾತ್ರರಾದರು. ಕಾವ್ಯ ಸಮ್ಮೇಳನವೊಂದರಲ್ಲಿ ರಾಷ್ಟ್ರಕವಿ ರಾಮಧಾರಿ ಸಿಂಹ್ 'ದಿನಕರ್' ಅವರು ನೇಪಾಲಿ ಅವರ ಕಾವ್ಯವೊಂದನ್ನು ಕೇಳಿ ಭಾವುಕರಾದರು. ಆ ಕವಿತೆ ಹೀಗಿದೆ : ''ಸುನ್ಹರಿ ಸುಬಹ್ ನೇಪಾಲಿ ಕೀ, ಢಲತೀ ಶಾಮ್ ಬಂಗಾಲ್ ಕೀ
ಕರ್ದೇ ಫೀಕಾ ರಂಗ್ ಚುನರೀ ಕಾ, ದೋಪಹರಿ ನೈನಿತಾಲ್ ಕೀ
ಕ್ಯಾ ದರಸ್ ಪರಸ್ ಕೀ ಬಾತ್ ಯಹಾಂ, ಜಯಾಂ ಪತ್ಥರ್ ಮೇಂ ಭಗವಾನ್ ಹೈ
ಯಹ ಮೇರಾ ಹಿಂದೂಸ್ತಾನ್ ಹೈ, ಯಹ ಮೇರಾ ಹಿಂದೂಸ್ತಾನ್ ಹೈ ''