ಈದ್ -ಉಲ್ ಫಿತರ್ ಶುಭಾಷಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ, ಮೇ 25, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ಜನತೆಗೆ ಈದ್ ಉಲ್ ಫಿತರ್ ನ ಶುಭ ಕೋರಿದರು. ರಾಷ್ಟ್ರಪತಿ ಕೋವಿಂದ್, "ಈದ್ ಮುಬಾರಕ್. ಇದು ಪ್ರೀತಿ,ಸೌಹಾರ್ದತೆ, ಶಾಂತಿಯನ್ನು ಅಭಿವ್ಯಕ್ತಪಡಿಸುವ ಹಬ್ಬ. ಈದ್ ಬಡವರು ಮತ್ತು ಅಗತ್ಯವುಳ್ಳವರಿಗೆ ನೆರವಾಗುವ ನಂಬಿಕೆಯನ್ನು ಪುನರುಚ್ಚರಿಸುತ್ತದೆ. ನಾವೆಲ್ಲರೂ ಕೊರೋನಾ ವೈರಸ್ ಹರಡುವಿಕೆ ತಡೆಯಲು ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಈ ಹಬ್ಬವನ್ನು ಆಚರಿಸೋಣ" ಎಂದು ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ "ಈದ್ ಮುಬಾರಕ್! ಈ ವಿಶೇಷ ಸಂದರ್ಭ ಎಲ್ಲರ ಕರುಣೆ, ಸಹೋದರತೆ ಮತ್ತು ಸೌಹಾರ್ದತೆಯನ್ನು ಹೆಚ್ಚಿಸಲು. ಎಲ್ಲರೂ ಆರೋಗ್ಯ ಮತ್ತು ಸಮೃದ್ಧವಾಗಿರಲಿ" ಎಂದು ಟ್ವೀಟ್ ಮೂಲಕ ಶುಭಾಷಯ ಕೋರಿದ್ದಾರೆ.