ಅಂದಿನ ಪ್ರಧಾನಿ ರಾಜೀವ್ ಗಾಂಧಿ ನನಗೆ ಪುನರ್ಜನ್ಮ ನೀಡಿದ್ದರು: ವಾಜಪೇಯಿ


ನವದೆಹಲಿ: ಭಾರತೀಯ ರಾಜಕಾರಣದ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರು.  

1957ರಿಂದ ಚುನಾವಣೆಯಲ್ಲಿ ಸ್ಪಧರ್ಿಸುತ್ತಾ ಬಂದಿರುವ ಅಟಲ್ ಜೀ ಅವರು ಸೋಲಿಲ್ಲದ ಸರದಾರರಾಗಿದ್ದರು. ಅತಹ ಅಟಲ್ ಜೀ ಅವರು ನೆಹರು-ಗಾಂಧಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು.  

ನೆಹರು ಕುಟುಂಬದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಬಗ್ಗೆ ವಾಜಪೇಯಿ ಅವರು ಕೆಲ ಸಂಗತಿಗಳನ್ನು ಹೇಳಿಕೊಂಡಿದ್ದರು. 1987ರಲ್ಲಿ ಅಟಲ್ ಜೀ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಸಮಯದಲ್ಲಿ ಅಮೆರಿಕದಲ್ಲಿ ಮಾತ್ರ ಇದಕ್ಕೆ ಚಿಕಿತ್ಸೆ ದೊರೆಯುತ್ತಿತ್ತು. ಆದರೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲು ಅಟಲ್ ಜೀಗೆ ಆಥರ್ಿಕ ಪರಿಸ್ಥಿತಿ ಇರಲಿಲ್ಲ. 

ಅಟಲ್ ಜೀ ಅವರ ಅನಾರೋಗ್ಯದ ಬಗ್ಗೆ ತಿಳಿದ ರಾಜೀವ್ ಗಾಂಧಿ ಅವರು ವಾಜಪೇಯಿ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡರು. ಈ ವೇಳೆ ಅವರಿಗೆ ನ್ಯೂಯಾಕರ್್ ನಲ್ಲಿರುವ ಭಾರತ ನಿಯೋಗವನ್ನು ಭೇಟಿ ಮಾಡಿ ಎಂದು ರಾಜೀವ್ ಗಾಂಧಿ ತಿಳಿಸಿದ್ದರು. ಹಾಗಾಗಿ ಅಟಲ್ ಜೀ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು.  

1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ಅವರನ್ನು ನೆನೆಯುತ್ತಾ ಇದನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ಹೇಳಿದ್ದರು ಎಂದು ಎಂಬ ಅಂಶ ದಿ ಡೆವಿಲ್ಸ್ ಅಡ್ವೋಕೇಟ್ ನಲ್ಲಿ ಪ್ರಕಟವಾದ ಪುಸ್ತಕದಲ್ಲಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು ಉಲ್ಲೇಖಿಸಿದ್ದರು.  

ಅಟಲ್ ಜೀ ಅವರು ನ್ಯೂಯಾಕರ್್ ನಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಹಿಂದಿರುಗಿದ ಬಳಿಕ ಇಬ್ಬರು ನಾಯಕರು ಈ ವಿಷಯವನ್ನು ಯಾರೊಂದಿಗೂ ಹೇಳಿಕೊಂಡಿರಲ್ಲಿಲ್ಲ. 

ಆದರೆ ಅಟಲ್ ಜೀ ಅವರು ಅಟಲ್ ಜೀ ಅಂಚೆ ಪತ್ರ ಕಳುಹಿಸುವ ಮೂಲಕ ರಾಜೀವ್ ಗಾಂಧಿಯವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದರಂತೆ.