ನವದೆಹಲಿ, ನ 24: ದೇಶವಾಸಿಗಳಿಗೆ ನವೆಂಬರ್ 26ರಂದು ಆಚರಿಸಲಾಗುವ 70ನೇ ಸಂವಿಧಾನ ದಿನ 'ವಿಶೇಷ ದಿನ'ವೆಂದು ಬಣ್ಣಿಸಿರುವ ಪ್ರಧಾನಿ ನರೇಂದ್ರಮೋದಿಯವರು, ಸಂಸತ್ನಲ್ಲಿ ವಿಶೇಷ ಕಾರ್ಯಕ್ರಮದ ಜೊತೆಗೆ ದೇಶದಾದ್ಯಂತ ಈ ದಿನವನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ.
ಆಕಾಶವಾಣಿಯಲ್ಲಿಂದು ಪ್ರಸಾರವಾದ 'ಮನ್-ಕಿ-ಬಾತ್' ಕಾರ್ಯಕ್ರಮದ 59ನೇ ಆವೃತ್ತಿಯಲ್ಲಿ ದೇಶವನ್ನುದ್ದೇಶಿ ಮಾತನಾಡಿದ ಪ್ರಧಾನಿಯವರು, ಸಂವಿಧಾನ ದಿನವನ್ನಾಗಿ ಆಚರಿಸುವ ನವೆಂಬರ್ 26ನೇ ತಾರೀಖು ಇಡೀ ದೇಶಕ್ಕೆ ವಿಶೇಷ ದಿನವಾಗಿದೆ. ಸಂವಿಧಾನ ಅಂಗೀಕರಿಸಿದ 70 ವಾಷರ್ಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ವರ್ಷ ತುಂಬಾ ಮಹತ್ವವನ್ನು ಪಡೆದಿದೆ ಎಂದು ಹೇಳಿದ್ದಾರೆ.
'ನಾವೆಲ್ಲ ಸಂವಿಧಾನ ರಚನೆಗೆ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿ, ಅವರಿಗೆ ಗೌರವ ನಮನ ಸಲ್ಲಿಸಬೇಕಿದೆ. ಭಾರತೀಯ ಸಂವಿಧಾನ ಪ್ರತಿಯೊಬ್ಬ ನಾಗರೀಕರಿಗೂ ಎಲ್ಲ ಹಕ್ಕುಗಳು ಮತ್ತು ಘನತೆಯನ್ನು ಖಾತ್ರಿಪಡಿಸುತ್ತದೆ.' ಎಂದು ಪ್ರಧಾನಿ ಹೇಳಿದ್ದಾರೆ.
ಸಂವಿಧಾನ ದಿನ ಆಚರಣೆಯಿಂದ ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿಯಲು ಮತ್ತು ರಾಷ್ಟ್ರ ನಿಮರ್ಾಣಕ್ಕೆ ನಮ್ಮ ಬದ್ಧತೆಗಳನ್ನು ಪ್ರತಿಪಾದಿಸಲು ಸಹಕಾರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.