ನವದೆಹಲಿ, ಜ.11 , ಒಮಾನ್‌ನ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸಂತಾಪ ಸೂಚಿಸಿದ್ದು, ಈ ಪ್ರದೇಶಕ್ಕೆ ಅವರು ಶಾಂತಿಯ ದಾರಿದೀಪವಾಗಿದ್ದರು ಎಂದು ಬಣ್ಣಿಸಿದ್ದಾರೆ.ಅವರು ಭಾರತ ಉತ್ತಮ ಸ್ನೇಹಿತರಾಗಿದ್ದರು. ಈ ಪ್ರದೇಶಕ್ಕೆ ಶಾಂತಿಯ ದಾರಿದೀಪವಾಗಿದ್ದರು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.1970 ರಿಂದ ದೇಶದ ಮುಖ್ಯಸ್ಥರಾಗಿದ್ದ ಒಮಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಸುಲ್ತಾನ್ ಶುಕ್ರವಾರ ತಡರಾತ್ರಿ ನಿಧನ ಹೊಂದಿದ್ದರು. ಅವರಿಗೆ ತಮ್ಮ 79 ವರ್ಷ ವಯಸ್ಸಾಗಿತ್ತು. ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ ಅವರ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಗಿದೆ. ಅವರು ಒಮನ್‌ನನ್ನು ಆಧುನಿಕ ಮತ್ತು ಸಮೃದ್ಧ ರಾಷ್ಟ್ರವನ್ನಾಗಿ ಪರಿವರ್ತಿಸಿದ ದೂರದೃಷ್ಟಿಯ ನಾಯಕ ಮತ್ತು ರಾಜಕಾರಣಿ ಎಂದು ಮೋದಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.