ನವದೆಹಲಿ, ಜೂನ್ 3, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂ ಜಿ ಕೆಪಿ)ನ ವಿವಿಧ ಘಟಕಗಳಡಿ ಸುಮಾರು 42 ಕೋಟಿ ಬಡ ಜನರು 53, 248 ಕೋಟಿ ರೂಪಾಯಿ ಹಣಕಾಸು ನೆರವು ಪಡೆದುಕೊಂಡಿದ್ದಾರೆ. 1.70 ಲಕ್ಷ ಕೋಟಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಭಾಗವಾಗಿ ಸರ್ಕಾರ ಉಚಿತ ಮಹಿಳೆಯರು, ಬಡ ಹಿರಿಯ ನಾಗರೀಕರು ಹಾಗೂ ರೈತರಿಗೆ ಆಹಾರ ಧಾನ್ಯಗಳು ಹಾಗೂ ನಗದು ಹಣ ಪಾವತಿಸಿದೆ. ಪ್ಯಾಕೇಜ್ ತ್ವರಿತ ಅನುಷ್ಟಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ನಿಗಾವಹಿಸುತ್ತಿವೆ.ಪ್ರಧಾನ ಮಂತ್ರಿ – ಕಿಸಾನ್ ಯೋಜನೆಯ ಮೊದಲ ಕಂತಾಗಿ 16394 ಕೋಟಿ ರೂಪಾಯಿ ಪಾವತಿಸಲಾಗಿದ್ದು, ಇದರಿಂದ 8.19 ಕೋಟಿ ಮಂದಿ ರೈತರಿಗೆ ಪ್ರಯೋಜನವಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. 20. 33 ಕೋಟಿ ಮಹಿಳಾ ಜನಧನ್ ಬ್ಯಾಂಕ್ ಖಾತೆಗಳಿಗೆ 10029 ಕೋಟಿ ಪಾವತಿಸಲಾಗಿದೆ ಅಂಕಿ ಅಂಶ ನೀಡಿದೆ.