ಬಾಗಲಕೋಟೆ: ಪ್ರಸಕ್ತ ಸಾಲಿಗೆ ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ವಿವಿಧ ಬೆಳೆಗಳಿಗೆ ಕನರ್ಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಗೆ ನೊಂದಣಿ ಪ್ರಕ್ರಿಯೆ ಪಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ರೈತರ ಬೆಳೆ ವಿಮಾ ಯೋಜನೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಈ ಯೋಜನೆಗೆ ಒಳಪಡಿಸುವ ವಿವಿಧ ಬೆಳೆಗಳಿಗೆ ಬೆಳೆಸಾಲ ಪಡೆಯುವ ಮತ್ತು ಬೆಳೆಸಾಲ ಪಡೆಯದ ರೈತರು ಬ್ಯಾಂಕ್ಗಳಿಗೆ ಘೋಷಣೆಗಳನ್ನು ನಿಗದಿಪಡಿಸಿದ ದಿನಾಂಕಗಳೊಳಗಾಗಿ ಸಲ್ಲಿಸಬೇಕಾಗಿರುವದರಿಂದ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಾಗಲಕೋಟೆ ಜಿಲ್ಲೆಗೆ ಪ್ಯೂಚರ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿ, ವಿಮಾ ಸಂಸ್ಥೆ ಆಯ್ಕೆಯಾಗಿದ್ದು, ಹಿಂಗಾರು ಮತ್ತು ಬೇಸಿಗೆ ಹಂಗಾಮಿಗೆ ಅರ್ಹ ಸಾಲ ಪಡೆದ ರೈತರಿಗೆ ಈ ಯೋಜನೆ ಕಡ್ಡಾಯವಾಗಿದ್ದು, ಇತರೆ ರೈತರಿಗೆ ಇದು ಐಚ್ಛಿಕವಾಗಿರುತ್ತದೆ. ಈ ಯೋಜನೆ ಬಿತ್ತನೆ ಕ್ಷೇತ್ರ ಅನುಸಾರವಾಗಿ ವಿಮಾ ಪರಿಹಾರ ವಿಧಾನ ಆಧರಿಸಿದ್ದು, ರೈತರು ತಾವು ಬೆಳೆದ ಬೆಳೆಗಳಿಗೆ ಮಾತ್ರ ವಿಮಾ ಮಾಡಿಸತಕ್ಕದೆಂದು ತಿಳಿಸಿದರು.
ಜಿಲ್ಲಾ ಜಂಟಿ ಕೃಷಿ ನಿದರ್ೇಶಕಿ ಚೈತ್ರಾ ಪಾಟೀಲ ವಿವಿಧ ಬೆಳೆವಾರು ವಿಮೆಯ ವಿವರ ನೀಡುತ್ತಾ, ಹಿಂಗಾರು ಹಂಗಾಮಿನ ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾದ ಕಡಲೆ(ಮ.ಆ) ಬೆಳೆಗಳಿಗೆ ವಿಮೆಗೆ ಒಳಪಡಿಸಲು ಕೊನೆಯ ದಿನ ಡಿಸೆಂಬರ 31, ಜೋಳ (ಮ.ಆ)ಕ್ಕೆ ನವೆಂಬರ 14, ಗೋವಿನ ಜೋಳಕ್ಕೆ (ನೀ)ಕ್ಕೆ ಡಿಸೆಂಬರ 16, ಸೂರ್ಯಕಾಂತಿ (ಮ.ಆ)ಗೆ ನವೆಂಬರ 30 ಕೊನೆಯ ದಿನವಾಗಿದೆ. ಹಿಂಗಾರು ಹಂಗಾಮಿನ ಹೋಬಳಿ ಮಟ್ಟದ ಬೆಳೆಗಳಾದ ಕಡಲೆ (ಮ.ಆ, ನೀ)ಗೆ ಡಿಸೆಂಬರ 31, ಹುರುಳಿ (ಮ.ಆ), ಜೋಳ (ನೀ, ಮ.ಆ), ಅಗಸೆ (ಮ.ಆ), ಕುಸುಬೆ (ಮ.ಆ)ಗೆ ನವೆಂಬರ 14, ಗೋವಿನ ಜೋಳ(ನೀ)ಗೆ ಡಿಸೆಂಬರ 16, ಸೂರ್ಯಕಾಂತಿ (ನೀ, ಮ.ಆ) ನವೆಂಬರ 30, ಗೋದಿ (ನೀ) ಡಿಸೆಂಬರ, ಗೋದಿ (ಮ.ಆ) ನವೆಂಬರ 30 ಹಾಗೂ ಈರುಳ್ಳಿ (ನೀ)ಗೆ ವಿಮೆ ಒಳವಡಿಸಲು ಡಿಸೆಂಬರ 16 ಕೊನೆಯ ದಿನವಾಗಿದೆ ಎಂದು ತಿಳಿಸಿದರು.
ಬೇಸಿಗೆ ಹಿಂಗಾರು ಹಂಗಾಮಿಗೆ ಗ್ರಾಮ ಪಂಚಾಯತ ಮಟ್ಟದ ಬೆಳೆಗಳಾದ ಸೂರ್ಯಕಾಂತಿ (ನೀ)ಗೆ ಫೆಬ್ರವರಿ 29, 2020, ಬೇಸಿಗೆ ಹಿಂಗಾರು ಹಂಗಾವಿನ ಹೋಬಳಿ ಮಟ್ಟದ ಬೆಳೆಗಳಾದ ಶೇಂಗಾ (ನೀ), ಸೂರ್ಯಕಾಂತಿ (ನೀ), ಈರುಳ್ಳಿ (ನೀ)ಗೆ ಫೆಬ್ರವರಿ 29 ಕೊನೆಯ ದಿನವಾಗಿರುತ್ತದೆ ಎಂದರು ತಿಳಿಸಿದರು. ರೈತರು ಬೆಳೆ ವಿಮೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿದರ್ೇಶಕರ ಕಚೇರಿ, ಬ್ಯಾಂಕ್ ಸಿಬ್ಬಂದಿಯನ್ನು ಸಂಪಕರ್ಿಸಬಹುದಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಬೆಳೆಗಳ ವಿಮೆಯ ಮಾಹಿತಿಯನ್ನೊಳಗೊಂಡ ಪ್ರಚಾರ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಕೃಷಿ ಇಲಾಖೆಯ ಉಪನಿದರ್ೇಶಕ ಕೊಂಗವಾಡ, ಜಿಲ್ಲಾ ಅಂಕಿ ಸಂಖ್ಯಾಧಿಕಾರಿ ಗಂಗಾಧರ ದಿವಟರ, ಜಿಲ್ಲಾ ಅಗ್ರಣೀಯ ಬ್ಯಾಂಕ್ ಮ್ಯಾನೇಜರ ಗೋಪಾಲರೆಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.