ನವದೆಹಲಿ, ಸೆಪ್ಟೆಂಬರ್ 14 ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆಯ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಕಾರ್ಯಾಧ್ಯಕ್ಷ ಜೆಪಿನಡ್ಡಾ ಬಿಜೆಪಿಯ ಪ್ರಮುಖ ನಾಯಕರು ಶನಿವಾರ ಏಮ್ಸ್ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಕಸಗುಡಿಸುವ ಮೂಲಕ ಸೇವಾ ಸಪ್ತಾಹಕ್ಕೆ ಚಾಲನೆ ನೀಡಿದರು. ಇದೇ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರು 69 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅಮಿತ್ ಶಾ ಷಾ ಏಮ್ಸ್ ಗೆ ಭೇಟಿ ನೀಡಿ, ರೋಗಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ನಂತರ ಅವರಿಗೆ ಹಣ್ಣುಗಳನ್ನು ವಿತರಿಸಿ ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸಿದರು. ಪ್ರಧಾನಿ ಮೋದಿ ಅವರು ಜೀವನವನ್ನು ರಾಷ್ಟ್ರ ಮತ್ತು ಬಡವರ ಸೇವೆಗಾಗಿ ಅರ್ಪಿಸಿದ್ದಾರೆ, ಆದ್ದರಿಂದ ಅವರ ಜನ್ಮದಿನದ ಒಂದು ವಾರವನ್ನು ಸೇವಾ ಸಪ್ತಾಹ (ಸೇವಾ ವಾರ) ಎಂದು ಆಚರಿಸಲು ಇದು ಸರಿಯಾದ ಸಮಯವಾಗಿದೆ ದೇಶಾದ್ಯಂತ ಇದಕ್ಕೆ ಬಿಜೆಪಿ ಕಾರ್ಯಕರ್ತರು ಸಾಥ್ ಕೊಡಲಿದ್ದಾರೆ ಎಂದು ಹೇಳಿದರು.