ಕಾರವಾರ 16: ಕೇಂದ್ರ ಸರ್ಕಾರದ ಆರ್ಥಿಕ ತಪ್ಪು ನೀತಿಯಿಂದ ಬೆಲೆ ಗಗನಕ್ಕೆ ಏರಿವೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಆರೋಪಿಸಿದರು.
ಕಾರವಾರದ ಪತ್ರಿಕಾಭವನದಲ್ಲಿ ಬುಧುವಾರ ಸುದ್ದಿಗೋಷ್ಟಿ ಮಾಡಿದ ಅವರು ಕೇಂದ್ರ ಸರ್ಕಾರ ಬ್ಯಾಂಕ್ ಸೆಕ್ಟರ್ ಮೂಲಕ ಬಡವರ ರಕ್ತ ಹೀರುತ್ತಿದೆ ಎಂದು ಆರೋಪಿಸಿದರು . ಗ್ರಾಹಕರ ಎಟಿಎಂಗೆ ಸಹ ಚಾರ್ಜ ಮಾಡಲಾಗುತ್ತಿದೆ. ಆರ್ . ಬಿ. ಐ. ರೂಲ್ಸ ಪ್ರಕಾರ ಮೇ ತಿಂಗಳಿನಿಂದ ಖಾತೆ ಹೊಂದಿದ ಬ್ಯಾಂಕ್ ನಿಂದ ಐದು ಟ್ರಾಂಜಕ್ಷನ್ ಮಾತ್ರ ಫ್ರೀ ಇರಲಿದೆ. ಅನ್ಯ ಬ್ಯಾಂಕ್ ಎಟಿಎಂ ನಿಂದ ಮೂರು ಟ್ರಾಂಜಕ್ಷನ್ ಉಚಿತ . ನಂತರದ ಟ್ರಾಂಜಕ್ಷನ್ ಗಳಿಗೆ 23 ರೂ. ಶುಲ್ಕ ವಿಧಿಸಲಾಗುತ್ತದೆ ಎಂಬ ನಿಯಮ ಜಾರಿಗೆ ಬರಲಿದೆ. ಇದು ಗ್ರಾಹಕರಿಗೆ ಎಳೆದ ಬರೆ ಎಂದರು . ಚೆಕ್ ,ಡಿಡಿ ಮೇಲೆ ಹೆಚ್ಚಿನ ಶುಲ್ಕ ಈಗಾಗಲೇ ವಿಧಿಸಲಾಗುತ್ತಿದೆ. ಜನಧನ ಖಾತೆ ಓಪನ್ ಮಾಡಲು ಫ್ರೀ ಎಂದರು. ನಂತರ ಅದರಲ್ಲಿ ಟ್ರಾಂಜಕ್ಷನ್ ಇಲ್ಲ ಎಂದು ದಂಡ ಹಾಕಿದರು. 43 ಸಾವಿರ ಕೋಟಿ ರೂ. ಆಪರೇಟಿಂಗ್ ಇಲ್ಲದ ಹಣವಾಗಿ ಕೇಂದ್ರ ಸರ್ಕಾರಕ್ಕೆ ಜಮಾ ಆಗಿದೆ. 14750 ಸಾವಿತ ಕೋಟಿ ಇನ್ ಅಪರೇಟಿವ್ ಆಕೌಂಟ್ ಆಗಿ ಸರ್ಕಾರಕ್ಕೆ ಜಮಾ ಆಗಿದೆ. ಜನ ಸಾಮಾನ್ಯ, ಬಡವರು ಬ್ಯಾಂಕ್ ಗೆ ಹೋಗದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಅಪಾದಿಸಿದರು. ಶ್ರೀಮಂತರಿಗೆ ಮಾತ್ರ ಬ್ಯಾಂಕ್ ಎಂಬಂತಾಗಿದೆ. ಬಡವರು, ಕೃಷಿ ಕಾರ್ಮಿಕರು, ಕೂಲಿ ಕಾರ್ಮಿಕರು ಮತ್ತೆ ಹಳೆಯ ಜಮೀನ್ದಾರಿ ಪದ್ಧತಿಗೆ ಮರಳುವ ಸನ್ನಿವೇಶವನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡುತ್ತಿದೆ ಎಂದರು.
ಕೇಂದ್ರ ಸರ್ಕಾರ ಕೃತಕ ವಸ್ತುಗಳ ಅಭಾವ ಸೃಷ್ಟಿ ಮಾಡಿ, ಜನರನ್ನು ಕಷ್ಟಕ್ಕೆ ಹಾಕುತ್ತಿದ್ದಾರೆ. ಕೃಷಿ ಉತ್ಪನ್ನ ಖಾಸಗಿ ಮಾರುಕಟ್ಟೆದಾರರ ಕೈಗೆ ಹೋಗುತ್ತಿದೆ. ಉತ್ಪನ್ನಗಳ ಅಭಾವ ಸೃಷ್ಟಿಯನ್ನು ವ್ಯವಸ್ಥಿತವಾಗಿ ಸಿಗದಂತೆ ಮಾಡಲಾಗುತ್ತಿದೆ. ಕರ್ನಾಟಕ ಸೇರಿ ಇಡೀ ದೇಶದ ವಿವಿಧ ರಾಜ್ಯ ಗಳಲ್ಲಿ ಅಭಾವ ಸೃಷ್ಟಿ ಮಾಡುತ್ತಾರೆ. ಜನಸಂಘವನ್ನು ಬೆಳಸಿದ್ದೆ ವ್ಯಾಪಾರಿಗಳು. ಅವರೇ ಬಿಜೆಪಿ ಬೆಳಸಿದವರು. ಅವರೇ ಸರ್ಕಾರ ನೆಡೆಸುತ್ತಾರೆ .ಬಿಜೆಪಿ ಸರ್ಕಾರ ಸಹ ಕೃತಕ ಅಭಾವ ಸೃಷ್ಟಿಸುವ ಕೆಲಸವನ್ನು ವ್ಯಾಪಾರಿಗಳಿಗೆ ನೀಡಿದೆ. ಹಾಗಾಗಿ ಸ್ಟಾಕ್ ಯಾರ್ಡ್ ಗಳ ಮೇಲೆ ದಾಳಿಯೇ ಇಲ್ಲವಾಗಿದೆ ಎಂದು ಕಾಂಗ್ರೆಸ್ ವಕ್ತಾರರು ಆಪಾದಿಸಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನೇ ಕೇಂದ್ರ ಸರ್ಕಾರ ಹಾಳು ಮಾಡಿದೆ ಎಂದು ಅವರು ಟೀಕಿಸಿದರು. ಖಾಸಗಿ ವಿತರಕರ ಹಿತ ರಕ್ಷಿಸಲು ಸಿಲೆಂಡರ್ ಬೆಲೆ ಹೆಚ್ಚಿಸಿದರು. ಸಿಲೆಂಡರ್ ಮೇಲೆ 50 ರೂ.ಹೆಚ್ಚಾಗಲು ಸಹ ಇದೇ ಕಾರಣ. 69 ರೂ.ಗೆ ಕ್ರೂಡಾಯಿಲ್ ಸಿಕ್ಕರೂ ಪೆಟ್ರೋಲ್ , ಡಿಜೆಲ್ ಬೆಲೆ ಇಳಿಸುತ್ತಿಲ್ಲ. ಡಿಮಾನಿಟೈಜೇಶನ್, ಖಾಸಗೀಕರಣ ದಿಂದ ಕೈಗಾರಿಕೆಗಳು ಸ್ಥಾಪನೆಯಾಗುತ್ತಿಲ್ಲ. ಕೇಂದ್ರ ಸರ್ಕಾರ ಒಟ್ಟಲ್ಲಿ ದೇಶದ ವಿತರಣಾ ವ್ಯವಸ್ಥೆ ಹಾಳು ಮಾಡಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಆರೋಪಿಸಿದರು. ಕೇಂದ್ರ ಸರ್ಕಾರದ ತಪ್ಪು ನೀತಿಗಳನ್ನು ಕಾಂಗ್ರೆಸ್ ಪಕ್ಷ ಟೀಕಿಸುತ್ತದೆ ಎಂದರು. ಜನ ಸಾಮಾನ್ಯರಿಗೆ ಬ್ಯಾಂಕ್ ಹಾಗೂ ದಿನ ಬಳಕೆ ವಸ್ತುಗಳು ಸಗುವಂತೆ ಹೊಸ ಕಾನೂನು ತರಲಿ ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ ಎಂದರು.
ರಾಜೇಂದ್ರ ರಾಣೆ, ಸಲೀಂ ಶೇಖ್ ಇತರರು ಉಪಸ್ಥಿತರಿದ್ದರು.