ಏಡ್ಸ್ ಕಾಯಿಲೆಯನ್ನು ತಡೆಗಟ್ಟುವುದು ಅತ್ಯವಶ್ಯಕ: ತಾ.ಪಂ ಅಧ್ಯಕ್ಷ ಶರಣಬಸನಗೌಡ


ಗದಗ 05: ಏಡ್ಸ್ ಕಾಯಿಲೆ ಮಾರಣಾಂತಿಕವಾಗಿದ್ದು ಅದನ್ನು ತಡೆಗಟ್ಟುವುದು ಅತವಶ್ಯಕವಾಗಿದೆ.   ಮಧ್ಯ ವಯಸ್ಸಿನ ಯುವ ಜನಾಂಗದವರಿಗೆ ಈ ಕುರಿತು  ಅರಿವು ಮೂಡಿಸಬೇಕು   ಎಂದು ಗದಗ ತಾ.ಪಂ ಅಧ್ಯಕ್ಷ ಶರಣಬಸನಗೌಡ ನುಡಿದರು. 

   ಗದಗ  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಮತ್ತು ಪ್ರಸಾರ ಇಲಾಖೆ, ಜಿಮ್ಸ್ ರಕ್ತ ನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ, ಗುರು ಸೇವಾ ಸೊಸೈಟಿ, ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ, ರೆಡ್ ರಿಬ್ಬನ್ ಕ್ಲಬ್, ಯೂತ್ ರೆಡ್ ಕ್ರಾಸ್ವಿಂಗ್ ಹಾಗೂ ಶಿಕ್ಷಣ ಇಲಾಖೆ ಗದಗ ಇವರುಗಳ ಸಂಯುಕ್ತಾಶ್ರಯದಲ್ಲಿ ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ ಎಂಬ ಧ್ಯೇಯವಾಕ್ಯದೊಂದಿಗೆ ಜಗದ್ಗುರು ತೋಂಟದಾರ್ಯ ಕಾಲೇಜ್ನಲ್ಲಿಂದು ಜರುಗಿದ ಗದಗ ಜಿಲ್ಲಾ ಮಟ್ಟದ ವಿಶ್ವ ಏಡ್ಸ್  ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಜಿಲ್ಲೆಯಲ್ಲಿ 7ಸಾವಿರ ಜನ ಏಡ್ಸ್ ರೋಗಗಳಿದ್ದಾರೆ. ಇದರಿಂದ ಅಂತವರನ್ನು ದೂರವಿಡದೇ ಸರಿಯಾದ ಪ್ರಮಾಣದಲ್ಲಿ ಚಿಕಿತ್ಸೆಯನ್ನು ಒದಗಿಸಿ ಆರೋಗ್ಯವಂತರನ್ನಾಗಿಸಬೇಕು. ಏಡ್ಸ್ ತಡೆಗಟ್ಟುವ ಕುರಿತು ವಿವಿಧ  ಕಲಾತಂಡಗಳಿಂದ  ಬೀದಿ ನಾಟಕ  ಮತ್ತು ಭಿತ್ತಿ ಪತ್ರಗಳ ವಿತರಣೆ ಮೂಲಕ   ಜನರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಏಡ್ಸ್ ಸಂಪೂರ್ಣವಾಗಿ ತಡೆಗಟ್ಟುವಲ್ಲಿ  ಯಶಸ್ವಿಯಾಗಬೇಕು ಎಂದು ಶರಣಬಸನಗೌಡ ಪಾಟೀಲ ತಿಳಿಸಿದರು. 

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್.ಜಿ ಸಲಗೆರೆ ಮಾತನಾಡಿ ಏಡ್ಸ್ ಕಾಯಿಲೆ ವೈರಸ್ ಮುಖಾಂತರ ದೇಹದ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಅಸುರಕ್ಷಿತ ಲೈಂಗಿಕ ಸಂಪರ್ಕ, ಅಸುರಕ್ಷಿತ ರಕ್ತ ದಾನ, ಸಂಸ್ಕರಣೆ ಮಾಡದ ಸಿರೀಂಜ್ ಬಳಕೆ,  ಡ್ರಗ್ಸ್ ಸೇವನೆಯಿಂದ ಈ ಕಾಯಿಲೆ ಹರಡುತ್ತದೆ.   ಏಡ್ಸ್ಗೆ ಉಚಿತ ಚಿಕಿತ್ಸೆ ಲಭ್ಯವಿದ್ದು ರೋಗಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು. ಸಮುದಾಯ ಅವರೊಂದಿಗೆ ಕೈ ಜೋಡಿಸಿದರೆ ಸೋಂಕು ಮುಕ್ತ ನಾಡನ್ನು ಕಟ್ಟಬಹುದೆಂದು ತಿಳಿಸಿದರು. ಈ ಕಾರ್ಯದಲ್ಲಿ ಯುವ ಪೀಳಿಗೆ ಮುಖ್ಯ ಪಾತ್ರ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರಿಗಿಡದ ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್.ಐ.ವಿ. ಸೋಂಕಿನ ಪ್ರಮಾಣ ಕಳೆದ ಹತ್ತು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಾಗ ಗಣನೀಯವಾಗಿ ಇಳಿಕೆ ಕಂಡುಬಂದಿದ್ದು, ಜಿಲ್ಲೆಯ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಲ್ಲಿ ಎಲ್ಲ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿಗಳು, ಸಂಘ ಸಂಸ್ಥೆಗಳು ಜಿಲ್ಲೆಯ ಎಲ್ಲ ಇಲಾಖೆಗಳ ಸಹಕಾರದಿಂದ ಈ ಸೋಂಕನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ಜಿಲ್ಲೆಯಲ್ಲಿ 9 ಕಡೆ ಐಸಿಟಿಸಿ ಕೇಂದ್ರ  ಸ್ಥಾಪಿಸಲಾಗಿದ್ದು 3,696  ಏಡ್ಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ  ಎಂದರು.

ಗದಗ ಜಿಲ್ಲೆಯಲ್ಲಿ ಹೆಚ್.ಐ.ವಿ. ನಿಯಂತ್ರಣದಲ್ಲಿ ಉತ್ತಮ ಸೇವೆ ಸಲ್ಲಿಸಿದ ಐಸಿಟಿಸಿ ಗದಗ ಆಪ್ತಸಮಾಲೋಚಕರು ಹಾಗೂ ಐಸಿಟಿಸಿ ರೋಣ ಪ್ರಯೋಗ ಶಾಲಾ ತಂತ್ರಜ್ಞ, ಏ.ಆರ್.ಟಿ. ಕೇಂದ್ರ ಗದಗ, ರಕ್ಷಣಾ ಮಹಿಳಾ ಒಕ್ಕೂಟ, ನವಚೇತನ ಸಮುದಾಯ ಆರೈಕೆ ಕೇಂದ್ರ ಹೀಗೆ 5 ಕೇಂದ್ರಗಳಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮತ್ತು ಜಿಮ್ಸ್  ಮೆಡಿಕಲ್ ಕಾಲೇಜ ವಿದ್ಯಾರ್ಥಿಗಳು ಏಡ್ಸ್ ತಡೆಗಟ್ಟುವ ಕುರಿತು ಕಿರುನಾಟಕ ಪ್ರಸ್ತುತಪಡಿಸಿದರು.  

ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎಸ್.ಎಸ್. ನೀಲಗುಂದ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಸ್.ಎಸ್.ಹಿರೇಮಠ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಎಂ.ಡಿ ಸಾಮುದ್ರಿ, ಡಾ.ಅನಿಲ, ಎಸ್.ಎಸ್.ನಿರ್ಮಲ, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕಾಲೇಜಿನ ಶಿಕ್ಷಕ ವೃಂದ ಹಾಗೂ  ವಿದ್ಯಾಥರ್ಿಗಳು ಉಪಸ್ಥಿತರಿದ್ದರು.   ಜೆ.ಟಿ.ಕಾಲೇಜ್ ಪ್ರಾಚಾರ್ಯರಾದ ಪ್ರೋ. ಸಿ. ಲಿಂಗಾರೆಡ್ಡಿ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು.  ಜ್ಯೋತಿ ಪ್ರಾರ್ಥಿಸಿದರು. ಜಿಲ್ಲಾ ಮೇಲ್ವಿಚಾರಕ ಬಸವರಾಜ ಲಾಳಗಟ್ಟಿ ಸ್ವಾಗತಿಸಿದರು.  ರೂಪಾಲಿ  ಪೀರಣ್ಣವರ ಕಾರ್ಯಕ್ರಮ ನಿರೂಪಿಸಿದರು.