ವೈಸ ಕಮಾಡಿಂಗ್ ತಂತ್ರಜ್ಞಾನ ಹೊಂದಿದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ : ಪಿನಿಕ್ಸ ಸಂಸ್ಥೆ 1 ಎಸ್.ಜಿ.ಎನ್
ಶಿಗ್ಗಾವಿ 1: ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ನೀಡುವ ಉದ್ದೇಶದಿಂದ ವಸ್ತು ಪ್ರದರ್ಶನ ಮತ್ತು ಪ್ಯೂಜನ ಪಿಸ್ತಾ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಪಿನಿಕ್ಸ ಸಂಸ್ಥೆ ಉಪಾಧ್ಯಕ್ಷ ನರಹರಿ ಕಟ್ಟಿ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ಪಿನಿಕ್ಸ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಭಾಜನವಾದ ಸಂಸ್ಥೆ ಅಂದರೆ ಪಿನಿಕ್ಸ ಸಂಸ್ಥೆ. ತಾಲೂಕಿನಲ್ಲಿ ಮಾದರಿ ಹಾಗೂ ಸಿ.ಬಿ.ಎಸ್.ಸಿ ಗುಣಾತ್ಮಕ ಶಿಕ್ಷಣದ ಮೂಲಕ ಹೆಸರುವಾಸಿಯಾಗಿದೆ ಅದರ ಸದುಪಯೋಗವನ್ನು ತಾಲೂಕಿನ ಜನತೆ ಪಡೆದುಕೊಳ್ಳಬೇಕು ಎಂದರು.ಡಾ.ರಾಣಿ ತಿರ್ಲಾಪೂರ ಮಾತನಾಡಿ ಜಿಲ್ಲೆಯಲ್ಲಿ ವಿನೂತನ ತಂತ್ರಜ್ಞಾನ ಅಳವಡಿಸಿದ ಕೀರ್ತಿ ಪಿನಿಕ್ಸ ಸಂಸ್ಥೆಗೆ ಸಲ್ಲುತ್ತದೆ ಅದುವೇ ವೈಸ ಕಮಾಡಿಂಗ್ ಅದರ ಮುಖ್ಯ ಉದ್ದೇಶ ಉತ್ತಮವಾದ ತಂತ್ರಜ್ಞಾನವನ್ನು ಹೊಂದಿದ ಉನ್ನತವಾದ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ಸಹಕಾರಿಯಾಗಿದೆ ಎಂದು ಹೇಳಿದರು.18 ವರ್ಷ ಇತಿಹಾಸ ಹೊಂದಿದ ಈ ಸಂಸ್ಥೆ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿದೆ ಅಲ್ಲದೇ ವಿಶೇಷ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 2019 ರಿಂದ ಸಿ.ಬಿ.ಎಸ್ ಸಿ ಪಠ್ಯಕ್ರಮ ಪ್ರಾರಂಭವಾಗಿ ಸತತ ಶೇ 100 ಪ್ರತಿಶತ ಫಲಿತಾಂಶ ಪಡೆದಿದೆ. ಮತ್ತು ಇಲ್ಲಿ ಶಿಕ್ಷಣ ಪಡೆದ ಸುಮಾರು ಹಳೆ ವಿಧ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಈ ಸಂದರ್ಭದಲ್ಲಿ ಸಂಸ್ಥಾಪಕ ಅದ್ಯಕ್ಷ ಡಾ.ಎಂ.ಎಂ.ತಿರ್ಲಾಪೂರ,ಪ್ರಾಂಶುಪಾಲ ಶ್ರೀನಿವಾಸ ಮಡ್ಡಿ, ಉಪ ಪ್ರಾಂಶುಪಾಲ ಹನುಮಂತ ಗೊರವರ ಉಪಸ್ಥಿತರಿದ್ದರು. ಪಿನಿಕ ಇಂಟರ್ನ್ಯಾಷನಲ್ ಶಾಲೆಯಲ್ಲಿ ದಿನಾಂಕ 2 ರಂದು ಬೆಳಿಗ್ಗೆ 11 ಗಂಟೆಗೆ ವಸ್ತು ಪ್ರದರ್ಶನ ಎಲ್.ಕೆ.ಜಿ ಯಿಂದ ಎಸ್.ಎಸ್.ಎಲ್.ಸಿ ಮಕ್ಕಳ ಮೂಲಕ ವಿವಿಧ ಪ್ರದರ್ಶನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಉದ್ಘಾಟಿಸುವರು, ದಿನಾಂಕ 3 ರಂದು ಸಾಯಂಕಾಲ 5 ಗಂಟೆಗೆ ಪ್ಯೂಜನ ಪಿಸ್ತಾ ಎಂಬ ಶೀರ್ಷಿಕೆಯಡಿ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕೆ.ಎಸ್.ಆರ್.ಪಿ 10 ನೇ ಪಡೆ ಕಮಾಡೆಂಟ್ ಎನ್.ಬಿ.ಮೆಳ್ಳಾಗಟ್ಟಿ ಉದ್ಘಾಟಿಸುವರು.ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಎಂ.ಎಂ.ತಿರ್ಲಾಪೂರ,ನಿರ್ದೇಶಕರಾದ ಸಿದ್ದನಗೌಡ ಪಾಟೀಲ, ಸುಮಿತ್ರಾ ಪಾಟೀಲ, ಲಕ್ಷೀಭಾಯಿ ಕಟ್ಟಿ, ಪ್ರಾಂಶುಪಾಲ ಶ್ರೀನಿವಾಸ ಮಡ್ಡಿ, ಉಪ ಪ್ರಾಂಶುಪಾಲ ಹನುಮಂತ ಗೊರವರ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿರುವರು.