ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾ.ಸಂಗೊಳ್ಳಿ ರಾಯಣ್ಣ ನಾಮಕರಣಕ್ಕೆ ಒತ್ತಾಯ

ಧಾರವಾಡ 24: ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಪ್ರಥಮ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರ ಸೇನಾನಿ ಕಿತ್ತೂರು ರಾಣಿ ಚನ್ನಮ್ಮನ ಬಲಗೈ ಬಂಟ ಸಂಗೋಳ್ಳಿ ರಾಯಣ್ಣನಿಗೂ ಧಾರವಾಡ ಜಿಲ್ಲೆಗೂ ಅವಿನಾಭಾವ ಸಂಬಂಧವಿದ್ದು ರಾಯಣ್ಣನ್ನು ಸೆರೆಹಿಡಿದ ಡೋರಿಹಳ್ಳ ಧಾರವಾಡದ ಪಕ್ಕದಲ್ಲಿದ್ದು ಅವನನ್ನು ಬಂಧಿಸಿ ಇಂದಿನ ಜಿಲ್ಲಾಧಿಕಾರಿ ಕಛೇರಿಯಲ್ಲಿ ವಿಚಾರಣೆಗೈದು ಗಲ್ಲು ಶಿಕ್ಷೆ ಪ್ರಕಟಿಸಲಗಿತ್ತು. ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯ ಸಕರ್ಾರದ ಸಂಪುಟ ಸಭೆಯಲ್ಲಿ ಈ ವಿಷಯವನ್ನು ಅನುಮೋದಿಸಿ ಕೇಂದ್ರ ಸಕರ್ಾರಕ್ಕೆ ಕಳಿಸಿದ್ದಾರೆ. ಆದರೆ ಕೇಂದ್ರ ಸಕರ್ಾರ ಮತ್ತೊಮ್ಮೆ ಆಯಾ ಜಿಲ್ಲಾಧಿಕಾರಿಗಳಿಗೆ ಸ್ಥಳಿಯ ವಿಮಾನ ನಿಲ್ದಾಣಗಳಿಗೆ ಇತಿಹಾಸ ಪುರುಷರ ಹೆಸರುಗಳನ್ನು ಸೂಚಿಸಿ ಕಳುಹಿಸಲು ನಿರ್ದೇ ಶಿಸಿದ್ದು ಸಮಂಜಸವಲ್ಲ ಎಂದು ರಾಜ್ಯ ಕರ್ನಾ ಟಕ ಪ್ರದೇಶ ಕುರುಬರ ಸಂಘದ ನಿರ್ದೇ ಶಕ ಬಸವರಾಜ ಮಲಕಾರಿ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಕರ್ನಾ ಟಕ ಪ್ರದೇಶ ಕುರುಬರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು, ಸಂಘಟನೆಗಳು ಹಾಗೂ ವಿವಿಧ ಸಮಾಜದ ಮುಖಂಡರುಗಳು ಹಾಗೂ ಪಕ್ಷಾತೀತವಾಗಿ ಸಂಗೋಳ್ಳಿ ರಾಯಣ್ಣನ ಹೆಸರನ್ನು ವಿಮಾಣ ನಿಲ್ದಾಣಕ್ಕೆ ಹಾಗೂ ಕಿತ್ತೂರ ರಾಣಿ ಚನ್ನಮ್ಮನ ಹೆಸರನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ನಾಮಕರಣಗೊಳಿಸಲು ಒತ್ತಾಯಿಸಿ ಪ್ರತಿಭಟಿಸಿದರು. ಪ್ರತಿಭಟಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಮುಖಂಡರಾದ ಲೋಹಿತ ನಾಯ್ಕರ ಮಾತನಾಡಿ ರಾಯಣ್ಣನನ್ನು ನೇಣಿಗೆ ಏರಿಸಿದ ನಂದಗಡ ಗ್ರಾಮ ಹಾಗೂ ರಾಯಣ್ಣನ ಜನ್ಮಸ್ಥಳ ಸಂಗೋಳ್ಳಿ ಗ್ರಾಮ ಧಾರವಾಡದಿಂದ ಕೆಲವೆ ಕಿ.ಮೀಗಳ ಅಂತರದಲ್ಲಿದ್ದು ಸಂಗೋಳ್ಳಿ ರಾಯಣ್ಣ ಒಬ್ಬ ಹೋರಾಟಗಾರ ಅಷ್ಟೇ ಅಲ್ಲದೇ ಮಹಾನ್ ದೈವಿ ಪುರುಷನಾಗಿದ್ದ ಎಂದರು. 

ಬಸವರಾಜ ಕಟಗಿ ಮಾತನಾಡಿ ಸಂಗೋಳ್ಳಿ ರಾಯಣ್ಣನ ಹೆಸರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಹಾಗೂ ಕಿತ್ತೂರು ರಾಣಿ ಚನ್ನಮ್ಮನ ಹೆಸರನ್ನು ಬೆಳಗಾವಿ ವಿಮಾನ ನಿಲ್ದಾಣಕ್ಕೆ ನಾಮಕರಣಗೊಳಿಸಿ ಮುಂದಿನ ಪೀಳಿಗೆಗೆ ಅಷ್ಟೇ ಅಲ್ಲದೇ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಗೋಳ್ಳಿ ರಾಯಣ್ಣನ ಹಾಗೂ ಕಿತ್ತೂರು ಚನ್ನಮ್ಮನ ಹೆಸರನ್ನು, ಇತಿಹಾಸವನ್ನು ಅರಿಯುವ ಹಾಗೂ ಗುರುತಿಸುವ ಕೆಲಸವಾಗಬೇಕೆಂದರು. ಅನೇಕರು ಮಾತನಾಡಿ ನಮ್ಮ ಬೇಡಿಕೆಯನ್ನು ಈಡೇರಿಸದೇ ಹೋದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು. 

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಯಲ್ಲಮ್ಮ ನಾಯ್ಕರ, ಮಾಜಿ ಸಚಿವರಾದ ಹಣಮಂತಪ್ಪ ಅಲ್ಕೋಡ್, ಈರಪ್ಪ ಕಿತ್ತೂರ, ಕೆ. ಎಸ್. ಬೀಮಣ್ಣವರ, ಕಣವಿ, ಪಾಂಡುರಂಗ ಪಮ್ಮಾರ, ಸಾಸ್ವಿಹಳ್ಳಿ, ಹಣಮಂತಪ್ಪ ಇಬ್ರಾಹಿಂಪುರ, ದೇವರಾಜ ಕಂಬಳಿ, ನಿರ್ಮಲಾ ಹೊಂಗಲ, ಶಕುಂತಲಾ ಬ್ಯಾಹಟ್ಟಿ, ಮಹಾದೇವ ಕಳ್ಳಿಮಣಿ, ಗಿರೀಶ್ ಪಾಟೀಲ, ಜಿಲ್ಲಾ ಯುವ ಕುರುಬರ ಸಂಘದ ಅಧ್ಯಕ್ಷ ರಮೇಶ ನಲವಡಿ, ನಾಗರಾಜ ಗುರಿಕಾರ, ಗುರು ನಾಯ್ಕರ್, ಗುಡೆನ್ನವರ, ಮಂಜು ಗುತ್ತಗಿ, ಭೀಮಶಿ ಕಸಾಯಿ, ರೇವಪ್ಪ ಐರಣಿ, ನಿಂಗಪ್ಪ ಬಡಕುರಿ, ಪರಮೇಶ್ವರ ಕಾಳೆ, ತುಳಸಪ್ಪ ಪೂಜಾರ, ಜುಂಜಪ್ಪ ಕಂಬಳಿ, ಪ್ರವೀಣ ಗೋಕಾವಿ, ಮಂಜು ಅಣ್ಣಿಗೇರಿ, ಭೀಮಣ್ಣ ಹೊನಕೇರಿ, ಬಸವರಾಜ ಮೇಣಕಿ, ಅನೇಕರು ಉಪಸ್ಥಿತರಿದ್ದರು.