ನವದೆಹಲಿ, ಆ 24 ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ದೇಶದ ಜನತೆಗೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. ಭಗವಾನ್ ಕೃಷ್ಣನ ಸಮಯಾತೀತ ಬೋಧನೆಗಳನ್ನು ಪಾಲಿಸುತ್ತಾ ಹಬ್ಬ ಸಂಭ್ರಮಿಸುವಂತೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ. ಭಗವಾನ್ ಶ್ರೀಕೃಷ್ಣನ ಆಶೀರ್ವಾದ ಸದಾ ಸಂತಸ, ಆರೋಗ್ಯ ತರಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ನಲ್ಲಿ ಗೋಕುಲಾಷ್ಟಮಿಯ ಶುಭ ಹಾರೈಸಿದ್ದಾರೆ.