370 ವಿಧಿ ರದ್ದುಗೊಳಿಸಿದ ದೇಶದ ಸಂಸತ್ತಿಗೆ ರಾಷ್ಟ್ರಪತಿ ಪ್ರಶಂಸೆ

ನವದೆಹಲಿ, ಜ  31, ಪೌರತ್ವ  ತಿದ್ದುಪಡಿ  ಕಾಯ್ದೆ  ವಿರುದ್ದ  ನಿರ್ದಿಷ್ಟ ಭಾಗಗಳಲ್ಲಿ ಹಿಂಸಾಚಾರ ಸೇರಿದಂತೆ  ದೇಶಾದ್ಯಂತ  ಭಾರಿ ಪ್ರಮಾಣದ ಪ್ರತಿಭಟನೆಗಳೂ ನಡೆಯುತ್ತಿದ್ದರೂ  ರಾಷ್ಟ್ರಪತಿ  ರಾಮನಾಥ್ ಕೋವಿಂದ್  ಶುಕ್ರವಾರ    ಹೊಸ  ಪೌರತ್ವ ತಿದ್ದುಪಡಿ  ಕಾಯ್ದೆ  ಜಾರಿಗೊಳಿಸಲು  ವಿಧೇಯಕವನ್ನು   ಅಂಗೀಕರಿಸಿ,   ಸಂವಿಧಾನದ 370  ಹಾಗೂ   35 ಎ  ವಿಧಿ  ಅಮಾನ್ಯಗೊಳಿಸುವ   ಸಂಸತ್ತು  ಕೈಗೊಂಡ ಐತಿಹಾಸಿಕ  ಕ್ರಮವನ್ನು ಕೊಂಡಾಡಿದ್ದಾರೆ. ಮಹತ್ಮಾ ಗಾಂಧಿ ಅವರು  ನೀಡಿದ್ದ  ಒಂದು ಆಶ್ವಾಸನೆಯನ್ನು ಈಡೇರಿಸಲು  ನೂತನ ತಿದ್ದುಪಡಿ  ವಿಧೇಯಕಯನ್ನು  ಸಂಸತ್ತಿನ ಉಭಯ ಸದನಗಳು  ಅಂಗೀಕರಿಸಿರುವುದು  ತಮಗೆ   ಅತ್ಯಂತ    ಸಂತೋಷ ಉಂಟುಮಾಡಿದೆ ಎಂದು  2020ರ ಸಾಲಿನ    ಬಜೆಟ್  ಅಧಿವೇಶನಕ್ಕೆ ಆರಂಭದ ಮೊದಲ ದಿನ  ಸಂಸತ್ತಿನ ಉಭಯ ಸದನಗಳ ಉದ್ದೇಶಿಸಿ ಮಾಡಿದ ಭಾಷಣದಲ್ಲಿ  ರಾಷ್ಟ್ರಪತಿ  ಸಂತಸ  ವ್ಯಕ್ತಪಡಿಸಿದ್ದಾರೆ

ರಾಷ್ಟ್ರಪತಿ  ಈ ಅಂಶ ಪ್ರಸ್ತಾಪಿಸುತ್ತಿದ್ದಂತೆಯೇ   ಆಡಳಿತ  ಪಕ್ಷದ ಮುಂದಿನ  ಸಾಲಿನಲ್ಲಿ ಕುಳಿತಿದ್ದ  ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್  ಮೇಜು ಕುಟ್ಟಿ  ಸ್ವಾಗತಿಸಿದರೆ,   ಆದರೆ, ಪ್ರತಿಪಕ್ಷಗಳ ಸದಸ್ಯರು   ವಿರೋಧ  ವ್ಯಕ್ತಪಡಿಸಿದ ಕಾರಣ  ಕೆಲ ಕಾಲ  ಕೋಲಾಹಲದ   ಸನ್ನಿವೇಶ ಉಂಟಾಯಿತು.ಭಾರತದ  ಮೇಲೆ ತನ್ನ  ವಿಶ್ವಾಸ ಹಾಗೂ  ನಂಬಿಕೆಯನ್ನು ಇರಿಸುವ,   ಪೌರತ್ವ  ಹೊಂದಲು  ಉತ್ಸುಕತೆ ಹೊಂದಿರುವ   ಯಾರು ಬೇಕಾದರೂ   ಪೌರತ್ವ  ಹಕ್ಕನ್ನು ಹೊಂದಬಹುದು ಎಂದು ನನ್ನ ಸರ್ಕಾರ ಸ್ಪಷ್ಟಪಡಿಸಲು ಬಯಸುತ್ತದೆ   ಎಂದು  ರಾಷ್ಟ್ರಪತಿ ಹೇಳಿದರು.ಇಂತಹ  ಪ್ರಕ್ರಿಯೆ  ಈ ಹಿಂದೆಯೂ   ಜಾರಿಯಲ್ಲಿತ್ತು...   ಅದೇ ಪ್ರಕ್ರಿಯೆಗಳು  ಇಂದೂ ಸಹ ಮುಂದುವರಿದೆ ಎಂದು   ಕಾಯ್ದೆ ವಿರುದ್ದ   ವ್ಯಕ್ತವಾಗಿರುವ ಕಳವಳ  ನಿವಾರಿಸುವ ಪ್ರಯತ್ನವನ್ನು ರಾಷ್ಟ್ರಪತಿ ಮಾಡಿದರು.ಸಂವಿಧಾನದ ವಿಧಿ  370 ಹಾಗೂ 35 ಎ  ರದ್ದತಿಯನ್ನು  ಪ್ರಸ್ತಾಪಿಸಿದ   ರಾಷ್ಟ್ರಪತಿ,    ಸರ್ಕಾರದ ಈ ಕ್ರಮ   ಜಮ್ಮು ಮತ್ತು ಕಾಶ್ಮೀರ  ಹಾಗೂ ಲಡಾಖ್  ಪ್ರದೇಶಗಳ ಸಮಾನ  ಅಭಿವೃದ್ದಿಗೆ  ಹಾದಿ ಮಾಡಿಕೊಟ್ಟಿದೆ  ಎಂದು ಹೇಳಿದರುಸಂವಿಧಾನದ ವಿಧಿ 370 ಹಾಗೂ 35 ಎ  ರದ್ದುಪಡಿಸುವ ಮೂಲಕ   ಸಂಸತ್  ಕೇವಲ ಐತಿಹಾಸಿಕ  ಕ್ರಮ ಮಾತ್ರವಲ್ಲ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳ   ಸಮಾನ ಅಭಿವೃದ್ದಿಗೆ  ಹಾದಿ ಸುಗಮಗೊಳಿಸಿದೆ ಎಂದು ರಾಷ್ಟ್ರಪತಿ ಹೇಳಿದಾಗ   ಆಡಳಿತ ಪಕ್ಷದ  ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರೆ, ವಿರೋಧ ಪಕ್ಷಗಳು ಪ್ರತಿಭಟನೆಯ  ದ್ವನಿ ಎತ್ತಿದವು. 

2020 ದಶಕ ಭಾರತಕ್ಕೆ  ಅತ್ಯಂತ  ಮಹತ್ವದ ದಶಕವಾಗಿದ್ದು,  ಈ ದಶಕ ಹಾಗೂ ನಂತರ ಅವಧಿಯಲ್ಲಿ  ನಾವು ಕೈಗೊಳ್ಳುವ  ಎಲ್ಲಾ ಕ್ರಮಗಳಿಗೆ  ದೇಶದ  ಸಂವಿಧಾನ  ದಾರಿ ದೀಪವಾಗಲಿದೆ ಎಂದು ರಾಷ್ಟ್ರಪತಿ ಒತ್ತಿಹೇಳಿದರು.ನರೇಂದ್ರ ಮೋದಿ ಸರ್ಕಾರ  'ನವ ಭಾರತ'  ನಿರ್ಮಿಸಲು ಜನಾದೇಶ ವನ್ನು ಪಡೆದುಕೊಂಡಿದೆ. ಅದನ್ನು ಸಾಕಾರಗೊಳಿಸಲು ಹೊರಟಿದ್ದು,  ಈ ನಿಟ್ಟಿನಲ್ಲಿ   ಹಲವಾರು  ಸುಧಾರರಣಾ ಕ್ರಮಗಳನ್ನ  ಕೈಗೊಂಡಿದ್ದು   ಇದರಿಂದ   ಜಾಗತಿಕ  ಮಾನದಂಡ ಹಾಗೂ ಸೂಚ್ಯಂಕಗಳಲ್ಲಿ  ಭಾರತ  ಶ್ರೇಣಿ  ಹೆಚ್ಚಳಗೊಳ್ಳಲು  ನೆರವಾಗಿದೆ  ಎಂದರು. ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ  ತೀರ್ಪಿಗೆ   ದೇಶದ ಜನರು  ಪ್ರತಿಕ್ರಿಯಿಸಿದ  ರೀತಿ, ಶಾಂತಿ ಕಾಪಾಡಿಕೊಂಡ ವಿಧಾನ,  ಪ್ರಬುದ್ಧತೆಯನ್ನು ರಾಷ್ಟ್ರಪತಿ   ಶ್ಲಾಘಿಸಿದರು.  ಪ್ರತಿಭಟನೆಗಳನ್ನು ತೊರೆದು,  ಅರ್ಥಪೂರ್ಣ  ಸಂವಾದದಲ್ಲಿ  ತೊಡಗಿಸಿಕೊಳ್ಳುವಂತೆ  ಪ್ರತಿಪಕ್ಷಗಳನ್ನು  ಆಗ್ರಹಿಸಿದರು.  ಪ್ರತಿಭಟನೆಗಳು  ದೇಶವನ್ನದುರ್ಬಲಗೊಳಿಸುತ್ತವೆ  ಎಂದು  ರಾಷ್ಟ್ರಪತಿ ಹೇಳಿದರು.