ಆಶ್ರಯ ಬಡಾವಣೆ ನಿವಾಸಿಗಳಿಂದ ಅಧ್ಯಕ್ಷ ಕೆಂಭಾವಿಗೆ ಸನ್ಮಾನ
President Kembhavi honored by residents of Ashraya Barangay
ತಾಳಿಕೋಟಿ: ಪಟ್ಟಣದ ದಿ.ಮುಸ್ಲೀಮ್ ಕೋ-ಆಪರೇಟಿವ್ ಬ್ಯಾಂಕ್ ಇದರ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಹೆಬೂಬ ಹಜರೇಸಾಬ ಕೆಂಭಾವಿ ಇವರನ್ನು ಆಶ್ರಯ ಬಡಾವಣೆಯ ನಿವಾಸಿಗಳು ಶುಕ್ರವಾರ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿ ಅಬ್ದುಲ್ ಪಟ್ಟೇವಾಲೆ ಅವರು ಮಾತನಾಡಿ ಮೆಹಬೂಬ ಕೆಂಭಾವಿ ಅವರು ಮುಸ್ಲಿಂ ಬ್ಯಾಂಕ್ ಗೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಸಂತೋಷವನ್ನುಂಟು ಮಾಡಿದೆ ಏಕೆಂದರೆ ಅವರು ನಮ್ಮ ಬಡಾವಣೆಯಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಲ್ಲಿ ಸಹಾಯ ಸಹಕಾರ ನೀಡುತ್ತಲೇ ಬಂದಿದ್ದಾರೆ,
ಮುಂದೆಯೂ ಅವರ ಸಹಕಾರ ನಮ್ಮೊಂದಿಗೆ ಇರಲಿ. ಬಡಾವಣೆಯ ಪರವಾಗಿ ನಾನು ಅವರಿಗೆ ಅಭಿನಂದಿಸುತ್ತೇನೆ ಎಂದರು. ಸನ್ಮಾನ ಸ್ವೀಕರಿಸಿ ಅಧ್ಯಕ್ಷ ಮಹೆಬೂಬ ಕೆಂಭಾವಿ ಮಾತನಾಡಿ ನಿಮ್ಮೆಲ್ಲರ ಪ್ರೀತಿ ಹಾಗೂ ನಿರ್ದೇಶಕರ ಸಹಕಾರದಿಂದ ನಾನು ಅವಿರೋಧವಾಗಿ ಆಯ್ಕೆಯಾಗಿದ್ದೇನೆ, ಬ್ಯಾಂಕಿನಿಂದ ನಿಮಗೆ ಸಿಗುವ ಸೌಲಭ್ಯ ಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಇದರ ಜೊತೆಗೆ ನಿಮ್ಮ ಬಡಾವಣೆಗಾಗಿ ನನ್ನಿಂದ ಸಾಧ್ಯವಾದಷ್ಟು ಸಹಾಯ-ಸಹಕಾರ ಮಾಡುತ್ತೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರಫೀಕ ಬೇಪಾರಿ ಅವರನ್ನೂ ಸನ್ಮಾನಿಸಲಾಯಿತು.ಈ ಸಮಯದಲ್ಲಿ ನಿರ್ದೇಶಕರಾದ ತನ್ವೀರ ಮನಗೂಳಿ, ಮುನ್ನಾ ಅರ್ಜುಣಗಿ, ಬಡಾವಣೆಯ ಪ್ರಮುಖರಾದ ದಾಬಲಸಾಬ ಡೋಣಿ, ಖಾಸೀಮಸಾಬ ಮುಲ್ಲಾ, ಉಸ್ಮಾನ ಲಾಹೋರಿ,ರಾಜು ಚಿತ್ತರಗಿ, ಎಸ್‌ಡಿಎಂಸಿ ಅಧ್ಯಕ್ಷ ದಸ್ತಗೀರಸಾಬ ಎಕೀನ,ದಾವಲಸಾಬ ರಂಜಣಗಿ,ನಬಿಸಾಬ ಪಠಾಣ,ಮೌಲಾಸಾಬ ಬಳಗಾನೂರ, ಕಾಜು ಮಕಾಂದಾರ, ಅಬ್ದುಲ್ ರಜಾಕ ಪಟ್ಟೇವಾಲೆ, ಇಬ್ರಾಹಿಂ ಶಾಪೂರಿ,ರಫೀಕ ಚೋರಗಸ್ತಿ ಮತ್ತಿತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 