ರಾಜ್ಯಪಾಲರುಗಳ ಜೊತೆ ರಾಷ್ಟ್ರಪತಿ, ಉಪರಾಷ್ಟಪತಿ ವಿಡಿಯೋ ಕಾನ್ಫರೆನ್ಸ್

ನವದೆಹಲಿ, ಏ ೩,  ರಾಷ್ಟ್ರಪತಿ ರಾಮನಾಥ್ ಕೋವಿಂದ್,  ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು  ಶುಕ್ರವಾರ ಹಲವು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ರಾಜ್ಯಪಾಲರು,  ಉಪ ರಾಜ್ಯಪಾಲರುಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ  ಸಂವಾದ ನಡೆಸಿದರು. ಈ ಸಂದರ್ಭದಲ್ಲಿ  ದೇಶಾದ್ಯಂತ  ಸೃಷ್ಟಿಯಾಗಿರುವ   ಕೋವಿಡ್ -೧೯   ಸೋಂಕು ಪರಿಸ್ಥಿತಿಯನ್ನು ಸಮೀಕ್ಷಿಸಿದರು. ಈ ಕಾರ್ಯಕ್ರಮದಲ್ಲಿ ಆಯಾ ರಾಜ್ಯಗಳ ಉನ್ನತ ಅಧಿಕಾರಿಗಳು ಕೂಡಾ  ಪಾಲ್ಗೊಂಡಿದ್ದರು.ರಾಷ್ಟ್ರಪತಿ, ಉಪ ರಾಷ್ಟ್ರಪತಿ  ಒಂದು  ವಾರದಲ್ಲಿ     ಎರಡನೇ ಬಾರಿ  ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಪಾಲರುಗಳೊಂದಿಗೆ  ಸಂವಾದ ನಡೆಸಿದ್ದರು. 

ಮಾರ್ಚ್ ೨೭ ರಂದು   ೧೪  ರಾಜ್ಯಗಳ ರಾಜ್ಯಪಾಲರೊಂದಿಗೆ ಮೊದಲ ವಿಡಿಯೋ ಸಮ್ಮೇಳನ ನಡೆಸಿದ್ದರು. ಅದರಲ್ಲಿ  ಕೇಂದ್ರಾಡಳಿ ಪ್ರದೇಶಗಳ  ಉಪ ರಾಜ್ಯಪಾಲರು  ಭಾಗಿಯಾಗಿದ್ದರು.   ಉಳಿದ ರಾಜ್ಯಪಾಲರು, ಉಪ ರಾಜ್ಯಪಾಲರೊಂದಿಗೆ   ರಾಷ್ಟ್ರಪತಿ ಇಂದು  ವಿಡಿಯೋ ಕಾನ್ಫರೆನ್ಸ್  ನಡೆಸಿದರು.  ಆಯಾ ರಾಜ್ಯಗಳಲ್ಲಿನ ಕೋವಿಡ್ -೧೯ ಪರಿಸ್ಥಿತಿಯ ಬಗ್ಗೆ  ಈ ಸಂದರ್ಭದಲ್ಲಿ   ಪ್ರಮುಖವಾಗಿ  ಚರ್ಚೆ ನಡೆಸಿದರು. ಕೊರೊನಾ ವೈರಸ್ ಹಬ್ಬುವುದನ್ನು  ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರವಲ್ಲದೆ,  ರೆಡ್ ಕ್ರಾಸ್ ಸೊಸೈಟಿ, ನಾಗರಿಕ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ  ಖಾಸಗಿ ವಲಯ  ವಹಿಸಬೇಕಾದ ಪಾತ್ರದ ಬಗ್ಗೆ  ರಾಷ್ಟ್ರಪತಿ  ಚರ್ಚಿಸಿದರು.