ಶೇಡಬಾಳ 30: ಬರುವ ಜನೆವರಿ 19 ರಂದು ಉಗಾರ ಖುರ್ದ ಪಟ್ಟಣದಲ್ಲಿ ಜರುಗಲಿರುವ ಕಾಗವಾಡ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾಗಿರುವ ಶೇಡಬಾಳದ ಡಾ. ಭಾರತಿ ಸವದತ್ತಿ ಅವರನ್ನು ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಿದ್ಧಗೌಡಾ ಕಾಗೆ ಹಾಗೂ ಪದಾಧಿಕಾರಿಗಳು ರವಿವಾರ ದಿ 30 ರಂದು ಅವರ ಮನೆಗೆ ಭೇಟಿ ಕೊಟ್ಟು ಅಧಿಕೃತವಾಗಿ ಆಹ್ವಾನ ನೀಡಿದರು.
ಈ ಸಮಯದಲ್ಲಿ ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಆಧ್ಯಕ್ಷ ಡಾ. ಸಿದ್ಧಗೌಡಾ ಕಾಗೆಯವರು ಮಾತನಾಡಿ ಕಾಗವಾಡ ತಾಲೂಕಾ ಕೇಂದ್ರವಾಗಿ ಘೋಷಣೆಯಾದ ನಂತರ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದ್ದು ಈ ಸಮ್ಮೇಳನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ಶ್ರೀಮತಿ ಭಾರತಿ ಸವದತ್ತಿ ಆಹ್ವಾನ ಸ್ವೀಕರಿಸಿ ಚಿಕ್ಕ ವಯಸ್ಸಿನಲ್ಲಿಯೇ ನನಗೆ ದೊಡ್ಡ ಸ್ಥಾನ ನೀಡಿ ಗೌರವಿಸಿದ್ದಕ್ಕೆ ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಡಾ. ಸಿದ್ಧಗೌಡಾ ಕಾಗೆ ಹೆಚ್ಚಿನ ಮಾಹಿತಿ ನೀಡುತ್ತಾ ಅಥಣಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹಾಂತೇಶ ಉಕಲಿ, ಮತ್ತು ನಿಕಟಪೂರ್ವ ಸಮ್ಮೇಳನ ಅಧ್ಯಕ್ಷೆ ಶಾಲಿನಿತಾಯಿ ದೊಡ್ಮನಿ ಇವರ ಮುಖ್ಯ ಉಪಸ್ಥಿತಿಯಲ್ಲಿ ಸಮ್ಮೇಳನ ಯಶಸ್ವಿಗೊಳಿಸಲಾಗುವುದು
ಸಮ್ಮೇಳನದಲ್ಲಿ ಶಿಕ್ಷಣ, ಸಾಹಿತ್ಯ, ಕಲೆ, ಸಂಗೀತ, ಕ್ರೀಡೆ, ವೈದ್ಯಕಿಯ, ಕೃಷಿ, ಪತ್ರಿಕೋದ್ಯಮ, ರಾಷ್ಟ್ರಸೇವೆ, ಸಮಾಜ ಸೇವೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿರುವ ಸಾಧಕರನ್ನು ಸನ್ಮಾನಿಸುವ ನಿಧರ್ಾರ ಕೈಗೊಳ್ಳಲಾಗಿದೆ ವಿವರಿಸಿದರು.
ಕವಿಗೋಷ್ಟಿ:
ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಟಿ ನಡೆಯಲಿದ್ದು. ಕಾಗವಾಡ ತಾಲೂಕಿನ ಕವಿಮಹೋದಯರು ತಮ್ಮ ಅಪ್ರಕಟಿತ ಕವನವನ್ನು ಕಸಾಪ ಕಾಗವಾಡ ಘಟಕದ ಸಮಿತಿ ಸದಸ್ಯ ಸಂಜೀವ ಕೋಳಿ(9980145170)ಗೆ ಸಂಪಕರ್ಿಸಿ ಕವಿತೆಗಳನ್ನು ವ್ಯಾಟ್ಸಆ್ಯಪ್ ಮೂಲಕ ಕಳುಹಿಸಲು ಕೊರಿದ್ದಾರೆ. ಅಲ್ಲದೇ, ಅಂಚೆ ಮೂಲಕವು ತಮ್ಮ ಫೊನ್ ನಂಬರ್ಗಳ ಸಹಿತ ಕಸಾಪ ಆಧ್ಯಕ್ಷರು, ಸೋನಾ ಕಾಂಪ್ಲೆಕ್ಸ್ ಉಗಾರ. ಇವರಿಗೆ ಕಳುಹಿಸಬಹುದು ಎಂದು ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಸಿದ್ಧರಾಮ ಮೋಟಗಿ ತಿಳಿಸಿದರು.
ಕ. ಸಾ. ಪ. ಕಾಗವಾಡ ತಾಲೂಕಾ ಅಧ್ಯಕ್ಷ ಡಾ. ಸಿದ್ಧಗೌಡಾ ಕಾಗೆ, ಅಥಣಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹಾಂತೇಶ ಉಕಲಿ, ನಿಕಟಪೂರ್ವ ಸಮ್ಮೇಳನ ಆಧ್ಯಕ್ಷೆ ಶಾಲಿನಿತಾಯಿ ದೊಡಮನಿ, ಕಾಗವಾಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಸಿದ್ಧರಾಮ ಮೋಟಗಿ, ಪ್ರೋ ಜೆ ಕೆ ಪಾಟೀಲ, ಆರ್ ಎ ಬಡಿಗೇರ, ದಿಲೀಪ ಶಿಂಧೆ, ಬಾಲಚಂದ್ರ ರೂಗೆ, ದಯಾನಂದ ಪಾಟೀಲ, ಸಂಜಯ ಕುರಣೆ , ಎ ಟಿ ಸವದತ್ತಿ. ಎಮ.ಡಿ.ಅಲಾಸೆ. ಸೇರಿದಂತೆ ಅನೇಕರು ಇದ್ದರು.