ಟ್ಯಾಕ್ಸಿಡರ್ಮಿ ಕಲೆಯ ಮುಖಾಂತರ ಸಹಜವಾಗಿ ಸತ್ತ ಪ್ರಾಣಿಗಳನ್ನುಸಂರಕ್ಷಿಸಿ : ನವೀನ ಪ್ಯಾಟಿಮನಿ

Preserve naturally deceased animals through the art of taxidermy: Naveen Patimani

ಟ್ಯಾಕ್ಸಿಡರ್ಮಿ ಕಲೆಯ ಮುಖಾಂತರ ಸಹಜವಾಗಿ ಸತ್ತ ಪ್ರಾಣಿಗಳನ್ನುಸಂರಕ್ಷಿಸಿ  : ನವೀನ ಪ್ಯಾಟಿಮನಿ  

 ಕೊಪ್ಪಳ, 22; ದಿ. 20ರಂದು  ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸರ್‌.ಎಂ.ವಿ ಸರ್ಕಾರಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ " ಚರ್ಮಪ್ರಸಾಧನ ಕಲೆಯ ಮುಖಾಂತರ ಜೈವಿಕ ಮಾದರಿಗಳ ಸಂರಕ್ಷಣೆ ಮತ್ತು ಅವುಗಳನ್ನು ಸರಿಪಡಿಸುವುದು" ಎಂಬ ಒಂದು ದಿನದ "ರಾಜ್ಯ ಮಟ್ಟದ" ಕಾರ್ಯಾಗಾರಕ್ಕೆ ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯದ ಟ್ಯಾಕ್ಸಿಡರ್ಮಿಸ್ಟರಾದ. ನವೀನ  ಪ್ಯಾಟಿಮನಿಯವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. 

 ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ನವೀನ ಪ್ಯಾಟಿಮನಿಯವರು ಟ್ಯಾಕ್ಸಿಡರ್ಮಿ ಕಲೆ ಎಂದರೆ ಸಹಜವಾಗಿ ಸತ್ತ ಪ್ರಾಣಿಯ ದೇಹದ ಚರ್ಮವನ್ನು ಬೇರಿ​‍್ಡಸಿ, ಚರ್ಮಕ್ಕೆ ರಾಸಾಯನಿಕಗಳನ್ನು ಹಚ್ಚಿ ಹದಮಾಡಿ ಹೊಂದಿಸಿ, ಪ್ರಾಣಿಯ ದೇಹವನ್ನು ಹತ್ತಿ ಮತ್ತು ಬಟ್ಟೆಯಿಂದ ತಯಾರಿಸಿ, ಹದಮಾಡಿದ ಚರ್ಮವನ್ನು ಹತ್ತಿ ಮತ್ತು ಬಟ್ಟೆಯಿಂದ ತೈಯಾರು ಮಾಡಿದ ಪ್ರಾಣಿಯ ದೇಹದ ಮೇಲೆ ಹಾಕಿ ಹೊಲಿದು ಪ್ರಾಣಿಯ ಮೂಲ ರೂಪದ ದೇಹವನ್ನು ಸಂರಕ್ಷಿಸಿ ಇಡುವುದು ಅಂತ ಹೇಳಿ, ಪ್ರಾಣಿ-ಪಕ್ಷಿ, ಕೀಟಗಳನ್ನು ಹೇಗೆ ಸಂರಕ್ಷಿಸಿ ಇಡಬೇಕು ಎಂದು ತಿಳಿಸಿದರು. 

 ಹೀಗೆ ಈ ಟ್ಯಾಕ್ಸಿಡರ್ಮಿ ಕಲೆಯಿಂದ ಸಂರಕ್ಷಿಸಿ ಇಟ್ಟ ಪ್ರಾಣಿಗಳನ್ನು ಸುಮಾರು 100 ರಿಂದ 200 ವರ್ಷಗಳ ಕಾಲ ಸಂರಕ್ಷಿಸಿ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಅಭ್ಯಸಿಸಲು  ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಇಡಬಹುದು. ಈ  ಟ್ಯಾಕ್ಸಿಡರ್ಮಿ ಕಲೆಯನ್ನು ಕಲಿಯಬೇಕೆಂದರೆ ನಿಮ್ಮಲ್ಲಿ ತಾಳ್ಮೆ  ಬಹಳ ಮುಖ್ಯ ಎಂದು ನವೀನ ಪ್ಯಾಟಿಮನಿಯವರು ತಿಳಿಸಿದರು ಹಾಗೂ ವನ್ಯಜೀವಿ ಕಾಯ್ದೆ 1972 ಪ್ರಕಾರ ಅರಣ್ಯ ಇಲಾಖೆಯ ಅನುಮತಿ ತೆಗೆದುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಹಜವಾಗಿ ಸತ್ತ ಪ್ರಾಣಿಗಳನ್ನು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಅಭ್ಯಸಿಸಲು ಸಂರಕ್ಷಿಸಿ ಇಡಬಹುದು ಎಂದರು. 

 ವಿದ್ಯಾರ್ಥಿಗಳಾದ ನೀವು ಹೊಸ ಹೊಸ ವಿಚಾರಗಳನ್ನು ಈ ಸಮಾಜದಲ್ಲಿ ಹಂಚಿಕೊಳ್ಳಿ ನಿಮ್ಮ ಆ ಎಲ್ಲ ವಿಚಾರಗಳು ರಾಜಕೀಯವಾಗಿ ಸ್ವೀಕಾರ ಆಗಬೇಕು, ಸಾಮಾಜಿಕವಾಗಿ ಒಪ್ಪಬೇಕು, ತಾಂತ್ರಿಕವಾಗಿ ಕಾರ್ಯಸಿದ್ದಿ ಆಗಬೇಕು, ಆರ್ಥಿಕವಾಗಿ ಲಾಭದಾಯಕವಾಗಬೇಕು, ಆಡಳಿತಾತ್ಮಕವಾಗಿ ಮಾಡಬೇಕು,ಕಾನೂನಿನಲ್ಲಿಯೂ ಒಪ್ಪಬೇಕು, ಭಾವನಾತ್ಮಕವಾಗಿ ಒಪ್ಪಬೇಕು, ಪರಿಸರ ಒಪ್ಪುವಂತಿರಬೇಕು ಇಷ್ಟು ಮಾನದಂಡಗಳಿಗೆ ನಿಮ್ಮ ವಿಚಾರಗಳು ಒಪ್ಪಬೇಕು ಆಗ ಮಾತ್ರ ಈ ಸಮಾಜದಲ್ಲಿ ನಿಮ್ಮ ವಿಚಾರಗಳು ಕಾರ್ಯರೂಪಕ್ಕೆ ಬಂದು ಯಶಸ್ವಿ ಆಗುತ್ತವೆ ಎಂದು ತಮ್ಮ ವಿಚಾರಗಳನ್ನು ಹಂಚಿಕೊಂಡರು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎ.ಸಿ.ಎಫ್ ಆದ ರತ್ನಪ್ರಭಾ ವಿದ್ಯಾರ್ಥಿಗಳಾದ ನೀವು ಯಾವುದೇ ವಿಷಯ ಇರಲಿ ಈಗಿನ ದಿನಮಾನಗಳಲ್ಲಿ ಆ ವಿಷಯಕ್ಕೆ ತಕ್ಕಂತೆ ಹೊಸ ಹೊಸ ಕೌಶಲಗಳನ್ನು ಕಲಿಯಿರಿ ಇದೇ ರೀತಿ ಈ ಟ್ಯಾಕ್ಸಿಡರ್ಮಿ ಕಲೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಯಾದ ನವೀನ ಪ್ಯಾಟಿಮನಿಯವರು ಹೇಳಿಕೊಡುತ್ತಾರೆ. 

 ಈ ಕಲೆಯ ಬಗ್ಗೆ ಸಂಪೂರ್ಣವಾದ ಜ್ಞಾನ ತಿಳಿದುಕೊಳ್ಳಿ,ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದ ಆಯೋಜಕರಾದ ಡಾ.ವಸಂತಕುಮಾರ ಸರ್ ಟ್ಯಾಕ್ಸಿಡರ್ಮಿ ಎಂದರೆ ಸತ್ತಂತ ಪ್ರಾಣಿಗಳ ಚರ್ಮವನ್ನು ರಾಸಾಯನಿಕಗಳನ್ನು ಉಪಯೋಗಿಸಿ ಹದಮಾಡಿ ಪ್ರಾಣಿಯನ್ನು ಅದೇ ರೀತಿ ತೈಯಾರು ಮಾಡುವುದಷ್ಟೇ ಅಲ್ಲ. ಆ ಟ್ಯಾಕ್ಸಿಡರ್ಮಿ ಮಾಡಿದ ಪ್ರಾಣಿಗಳನ್ನು 100-200 ವರ್ಷಗಳ ಕಾಲ ರಾಸಾಯನಿಕಗಳನ್ನು ಸಿಂಪಡಿಸಿ ಸಂರಕ್ಷಿಸಿ ಕಾಪಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಅಭ್ಯಸಿಸಲು ಉಪಯೋಗಿಸಬೇಕು ಎಂದರು. 

 ಕಾಲೇಜಿನ ಪ್ರಾಚಾರ್ಯರಾದ ಡಾ.ರಘುನಾಥ ಸರ್ ಚರ್ಮ ಪ್ರಸಾಧನ ಕಲೆ ಇದು ಒಂದು ಅದ್ಭುತವಾದ ಕೌಶಲ್ಯ, ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಾದ ನೀವು ನವೀನ ಪ್ಯಾಟಿಮನಿಯವರಿಂದ ಸಂಪೂರ್ಣವಾದ ಜ್ಞಾನವನ್ನು ತಿಳಿದುಕೊಳ್ಳಿ, ಹಾಗೆ ಪ್ರಾಣಿ-ಪಕ್ಷಿ ಗಳನ್ನು ಪರಿಸರವನ್ನು ಉಳಿಸಿ ಬೆಳಸಿ ಎಂದರು. ಈ ಒಂದು ದಿನದ ಕಾರ್ಯಾಗಾರದಲ್ಲಿ ಟ್ಯಾಕ್ಸಿಡರ್ಮಿಸ್ಟರಾದ ನವೀನ ಪ್ಯಾಟಿಮನಿಯವರು ಒಂದು ಸಹಜವಾಗಿ ಸತ್ತ ಮೀನನ್ನು ಸಂರಕ್ಷಿಸುವುದು ಹೇಗೆ ಎಂದು ಕಲಿಸಿಕೊಟ್ಟರು.  

ರಾಜ್ಯದ 6 ವಿಶ್ವವಿದ್ಯಾಲಯಗಳಿಂದ ಬಂದ  ಸಂಶೋಧನಾ ವಿದ್ಯಾರ್ಥಿಗಳು, ಎಮ್‌.ಎಸ್ಸಿ ವಿದ್ಯಾರ್ಥಿಗಳು,13 ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳು ಸಹ ಈ ಕಲೆಯನ್ನು ಕಲಿತು ಅವರು ಕೂಡ 12 ಮೀನುಗಳನ್ನು ಟ್ಯಾಕ್ಸಿಡರ್ಮಿ ಕಲೆಯ ಮುಖಾಂತರ ಸಂರಕ್ಷಿಸಿ ಇಟ್ಟರು. 

ಈ ಸಂದರ್ಭದಲ್ಲಿ ಭದ್ರಾವತಿಯ ಎಮ್‌.ಎಲ್‌.ಎ ಹಾಗೂ ಕಾಲೇಜಿನ ಅಧ್ಯಕ್ಷರಾದ. ಬಿ.ಕೆ.ಸಂಗಮೇಶ್ವರ, ಸಲಹಾ ಸಮಿತಿ ಸದಸ್ಯರಾದ ಪ್ರೊ.ಕೇಶವ, ಪ್ರೊ.ಕೆ.ವಿಜಯಕುಮಾರ, ಪ್ರೊ.ನಾಗರಾಜ,   ಪ್ರಾಚಾರ್ಯರಾದ ಡಾ.ರಘುನಾಥ್‌. ಎಚ್‌.ಎಸ್, ಆಯೋಜಕರಾದ ಡಾ.ವಸಂತಕುಮಾರ, ಡಾ.ಶಿಲ್ಪಾ, ಡಾ.ಸಿದ್ದೇಗೌಡ ಜಿ.ಎಸ್ ಹಾಗೂ ಇನ್ನುಳಿದ ಪ್ರಾಧ್ಯಾಪಕರಾದ ಡಾ.ಈರೇಶ, ಡಾ.ರಜನಿ, ಡಾ.ಪ್ರತಿಮಾ, ಡಾ.ಅರಸಯ್ಯ, ಡಾ.ಗಣೇಶ, ರಾಘವೆಂಧ್ರ, ಸೋಮಶೇಖರ, ಮೊಹಮ್ಮದ್, ಕಿರಣ, ಡಾ.ಮಂಜುನಾಥ, ಡಾ.ಶೊಯಬ್, ಚಿತ್ರಲೇಖಾ, ಮೌನೇಶ, ಡಾ.ಅನೀಲಕುಮಾರ, ಡಾ.ಸಿದ್ದೇಶ್ವರ ಹಾಗೂ ಎಲ್ಲ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.