ಲೋಕದರ್ಶನ ವರದಿ
ಕೊಪ್ಪಳ 27: ವಕ್ಫ್ ಆಸ್ತಿಗಳನ್ನು ಸಂರಕ್ಷಿಸಿ ಅದರ ಸದುಪಯೋಗ ಪಡೆದುಕೊಂಡು ಅದರಿಂದ ಬರುವ ಆದಾಯಗಳಿಂದ ಸಮಾಜದಲ್ಲಿನ ಜನಪರ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಮಾಜದ ಸಮಗ್ರ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ವಕ್ಫ್ ಆಸ್ತಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಅದನ್ನು ಉಳಿಸಿ-ಬೆಳೆಸಿಕೊಂಡು ಅಭಿವೃದ್ಧಿ ದಿಸೆಯಲ್ಲಿ ಕೊಂಡೊಯ್ಯಲು ಪ್ರತಿಯೊಬ್ಬರ ಸಹಕಾರ ಅವಶ್ಯವಾಗಿದೆ ಎಂದು ಕನರ್ಾಟಕ ರಾಜ್ಯ ವಕ್ಫ್ ಮಂಡಳಿ ರಾಜ್ಯ ಸದಸ್ಯರು ಹಾಗೂ ಹಿರಿಯ ನ್ಯಾಯವಾದಿ ಎಸ್.ಆಸೀಫ್ ಅಲಿ ಹೇಳಿದರು.
ಅವರು ಸೋಮವಾರ ನಗರದ ಬಜಾರ್ ಏರಿಯಾದಲ್ಲಿರುವ ಪ್ರಮುಖ ಯೂಸೂಫಿಯಾ ಮಸೀದಿಯಲ್ಲಿ ಮಸೀದಿ ಆಡಳಿತ ಮಂಡಳಿ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದರು.
ವಕ್ಫ್ ಮಂಡಳಿಗೆ ರಾಜ್ಯ ಸಮಿತಿಯ ಸದಸ್ಯ ಸ್ಥಾನ ತಮಗೆ ಸಿಕ್ಕಿರುವುದು ತಮ್ಮ ಅಧಿಕಾರವಧಿಯಲ್ಲಿ ಸಿಕ್ಕಿರುವ ಅವಕಾಶದ ಸದುಪಯೋಗ ಪಡೆದುಕೊಂಡು ಪ್ರಾಮಾಣಿಕ ಜವಾಬ್ದಾರಿ ನಿಬಾಯಿಸಿ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಹೆಚ್ಚಿನ ಮುತುವಜರ್ಿವಹಿಸಿ ಶ್ರಮಿಸುತ್ತೇನೆ. ವಕ್ಫ್ ಕಮೀಟಿಯ ರಾಜ್ಯಾಧ್ಯಕ್ಷ ಮತ್ತು ಇತರ ಸದಸ್ಯರ ಸಹಯೋಗದಲ್ಲಿ ನಮ್ಮ ಈ ಭಾಗಕ್ಕೆ ಸಿಗಬಹುದಾದ ಸಹಾಯ ಸೌಕರ್ಯ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ ಎಂದರು. ಕೊಪ್ಪಳ ಜಿಲ್ಲೆಯಲ್ಲಿನ ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಸಮಾಜದ ಹಿರಿಯರನ್ನು ಕರೆಯಿಸಿ ಅವರ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಪಡೆದು ಜಿಲ್ಲೆಯಲ್ಲಿ ವಕ್ಫ್ ಆಸ್ಪತ್ರೆ, ಸಮಾಜದ ಬಡ ಮಹಿಳೆಯರ ಅನುಕೂಲಕ್ಕಾಗಿ ಹೆರಿಗೆ ಆಸ್ಪತ್ರೆ, ನಸರ್ಿಂಗ್ ಕಾಲೇಜ್, ಶಾಲೆಗಳನ್ನು ಸೇರಿದಂತೆ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಸರಕಾರದಿಂದ ಸಾಲ ಸೌಲಭ್ಯ ಇತ್ಯಾದಿಗಳ ಬಗ್ಗೆ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಿ ಅವರ ಸಹಕಾರದಿಂದ ಉತ್ತಮ ಜನಪರ ಯೋಜನೆಗಳನ್ನು ಕೊಪ್ಪಳದಲ್ಲಿ ಹಮ್ಮಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದ ಅವರು ಸನ್ಮಾನದಿಂದ ಜವಾಬ್ದಾರಿ ಹೆಚ್ಚಿಸುತ್ತದೆ. ಇಂದು ನೀವು ಮಾಡಿರುವ ಸನ್ಮಾನ ನನಗೆ ಇನ್ನಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ ಎಂದು ಕನರ್ಾಟಕ ರಾಜ್ಯ ವಕ್ಫ್ ಮಂಡಳಿ ನೂತನ ರಾಜ್ಯ ಸದಸ್ಯರು ಹಾಗೂ ಹಿರಿಯ ನ್ಯಾಯವಾದಿ ಎಸ್.ಆಸೀಫ್ ಅಲಿ ಹೇಳಿದರು.
ಸಮಾರಂಭದ ಸಾನಿಧ್ಯವನ್ನು ಮುಸ್ಲಿಂ ಧರ್ಮಗುರು ಹಾಗೂ ಯೂಸೂಫಿಯಾ ಮಸೀದಿ ಪೇಶ ಇಮಾಮ್ ಮುಪ್ತಿ ಮೌಲಾನಾ ಮೊಹಮದ್ ನಜೀರ್ ಅಹ್ಮದ್ ಖಾದ್ರಿ-ವ-ತಸ್ಕೀನಿರವರು ಪಾಲ್ಗೊಂಡು ಆಶೀರ್ವಚನ ನೀಡಿದರು. ಅಂಜುಮನ್ ಕಮೀಟಿ ಅಧ್ಯಕ್ಷ ಹುಸೇನ ಪೀರಾ ಮುಜಾವರ ಹಾಗೂ ಮಸೀದಿ ಆಡಳಿತ ಕಮೀಟಿ ಅಧ್ಯಕ್ಷ ಸಯ್ಯದ್ ಹಜರತ್ ಪಾಷಾ ಖಾದ್ರಿ (ಹಜ್ಜು ಖಾದ್ರಿ) ಸೇರಿದಂತೆ ವಿಎಸ್ಎಸ್ಎನ್ ಅಧ್ಯಕ್ಷ ರಾಜಶೇಖರ ಅಡೂರು, ಹಜರತ್ ರಾಜಾ ಬಾಗ ಸವಾರ್ ದರ್ಗಾ ಕಮೀಟಿ ಅಧ್ಯಕ್ಷ ಇಬ್ರಾಹಿಂ ಸಾಬ ಅಡ್ಡೇವಾಲೆ, ಸಮಾಜದ ಹಿರಿಯರಾದ ಭಾಷುಸಾಬ ಕತೀಬ, ಎಂ.ಪಾಷಾ ಕಾಟನ್, ಮೊಹ್ಮದ್ ಮುನೀರ್, ಮಾನ್ವಿ ಪಾಷಾ, ಗೌಸ್ಸಾಬ ಸರದಾರ, ಇಕ್ಬಾಲ್ ಸಿದ್ದಿಕಿ ಮತ್ತಿತರರು ಪಾಲ್ಗೊಂಡಿದ್ದರು.