ಪಪಂಯ ಆಯ-ವ್ಯಯ ಬಜೆಟ್ ಮಂಡನೆ : 8.13 ಲಕ್ಷ ಉಳಿತಾಯ ಬಜೆಟ್ ಅಭಿವೃದ್ಧಿ ವಿಚಾರಕ್ಕೆ ಉಪಾಧ್ಯಕ್ಷ ಪಂಪಾಪತಿ ಗರಂ
ಕಂಪ್ಲಿ 07: ಸಮೀಪದ ಕುಡುತಿನಿ ಪಟ್ಟಣದ ಪಪಂಯ ಸಭಾಂಗಣದಲ್ಲಿ ಅಧ್ಯಕ್ಷ ಬಸಮ್ಮ ಚಂದ್ರ್ಪ ಅವರ ಅಧ್ಯಕ್ಷತೆಯಲ್ಲಿ 2025-26ನೇ ಆಯ-ವ್ಯಯ ಸಭೆ ಶುಕ್ರವಾರ ನಡೆಯಿತು.ನಂತರ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ ಇವರು 8.13 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು.ಪಪಂ ಹೊಸ ಕಟ್ಟಡ ನಿರ್ಮಾಣಕ್ಕೆ ಸುಮಾರು 5ಕೋಟಿ ಅನುದಾನ ಸ್ವಂತ ನಿಧಿಯಿಂದ ಕಾಯ್ದರಿಸಿದ್ದು, ಡಿಪಿಆರ್ ಸಿದ್ದಪಡಿಸಿ, ಸರ್ಕಾರಕ್ಕೆ ಪ್ರಸ್ತಾಪಿಸಲಾಗುವುದು. ಶವ ಸಂಸ್ಕಾರ ಮಾಡಲು ವಿದ್ಯುತ್ ಚಿತಾಗಾರದ ವ್ಯವಸ್ಥೆಗೆ ಸೂಕ್ತಕ್ರಮವಹಿಸಿದೆ. 10 ಲಕ್ಷ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಕರೆದಿದ್ದು, ಅತಿ ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಿ, ಎರಡು ತಿಂಗಳಲ್ಲಿ ಮುಗಿಸಿಕೊಡಲಾಗುವುದು. 1 ಸಾವಿರ ಮನೆಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯಡಿ 600 ಮನೆಗಳ ನಿರ್ಮಾಣ 2ನೇ ಹಂತದಲ್ಲಿ ಉಳಿದ ಮನೆಗಳನ್ನು ಸೂರು ಒದಗಿಸಲಾಗುವುದು 50 ಲಕ್ಷ ವೆಚ್ಚದಲ್ಲಿ ಹಂಪಿ ಮಾದರಿಯಲ್ಲಿ ಕುಡುತಿನಿಯ ದ್ವಾರ ಬಾಗಿಲು ನಿರ್ಮಿಸಲು ಸಿದ್ದತೆ ನಡೆದಿದೆ. ಆಲಮಟ್ಟಿ ಜಲಾಶಯದಿಂದ ಕೆಪಿಸಿಎಲ್ ಕೆರೆಗೆ ಬರುವ ನೀರನ್ನು ಕುಡುತಿನಿ ಹಳೆ ಕೆರೆಗೆ ಸರಬರಾಜು ಮಾಡಲು ಪೈಪ್ ಲೈನ್ ಮತ್ತು ಮೋಟರ್ ಅಳವಡಿಸಲು ಸೂಕ್ತಕ್ರಮವಹಿಸಿ, ಸಮರ್ಕವಾಗಿ ನೀರು ಪೂರೈಯಿಸಲಾಗುವುದು ಈಗಾಗಲೇ 11 ಜನ ಪೌರ ಕಾರ್ಮಿಕರನ್ನು ಖಾಯಂ ಮಾಡಲಾಗಿದೆ. ಪಟ್ಟಣದಲ್ಲಿ 5 ಲಕ್ಷ ಲೀಟರ್ ನೀರಿನ ಟ್ಯಾಂಕ್, ಆಟೋ, ಟಿಪ್ಪರ್, ಲಾರಿ ಖರೀದಿಸಲು ಟೆಂಡರ್ ಕರೆಯಲಾಗಿದೆ. ಶಿಥಿಲಗೊಂಡ ತಿಮ್ಮಲಾಪುರ ಪಂಪ್ ಹೌಸ್ ಅಭಿವೃದ್ಧಿ ಪಡಿಸುವುದು, ಇಂದಿರಾ ಕ್ಯಾಂಟಿನ್ ಮುಗಿಯುವ ಹಂತಕ್ಕೆ ಬಂದಿದ್ದು, ಅತಿ ಶೀಘ್ರದಲ್ಲಿ ಉದ್ಘಾಟಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುವುದು. ಹೀಗೆ ಹಲವು ಅಭಿವೃದ್ಧಿಗೆ ಸಂಬಂದಿಸಿದ ಬಜೆಟ್ ಅನ್ನು ಮಂಡಿಸಲಾಯಿತು.ವಾಗ್ವಾದ: ಇಲ್ಲಿನ ಬಜೆಟ್ ಸಭೆಯ ಕೊನೆ ಹಂತದಲ್ಲಿ ಉಪಾಧ್ಯಕ್ಷ ಕನಕೇರಿ ಪಂಪಾಪತಿ ಇವರು ರ್ವಾಗಳಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಕುಂಠಿತವಾಗಿದೆ. ಪಟ್ಟಣದ ಅಭಿವೃದ್ಧಿಗೆ ಸಂಬಂದಿಸಿದ ಹಲವು ಬಾರಿ ತಿಳಿಸಿದರೂ, ಕ್ಯಾರೇ ಎನ್ನುತ್ತಿಲ್ಲ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ವಿರುದ್ಧ ನೇರ ಮಾತಿನಲ್ಲೇ ಆಕ್ರೋಶ ಹೊರಹಾಕಿದರು. ಇಲ್ಲಿನ ಮುಖ್ಯಾಧಿಕಾರಿಗೆ ಪಟ್ಟಣದ ಅಭಿವೃದ್ಧಿ ಬೇಕಾಗಿಲ್ಲ. ಆದ್ದರಿಂದ ಕೂಡಲೇ ಬೇರೆ ಕಡೆ ವರ್ಗಾವಣೆ ಮಾಡಬೇಕು. ಈಗಾಗಲೇ ಮುಂಬಡ್ತಿ ಹೊಂದಿ ಬೇರೆ ಕಡೆ ವರ್ಗಾವಣೆಗೊಂಡು, ಮತ್ತೇ ಇಲ್ಲಿಗೆ ಬಂದಿರುವುದು ಅನುಮಾನಕ್ಕೆ ಹೆಡೆ ಮಾಡಿಕೊಟ್ಟಿದೆ. ಆದ್ದರಿಂದ ಮೇಲಿನ ಅಧಿಕಾರಿಗಳು ಇಂತಹ ಬೇಜವಾಬ್ದಾರಿ ಅಧಿಕಾರಿ ವಿರುದ್ಧ ಕಠಿಣ ಕ್ರಮವಹಿಸಿ, ಅಭಿವೃದ್ಧಿಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.ಸದಸ್ಯರಾದ ಜಿ.ಎಸ್.ವೆಂಕಟರಮಣ, ಹಾಲಪ್ಪ ಕೆ.ಎಂ, ಎಸ್.ಸುನೀಲ್ ಕುಮಾರ, ಸಿ.ಡಿ.ದುಗ್ಗೆಪ್ಪ ಟಿ.ಮಂಜುನಾಥ, ರಾಮಲಿಂಗಪ್ಪ, ಬಿ.ಕೆ.ಲೆನಿನ್, ಯು.ದೇವಮ್ಮ, ಎಸ್.ರತ್ನಮ್ಮ, ಆರ್.ಸಾಲಮ್ಮ .ಸೇರಿ ಸಅನೇಕರಿದ್ದರು