ಕರುನಾಡ ಭೂಷಣ ಪ್ರಶಸ್ತಿ ಪ್ರದಾನ

ಲೋಕದರ್ಶನ ವರದಿ

ಬೈಲಹೊಂಗಲ 04: ಸಿರಿಗಂಧ ಕನ್ನಡ ಸಂಘ, ಕರ್ನಾಟಕ ಜಾಗೃತಿ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವುರುಗಳ ಸಂಯುಕ್ತ ಆಶ್ರಯದಲ್ಲಿ ಗೋವಾದ ಸಾಂಕಳಿಂನ ರವೀಂದ್ರ ಭವನದಲ್ಲಿ ನಡೆದ  ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಬೈಲಹೊಂಗಲದ ಕುಮಾರಿ ಸಂಗೀತಾ ವಿಭೂತಿಮಠ ಅವರ ಸಂಗೀತ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಕರುನಾಡ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಹತ್ತಿಮತ್ತೂರದ ವಿರಕ್ತಿಮಠದ ನಿಜಗುಣ ಶಿವಯೋಗಿ ಸ್ವಾಮಿಜಿ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಅಖಿಲ ಗೋವಾ ಕನ್ನಡ ಮಹಾ ಸಂಘದ ರಾಜ್ಯಾಧ್ಯಕ್ಷ ಹನುಮಂತರೆಡ್ಡಿ, ಎಸ್.ಎಚ್.ಪಾಟೀಲ, ಮಹೇಶಬಾಬು ಸುರ್ವೆ  ಮತ್ತಿತರರು ಇದ್ದರು.